#ಗೆಳೆಯರಾದ_ನಾಗೇಂದ್ರ_ಸಾಗರ್_ಕುಂಟಗೋಡಿನ_ಶತಾಯುಷಿ_ಕೃಷ್ಣಪ್ಪರ_ಬಗ್ಗೆ_ಬರೆದ
#ಆಪ್ತ_ಲೇಖನದಿಂದ_ಹಳೆಯ_ನೆನಪುಗಳು_ಮರುಕಳಿಸಿದಾಗ.
#ಚಿತ್ರಕೃಪೆ_ನಾಗೇಂದ್ರಸಾಗರ್
ಇವತ್ತು ಬೆಳಗಿನ ಗೆಳೆಯ ನಾಗೇಂದ್ರ ಸಾಗರ್ ಜನಪರ ಹೋರಾಟಗಾರ ಕುಂಟಗೋಡು ಸೀತಾರಾಂ ಅವರ ಮನೆಗೆ ಹೋಗಿ ಅವರ ಶತಾಯುಷಿ ತಂದೆ- ಜ್ಞಾನಿ - ಮಾನವತಾವಾದಿ ಕುಂಟಗೋಡು ಕೃಷ್ಣಪ್ಪರ ಯೋಗ ಕ್ಷೇಮ ವಿಚಾರಿಸಿದ ಪೋಸ್ಟ್ ನೋಡಿದಾಗ ನನಗೆ ಕುಂಟಗೋಡು ಕೃಷ್ಣಪ್ಪರ ನೆನಪುಗಳು ಮರುಕಳಿಸಿತು ಈ ವಾರದಲ್ಲಿ ಅವರ ಮನೆಗೆ ಹೋಗಿ ಅವರ ಹತ್ತಿರ ಮಾತಾಡಿ ಬರಬೇಕೆಂಬ ತೀಮಾನ ಮಾಡಿದ್ದೇನೆ ಅವರ ಸಂಪರ್ಕ ಆಗಲು ಕಾರಣವಾದ ಘಟನೆ ಇಲ್ಲಿ ದಾಖಲಿಸಿದ್ದೇನೆ .....
1993 ರಲ್ಲಿ ಸಾಗರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರುಗಳ ಒಕ್ಕೂಟ ರಚಿಸಿಕೊಂಡಾಗ (ಪಂಚಾಯಿತ್ ರಾಜ್ ಕಾಯ್ದೆಯಲ್ಲಿಲ್ಲ) R.C. ಮಂಜಪ್ಪ ಕೆಳದಿ ಅಧ್ಯಕ್ಷರಾಗಿ ಸಂಚಾಲಕರಾಗಿ ಕುಂಟಗೋಡು ಸೀತಾರಾ೦, ಪ್ರದಾನ ಕಾರ್ಯದರ್ಶಿ ಆಗಿ ನಾನು, ಕಾರ್ಯದರ್ಶಿ ಆಗಿ ಯಡಜಿಗಳೆ ಮನೆ ಮಹಾದೇವ, ಸಹ ಕಾರ್ಯದರ್ಶಿ ಆಗಿ ಪತ್ರಕರ್ತ ಹಿತಕರ ಜೈನರ ತಾಯಿ, ತುಮರಿಯ ಶ್ರೀಮತಿ ಮಮತಾ ಹೀಗೆ ಒಂದು ಸಂಘಟನೆಯಿಂದ ತಾಲ್ಲೂಕಿನ ಗ್ರಾಮ ಪಂಚಾಯಿ ಆಡಳಿತದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಕ್ರಿಯ ಸಮರ್ಪಕ ಸಹಕಾರ ಸಹಭಾಗಿತ್ವ ತರಲು ಈ ಒಕ್ಕೂಟ ರಚಿಸಿ ದಾಗಿಂದ ಕುಂಟಗೋಡು ಸೀತಾರಾಂ ಆಪ್ತರಾದರು.
ನಂತರ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದ ಮೇಲೆ ಕೃಷಿ ಇಲಾಖೆ ಹಗರಣ, ಇಕ್ಕೇರಿ ಚಿನ್ನದ ಗಣಿ ಹೋರಾಟ, ಜನತಾ ರಂಗದಿಂದ ಸಾಗರ ನಗರ ಸಭೆ ಚುನಾವಣೆಗಳಲ್ಲಿ ನಾವೆಲ್ಲ ಒಂದಾಗಿ ಭಾಗವಹಿಸಿದಾಗ ಸೀತಾರಾಂ ರಾಂ ತಂದೆ ಆತ್ಮೀಯರಾದರು ಅವರ ಅಪಾರ ತಿಳುವಳಿಕೆಗಳು, ಪ್ರತಿನಿತ್ಯ ಪ್ರಜಾವಾಣಿ ಪತ್ರಿಕೆ ಸುದ್ದಿ, ರೇಡಿಯೋ ಸುದ್ದಿಗಳನ್ನು ತಪ್ಪದೆ ಓದಿ ಕೇಳಿ ಆ ಬಗ್ಗೆ ನಮ್ಮ ಹತ್ತಿರ ಚರ್ಚಿಸುತ್ತಿದ್ದರು.
