Blog number 1754. ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಸಾಗರ ತಾಲೂಕಿನ ಆವಿನಳ್ಳಿಯಲ್ಲಿದೆ ಮತ್ತು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ ಹೆನ್ನೆ ಎ೦ಬ ಗ್ರಾಮದಲ್ಲಿ ರಾಣಿ ವಂಶಸ್ಥರು ಇದ್ದಾರೆ.
#ಗೇರುಸೊಪ್ಪೆಯ_ಜೈನರಾಣಿ_ವಂಶಸ್ಥರ_ಮತ್ತು_ರಾಣಿಚೆನ್ನಾಭೈರಾದೇವಿ_ಸಮಾದಿ_ಸ್ಥಳ_ಸಾರುವ_ಪ್ರಥಮ_ಲೇಖನ_ಇದು.
#ಕಾಳುಮೆಣಸಿನ_ರಪ್ತಿನಿಂದ_ಯೂರೋಪ್_ದೇಶದಲ್ಲೂ_ಪ್ರಸಿದ್ಧಿ_ಆಗಿದ್ದ.
#ಕಾನೂರು_ಕೋಟೆಯ_ಗೇರುಸೊಪ್ಪೆಯ_ಜೈನರ_ರಾಣಿ
#ಅವ್ವರಸಿ_ಎಂದು_ಪೂಜಿಸಲ್ಪಡುವ_ರಾಣಿ_ಚೆನ್ನಾಭೈರಾದೇವಿ.
#ಅವರ_ವಂಶಸ್ಥರು_ಸಾಗರ_ತಾಲ್ಲೂಕಿನಲ್ಲಿ_ಇದ್ದಾರೆ.
#ಅವರನ್ನು_ಗುರುತಿಸುವ_ಕೆಲಸ_ಆಗಬೇಕು.
#ಕೆಳದಿ_ರಾಜ_ವೆಂಕಟಪ್ಪನಾಯಕ_ಇಕ್ಕೇರಿ_ಕೋಟೆಯಲ್ಲಿ_ಬಂದನದಲ್ಲಿಟ್ಟ_ರಾಣಿ.
#ರಾಣಿ_ಚೆನ್ನಾಭೈರಾದೇವಿ_ಸಮಾದಿ_ಸಾಗರ_ತಾಲ್ಲೂಕಿನ_ಅವಿನಹಳ್ಳಿಯಲ್ಲಿದೆ.
#ಇದನ್ನು_ಸಂರಕ್ಷಿಸಬೇಕಾದ_ಪುರಾತತ್ವ_ಇಲಾಖೆ_ಮತ್ತು_ಹುಂಚಾದ_ಜೈನ_ಮಠಗಳಿಗೆ_ನಿರಾಸಕ್ತಿ_ಏಕೆ?
ಪಶ್ಚಿಮ ಘಟ್ಟಗಳ ಕಾಳು ಮೆಣಸು ಸಂಗ್ರಹಿಸಿ ಸಂಸ್ಕರಿಸಿ ಯೂರೋಪು ಖಂಡಗಳಿಗೆ ರಪ್ತು ಮಾಡುತ್ತಿದ್ದ ಜೈನ ಕುಲದ ರಾಣಿ ಚೆನ್ನಾ ಬೈರಾದೇವಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಗಳು ಆಗ ಬೇಕು ಮತ್ತು ರಾಣಿಯ ಬಗ್ಗೆ ಹೆಚ್ಚು ಮಾಹಿತಿಗಳು ಪ್ರಕಟವಾಗಬೇಕು.
ಸಾಗರ ತಾಲೂಕಿನ ಜೋಗ್ ಜಲಪಾತದ ಪಕ್ಕದಲ್ಲಿನ ದಟ್ಟ ಅರಣ್ಯದಲ್ಲಿ ಕಾನೂರಿನ ಕೋಟೆ ಇದೆ ಇದು ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಇನ್ನೂ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
ಜೋಗ ಜಲಪಾತದಿಂದ ರಭಸದಿಂದ ದುಮುಕಿದ ಶರಾವತಿ ನದಿ ಶಾಂತವಾಗಿ ಹರಿಯುವ ಗೇರುಸೊಪ್ಪೆ ರಾಣಿ ಚೆನ್ನಾ ಬೈರಾದೇವಿಯ ರಾಜ್ಯದ ಕೇಂದ್ರ ಸ್ಥಳ 400 ವರ್ಷದ ಹಿಂದೆ ದೇಶ ವಿದೇಶಗಳ ಹಡಗು ಹೊನ್ನಾವರದ ಅರಬ್ಬಿ ಸಮುದ್ರದಿಂದ ಗೇರುಸೊಪ್ಪೆಗೆ ಬಂದು ಕಾಳು ಮೆಣಸು ತುಂಬಿಸಿ ಕೊಂಡು ಯೂರೋಪಿಗೆ ಹೋಗುತ್ತಿತ್ತು.
