#ಆನಂದಪುರಂ_ಇತಿಹಾಸ_ಸಂಖ್ಯೆ_128.
#ಹೊಸಗುಂದದ_ಕಂಚಿ_ಕಾಳಮ್ಮ_ದೇವಸ್ಥಾನದ_ಶಿಲಾಶಾಸನ
#ಹನ್ನೆರಡನೆ_ಶತಮಾನದಲ್ಲಿ_ಹೊ೦ಬುಜ_ಜೈನ_ಅರಸರ_ಆಳ್ವಿಕೆಯಲ್ಲಿ.
#ಜೈನ_ರಾಜ_ಮನೆತನ_ಇಬ್ಬಾಗವಾಯಿತು.
#ಒಂದು_ಶಾಖೆ_ಕಳಸ_ರಾಜದಾನಿಯಾಗಿ_ಇನ್ನೊಂದು_ಹೊಸಗುಂದ_ರಾಜದಾನಿಯಾಗಿ_ಆಳಿದರು.
#ಕಳಸದ_ಜೈನ_ರಾಜರು_ಕಳಸದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿಮಿ೯ಸಿದರು.
#ಹೊಸಗುಂದದ_ಜೈನರಾಜರು_ಹೊಸಗುಂದದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿರ್ಮಿಸಿದರು.
#ಇಲ್ಲಿನ_ಕಂಚಿ_ಕಾಳಮ್ಮ_ದೇವಾಲಯದ_ಶಿಲಾಶಾಸನದಲ್ಲಿ_ಬರೆದ_ಬರಹ.
ಆನಂದಪುರಂನ ಸಮೀಪದ ಹೊಸಗುಂದ 12 ನೇ ಶತಮಾನದಲ್ಲಿ ಹೊಂಬುಜ ಜೈನ ರಾಜರ ಆಳ್ವಿಕೆಯಲ್ಲಿತ್ತು ನಂತರ ಈ ಜೈನ ರಾಜ ಮನೆತನ ಒಡೆದು ಎರೆಡು ಶಾಖೆಗಳಾಯಿತು.
ಒ0ದು ಶಾಖೆ ಕಳಸವನ್ನು ರಾಜದಾನಿ ಆಗಿಸಿ ಆಡಳಿತ ನಡೆಸಿತು ಇನ್ನೋಂದು ಶಾಖೆ ಹೊಸಗುಂದ ರಾಜಧಾನಿ ಆಗಿ ಆಡಳಿತ ನಡೆಸಿತು.
ಒ0ದು ವಿಶೇಷ ಅಂದರೆ ಈ ರಾಜ ಮನೆತನದ ಕುಲ ದೇವರಾದ ಕಲ್ಲಿನಾಥೇಶ್ವರನ ದೇವಾಲಯ ಎರೆಡೂ ಶಾಖೆಯವರೂ ಅವರವರ ರಾಜದಾನಿಯಲ್ಲಿ ನಿರ್ಮಿಸಿದ್ದಾರೆ.
ಕಳಸ ರಾಜದಾನಿ ಮಾಡಿಕೊಂಡು ಆಳ್ವಿಕೆ ಮಾಡಿದ ಜೈನ ರಾಜರು ಕಳಸದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿಮಿ೯ಸಿದಂತೆ ಹೊಸಗುಂದದ ಜೈನ ರಾಜರು ಹೊಸಗುಂದದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿರ್ಮಿಸಿದರು.
ಹೊಸಗುಂದದ ಕಲ್ಲಿನಾಥೇಶ್ವರ ದೇವಾಲಯಕ್ಕೆ ಶಿಲಾ ಮುಖಮಂಟಪ ಇದ್ದು ಇದಕ್ಕೆ ಮೂರು ಕಡೆಯಿಂದ ದ್ವಾರವಿದೆ.
ನವರಂಗ - ಗರ್ಭಗುಡಿ - ಪ್ರದಕ್ಷಿಣಾ ಪಥಗಳನ್ನು ಹೊಂದಿದೆ.
1999ರವರೆಗೆ ಈ ದೇವಾಲಯದ ಗರ್ಭಗುಡಿಯಲ್ಲಿ ಬೃಹತ್ ಕಲ್ಲಿನಾಥೇಶ್ವರನ ಶಿವಲಿಂಗ ಇತ್ತು ಈಗ ಇದನ್ನು ನವೀಕರಣ ಮಾಡಿ ಸ್ಥಳಿಯರು ಉಮಾಮಹೇಶ್ವರ ಎಂದು ನಾಮಕರಣ ಮಾಡಿದ್ದಾರೆ.
ಕೆಳದಿ ಅರಸರ ಕಾಲದಲ್ಲಿ ಕೆಲಕಾಲ ಅಧಿಕಾರ ನಡೆಸಿದ ಹೊಸಗುಂದ ಅರಸರು ನಂತರ ಕೆಳದಿ ರಾಜ್ಯದಲ್ಲಿ ವಿಲೀನವಾಗುತ್ತಾರೆ.
ಹೊಸಗುಂದ ಅರಸರು ದರ್ಮ - ವಾಸ್ತು-ಶಿಲ್ಪಕಲೆ - ಸಾಹಿತ್ಯಗಳಿಗೆ ಉದಾರ ಆಶ್ರಯ ನೀಡಿದ್ದಾರೆಂದು ಇವರ ಕಾಲದಲ್ಲಿ ಹೊಸಗುಂದ ರಾಜ್ಯ ಅತ್ಯಂತ ವೈಭವದಿಂದ ಕೂಡಿತ್ತೆಂದು ತಿಳಿದು ಬಂದಿದೆ.