ಪ್ರತಿ ನಿತ್ಯ ಡೈರಿ ಬರೆಯುವ ಹವ್ಯಾಸ, ಅವರೇ ಸ್ವತಃ ಅಡುಗೆ ಮಾಡುವುದು, ಆತಿಥ್ಯ ಸತ್ಕಾರಗಳಿಂದ ಕೃಷ್ಣಪ್ಪನವರು ನನಗೆ ಅತ್ಯಾಪ್ತರಾದರು ನಂತರ ಅನೇಕ ಬಾರಿ ಅವರ ಮನೆಯಲ್ಲಿ ಅವರ ಅತಿಥಿ ಆಗಿ ವಾಸ್ತವ್ಯ ಮಾಡಿದ್ದೆ ಅನೇಕ ಬಾರಿ ಅವರ ಕೈ ರುಚಿಯ ಊಟ-ಉಪಹಾರ ಮಾಡಿದ್ದ ಮರೆಯಲಾರೆ.
ನಂತರ ಇವರ ಕೊನೆಯ ಪುತ್ರ ಲಕ್ಷ್ಮೀನಾರಾಯಣ ಮದುವೆ ಆದ ಮೇಲೆ ಇವರ ಸೊಸೆ ಅಡುಗೆ- ಅತಿಥಿ ಸತ್ಕಾರ ಮುಂದುವರಿಸಿದರು ನಂತರ ರಾಜಕೀಯ ಕ್ಷೇತ್ರದಿಂದ ದೂರವಾದ್ದರಿಂದ ಮತ್ತು ಕುಂಟಗೋಡಿನಲ್ಲಿ ಹೋಮಿಯೋಪತಿ ಔಷದಿ ನೀಡುತ್ತಿದ್ದ ಖ್ಯಾತ ವಕೀಲರಾದ ರಮಣರ ತಂದೆ ಹತ್ತಿರ ಆಗಾಗ್ಗೆ ಚಿಕಿತ್ಸೆಗೆ ಹೋಗುತ್ತಿದ್ದಾಗ ಸೀತಾರಂ ಮನೆಗೆ ಬೇಟಿ ಮತ್ತು ಅವರ ತಂದೆಯ ಜೊತೆ ಕೆಲ ಹೊತ್ತು ಮಾತಾಡಿ ಚಹಾ ಸೇವಿಸಿ ಬರುತ್ತಿದ್ದೆ ಆದರೆ ರಮಣರ ತಂದೆ ಇಹಲೋಕ ತ್ಯಜಿಸಿದ ನಂತರ ಆಕಡೆ ಹೋಗುವುದು ನಿಂತೇ ಹೋಯಿತು.
2019 ರಲ್ಲಿ ಹುಂಚಾಕ್ಕೆ ಸೀತಾರಾಂ ಅವರ ತಂದೆಯ ಅಕ್ಕನ ಮನೆಗೆ ಹೋಗಿ ಬರುವಾಗ ಕೃಷ್ಣಪ್ಪರನ್ನು ನನ್ನ ಕಛೇರಿಗೆ ಸೀತಾರಾಂ ಕರೆ ತಂದಿದ್ದರು ನಂತರ ಬೇಟಿ ಆಗಿರಲಿಲ್ಲ.
ತುಂಬಾ ಪ್ರಬುದ್ದರು ಆದ ಕೃಷ್ಣಪ್ಪನವರು ಎಲೆ ಮರೆಯ ಕಾಯಿಯಂತೆ ಜೀವನ ಸವೆಸಿದವರು.
ಇವತ್ತು ನಿಮ್ಮ ಬರಹದಿಂದ ಇದೆಲ್ಲ ನೆನಪಾಯಿತು ಈ ವಾರ ಬಿಡುವು ಮಾಡಿಕೊಂಡು ಕುಂಟಗೋಡಿಗೆ ಹೋಗಿ ಕೃಷ್ಣಪ್ಪ ರನ್ನ ಮಾತಾಡಿಸಿ ಬರಲು ತೀರ್ಮಾನಿಸಿದ್ದೇನೆ.
ಈ ಬರಹಕ್ಕಾಗಿ ನಿಮಗೆ ಧನ್ಯವಾದಗಳು.
Comments
Post a Comment