ಈ ಬಗ್ಗೆ ಇತ್ತೀಚಿಗೆ ಖ್ಯಾತ ಪಿಕ್ಷನ್ ಕಾದಂಬರಿಕಾರ ಗಣೇಶಯ್ಯ ಇಲ್ಲಿನ ಸ್ಥಳಿಯ ಇತಿಹಾಸಕಾರರು ಅಂತಾರಾಷ್ಟ್ರೀಯ ಮಾಫಿಯಾದ ನಿದಿ ಜೋರರಿಗೆ ಮಾಹಿತಿ ನೀಡಿ ಗೇರುಸೊಪ್ರೆಯ ಕಾಳು ಮೆಣಸಿನ ರಾಣಿಯ ಈವರೆಗೂ ಸಿಗದ ಗುಪ್ತ ನಿದಿ ಅಪಹರಣದ ವಿಫಲ ಯೋಜನೆಯ ಸತ್ಯ ಕಥೆಯ ಎಳೆಯ ಮೇಲೆ ಬರೆದ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಮತ್ತು ನಮ್ಮ ತಾಲ್ಲೂಕಿನವರೇ ಆದ ಗಜಾನನ ಶರ್ಮರು ಬರೆದ ಬೃಹತ್ ಕಾದಂಬರಿಗಳು ರಾಣಿ ಚೆನ್ನಾ ಬೈರಾದೇವಿಯ ಹೆಸರು ಇತಿಹಾಸದ ಮೇಲೆ ಹೊಸ ಹೊಳಪು ನೀಡಿದೆ ಮತ್ತು ಚಚೆ೯ಯ ಮನ್ನಲೆಗೆ ಗೇರುಸೊಪ್ಪೆ ರಾಣಿ ವಿಚಾರಗಳು ಬಂದಿದೆ.
ಮಹಾಯುದ್ಧದ ಸಮಯದಲ್ಲಿ ಗೇರುಸೊಪ್ಪೆ ಹೆಸರಿನ ಸಂಪೂರ್ಣ ಬೆಳ್ಳಿ ತುಂಬಿದ ಹಡಗು ಹಿಂದೂ ಮಹಾಸಾಗರದಲ್ಲಿ ಮುಳುಗಿದೆ ಆ ಹಡಗಿನಲ್ಲಿ ತುಂಬಿದ ಬೆಳ್ಳಿ ರಾಣಿ ಚೆನ್ನಾ ಬೈರಾದೇವಿಗೆ ಸೇರಿದ ಭಂಡಾರದ ನಿಧಿ ಎಂಬ ಸುದ್ದಿ ಇದೆ.
ಇಂತಹ ಪ್ರಖ್ಯಾತ ಶ್ರೀಮಂತ ರಾಣಿಯನ್ನು ಸೋಲಿಸಿ ಅವಳ ರಾಜ್ಯ ವಶ ಪಡೆದು ರಾಣಿಯನ್ನು ಇಕ್ಕೇರಿಯ ಕೋಟೆಯಲ್ಲಿ ಜೀವನ ಪೂರ್ತಿ ಸೆರೆಮನೆಯಲ್ಲಿ ಬಂದಿಸಿಟ್ಟಿದ್ದು ಕೆಳದಿ ರಾಜ ವೆಂಕಟಪ್ಪ ನಾಯಕ.
ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಆವಿನಹಳ್ಳಿಯಲ್ಲಿದೆ, ಈ ಸಮಾದಿಯನ್ನ ಸ್ಥಳಿಯರು ದೇವಾಲಯ ಮಾಡಿಕೊಂಡಿದ್ದಾರೆ ಇದು ಇತಿಹಾಸಕ್ಕೆ ಸಂಬಂಧಪಟ್ಟ ಅಪೂರ್ವ ದಾಖಲೆ ಆಗಿದ್ದು ಇದನ್ನು ಶಿವಮೊಗ್ಗ ಜಿಲ್ಲಾಡಳಿತ, ಪುರಾತತ್ವ ಇಲಾಖೆ ಸಂರಕ್ಷಿಸಬೇಕಾಗಿದೆ.
ಜೈನ ಧರ್ಮದ ಹುಂಚಾದ ಮಠ ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ರಾಣಿ ಚೆನ್ನಾಭೈರಾದೇವಿ ಸುಮಾದಿ ಸಂರಕ್ಷಣೆಗೆ ಮತ್ತು ಅರಣ್ಯ ಇಲಾಖೆಯಲ್ಲಿರುವ ಕಾನೂರು ಕೋಟೆ ಪುರಾತತ್ವ ಇಲಾಖೆಗೆ ವರ್ಗಾಯಿಸಲು ಪ್ರಯತ್ನಿಸಬೇಕಾಗಿದೆ.