1400ರಲ್ಲಿ ಹೊಸಗುಂದ ನಾಶವಾಗಿ ದಟ್ಟ ಅರಣ್ಯವಾಯಿತು 1902ರಲ್ಲಿ ಮೈಸೂರು ರಾಜ್ಯದ ಆರ್ಕಾಲಜಿಕಲ್ ಡಿಪಾರ್ಟಮೆಂಟ್ ನಿಧೇ೯ಶಕರಾಗಿದ್ದ ಬೆಂಜಮಿನ್ ಲೇವಿಸ್ ಪ್ರಕಟಿಸಿದ ಎಪಿಗ್ರಾಫಿಯ ಕರ್ನಾಟಕದಲ್ಲಿ ಈ ಪ್ರದೇಶದಲ್ಲಿ ದೊರಕಿರುವ ಶಾಸನಗಳನ್ನು ಪ್ರಕಟಿಸಿದ್ದಾರೆ.
ಕ್ರಿಶ 1320 ರಲ್ಲಿ ಹೊಸಗುಂದದ ಕೊನೆ ದೊರೆ ಸೋಮನಾಯಕ.
ಹೊಸಗುಂದದ ಕಂಚಿ ಕಾಳಮ್ಮನ ದೇವಾಲಯದಲ್ಲಿನ ಶಿಲಾಶಾಸನ ಇಲ್ಲಿ ದಾಖಲಿಸಿದ್ದೇನೆ.
#ಹೊಸಗುಂದದ_ಕಂಚಿ_ಕಾಳಮ್ಮನ_ಬನದ_ಶಿಲಾಶಾಸನ.
ಶಿಲಾ ಶಾಸನದ ಅಳತೆ 2.6 "X1.6 "
ಸ್ವಸ್ತಿ ಸಮಸ್ತ ಪ್ರಸಸ್ತಿ ಸಹಿತo ಶಕ ವರುಷದ 1242 ನೇಯ ...... (ಹಳೇಗನ್ನಡದಲ್ಲಿದೆ)
ಇದನ್ನು ಈಗಿನ ಕನ್ನಡದಲ್ಲಿ ಈ ಕೆಳಕಂಡಂತೆ ಸಂಕ್ಷಿಪ್ತವಾಗಿ ಅರ್ಥ್ಯೆಸಿ ಲಾಗಿದೆ....
ಕ್ರಿ.ಶ.1320 ರಲ್ಲಿ ಪ್ರತಾಪ ಚಕ್ರವರ್ತಿ ಹೊಯ್ಸನ ವೀರ ಬಲ್ಲಾಲ ದೇವರಸನ ಆದೇಶದಂತೆ ಶ್ರೇಷ್ಟ ಮಂತ್ರಿ ತೊಯಾ ಸಿಂಗೇಯ ಧನ ನಾಯಕರ ಪುತ್ರ ದೇವಪ್ಪ ಧನ ನಾಯಕ ಹೊಸಗುಂದದ ಕಂಚಿ ಕಾಳಮ್ಮ ದೇವಿಯ ದೀಪ ಅಲಂಕಾರ ಸೇವೆಗಾಗಿ ಹಳ್ಳಿನಾಡಿನ ಗುಡ್ಡೆಯ ಬೀಡನ್ನು ಹೊಸಗುಂದ ಮತ್ತು ಹಳ್ಳಿನಾಡಿನ ಸಮಸ್ತ ಮುಖ್ಯಸ್ಥರ ಸಮಕ್ಷಮದಲ್ಲಿ ದಾನ ನೀಡಿದ ಶಾಸನ.
ಇದರಲ್ಲಿ ದೇವಪ್ಪ ಧನನಾಯಕರ ಶ್ರೀ ಹರಿಹರ ದೇವ ಎಂಬ ರುಜು ಇದೆ.
ಪೂಜಾ ಪಾತ್ರೆಗಳನ್ನು ಕಂಚಿ ಕಾಳಮ್ಮ ದೇವರಿಗೆ ಮತ್ತು ಬಾಲನಂದ ದೇವನಿಗೆ ಮತ್ತು ಬಾಲನಂದದೇವನಿಂದ ನೇಮಿಸಲ್ಟಟ್ಟ ಕಂಚಿ ಕಾಳಮ್ಮ ದೇವಿಯ ದೇವಾಲಯದ ವ್ಯವಸ್ಥಾಪಕ ಮತ್ತು ಹಣಕಾಸು ನಿರ್ವಹಣಾಧಿಕಾರಿ ಸೋಮೆಯ ನಾಯಕರಿಗೆ ಜೀವನಾಂಶವಾಗಿ ದೇವಾಲಯದ ಉತ್ಪತ್ತಿಯ ಶೇಕಡಾ 90 % ಬಳಸಿ ಕೊಳ್ಳಲು ಮತ್ತು ಉಳಿದ ಶೇಕಡಾ 10% ದೇವಿಯ ಗರ್ಭಗುಡಿ ಮತ್ತು ದೇವಾಲಯಕ್ಕೆ ಸಂಬಂದ ಪಟ್ಟ ಕಟ್ಟಡ ನಿರ್ಮಾಣಕ್ಕೆ ಬಳಸಲು ನೀಡಿದ ದಾನ ದತ್ತಿಯ ಶಾಸನ ಇದಾಗಿದೆ.
Comments
Post a Comment