ಜೈನರ ರಾಣಿ ಚೆನ್ನಾಭೈರಾದೇವಿಯ ವಂಶಸ್ಥರು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ (AB site) ಹೆನ್ನೆ ಗ್ರಾಮದಲ್ಲಿ ಈಗಲೂ ಇದ್ದಾರೆ ಅವರಲ್ಲಿ ಲೋಕರಾಜ ಜೈನ್ ಸಾಳ್ವಕುಲಜ ನಗಿರೆಸುತರು ತುಮರಿಯ ಬ್ಯಾಕೋಡು ಪ್ರೌಢಶಾಲೆಯಲ್ಲಿ ಉಪನ್ಯಾಸಕರಾಗಿದ್ದಾರೆ.
ಇವರು ರಾಣಿ ಚೆನ್ನಾ ಬೈರಾದೇವಿಯ ಬಗ್ಗೆ ಅನೇಕ ಅಪ್ರಕಟಿತ ದಾಖಲೆಗಳ ಸಂಗ್ರಹಿಸಿದ್ದಾರೆ ಅವುಗಳನ್ನು ಪುಸ್ತಕ ಮಾಡಿ ಪ್ರಕಟಿಸುವ ಆಸಕ್ತಿ ಅವರಿಗಿದೆ ರಾಣಿಯ ಅನೇಕ ವಿಚಾರಗಳು ಇವರ ಅನೇಕ ತಲೆಮಾರುಗಳಿಂದ ಇವರಿಗೆ ಹರಿದು ಬಂದಿದೆ.
ಮೊನ್ನೆ ಹೆನ್ನೆ ಸಮೀಪದ ವಡೇನ ಬೈಲಿನ ಪಂಚಕಲ್ಯಾಣದ ಆಹ್ವಾನ ಪತ್ರಿಕೆಯೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸಿಂಹಗದ್ದೆಯ ಜೈನ ಮಠಕ್ಕೆ ಆಹ್ವಾನ ನೀಡಲು ಹೋಗಿದ್ದರಂತೆ ಅಲ್ಲಿ ಲಕ್ಷ್ಮೀ ಸೇನಾ ಭಟ್ಟಾರಕರ ಪ್ರವಚನ ಮಂದಿರದ ಗೋಡೆಯ ಮೇಲೆ ಕೀರ್ತಿವಂತ ಜೈನ ಮಹಾರಸಿಯರ ಚಿತ್ರಗಳು ತೂಗು ಹಾಕಲಾಗಿದ್ದು ಅದರಲ್ಲಿ ಗೇರುಸೊಪ್ಪೆಯ ರಾಣಿ ಚೆನ್ನಾ ಬೈರಾದೇವಿಯ ತೈಲ ಚಿತ್ರ ಇವರಿಗೆ ಸಹಜವಾಗಿ ಹೆಚ್ಚು ಆಕರ್ಷಿಸಿದ ಬಗ್ಗೆ ಪೇಸ್ ಬುಕ್ ನಲ್ಲಿ ಚಿತ್ರ ಸಹಿತ ಇವತ್ತು ಪೋಸ್ಟ್ ಮಾಡಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿ ಅವರ ಪೋಸ್ಟ್ ಓದಬಹುದು
https://m.facebook.com/story.php?story_fbid=3771555789731971&id=100006327601567&mibextid=Nif5oz
ಇತಿಹಾಸದ ಕುರಿತು ಹೆಚ್ಚು ಆಸಕ್ತಿ ಇರುವ ಉಪನ್ಯಾಸಕರೂ ಆಗಿರುವ ರಾಣಿ ಚೆನ್ನಾಭೈರಾದೇವಿಯ ವಂಶಸ್ಥರೂ ಆಗಿರುವ ಲೋಕರಾಜ ಜೈನ್ ಸಾಳ್ವ ಕುಲಜ ನಗರಿಸುತರಿಗೆ ಸ್ಥಳಿಯ ಜೈನ ಸಮಾಜ ಮತ್ತು ಹುಂಚದ ಜೈನ ಮಠದವರು ಹೆಚ್ಚಿನ ಸಹಾಯ ಸಹಕಾರ ನೀಡುವ ಮೂಲಕ ಜೈನ ರಾಣಿ ಚೆನ್ನಾ ಬೈರಾದೇವಿ ಇತಿಹಾಸ ಪ್ರಕಟನೆಗೆ ಸಂರಕ್ಷಣೆಗೆ ಮುಂದಾಗ ಬೇಕು.
ಜೈನ ರಾಣಿ ಚೆನ್ನಾ ಬೈರಾದೇವಿಯ ಸಮಾದಿ ಸಂರಕ್ಷಣೆಗೆ ಮುಂದಾಗಬೇಕು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಕೇಂದ್ರವಾಗಿರುವ ರಾಣಿಯ ಸಮಾದಿ ಪ್ರವಾಸೋದ್ಯಮ ದೃಷ್ಟಿಯಲ್ಲೂ ಮಹತ್ವದ್ದಾಗಲಿದೆ.
Comments
Post a Comment