Blog number 1749. ಗಿಣಿವಾರದ ನರಹಂತಕ ಆನೆ ಕೆಲವು ದಶಕದಿಂದ ಆಗುಂಬೆ ಭಾಗದಲ್ಲಿ ಪ್ರತಿ ವರ್ಷ ಕಾಣಿಸುತ್ತಿದೆ ಜನರು ತಮ್ಮ ಸೆಲ್ ಫೋನಿನಲ್ಲಿ ಸೆರೆ ಹಿಡಿದ ಈ ಆನೆಯ ಚಿತ್ರ.
#ಗಿಣಿವಾರದ_ನರ_ಹಂತಕ_ಆನೆ.
#ಸಾಗರ_ತಾಲ್ಲುಕಿನ_ಆವಿನಹಳ್ಳಿ_ಗಿಣಿವಾರದಲ್ಲಿ_ಮಹಿಳೆಯ_ಕೊಂದ_ಕಾಡಾನೆ.
#ಇವತ್ತಿಗೂ_ತೀರ್ಥಹಳ್ಳಿಯ_ಆಗು೦ಬೆ_ಭಾಗದಲ್ಲಿ_ಆಗಾಗ್ಗೆ_ಕಾಣಿಸುತ್ತಾ_ಜನರಲ್ಲಿ_ಆತಂಕ_ಸೃಷ್ಟಿಸುತ್ತಿದೆ.
#ಆನೆ_ಸೆರೆಹಿಡಿಯಲಾಗದಿದ್ದರೂ_ಜನರು_ತಮ್ಮ_ಸೆಲ್_ಪೋನಿನಲ್ಲಿ_ಸೆರೆ_ಹಿಡಿದಿದ್ದಾರೆ.
#ಈ_ಒಂಟಿ_ಆನೆಯ_ಸಂಚಾರದ_ಮಾಗ೯_ವಿಶಿಷ್ಟ.
#ಶಿವಮೊಗ್ಗ_ಜಿಲ್ಲೆಯ_ಅರಸಾಳಿನಲ್ಲಿ_ಆ_ಕಾಲದ_ಆನೆ_ಖೆಡ್ಡಾದಲ್ಲಿ_ಕಾಡಾನೆ_ಹಿಡಿದ_ಪ್ರಕರಣ.
ಶಿವಮೊಗ್ಗ ಜಿಲ್ಲೆ ಈ ಸಾರಿ ಸರ್ಕಾರದ ಲೆಖ್ಖದಲ್ಲಿ ಬರ ಪೀಡಿತ ಎಂದು ಘೋಷಣೆ ಆಗಿದೆ ಹಾಗಂತ ಪ್ರತಿ ಮುಂಗಾರಿನಲ್ಲಿ ಹೆಚ್ಚು ಮಳೆ ಸುರಿಯುವುದು ಶಿವಮೊಗ್ಗ ಜಿಲ್ಲೆಯ ಸಾಗರ - ಹೊಸನಗರ- ತೀರ್ಥಹಳ್ಳಿ ಭಾಗದಲ್ಲಿ ಮಾತ್ರ.
ಮಲೆನಾಡು ಕ್ಷೀಣಿಸುತ್ತಿದೆ ಬಯಲು ಸೀಮೆ ವಿಸ್ತರಿಸುತ್ತಾ ಬಂದಿದೆ, 1995ರಲ್ಲಿ ಕುಂಸಿ ಭಾಗದಲ್ಲಿ ಮಳೆ ಕಡಿಮೆ ಆಗುತ್ತಿದ್ದು ಈಗ ಚೋರಡಿ ದಾಟಿದೆ ಮುಂದಿನ 30 ವರ್ಷದಲ್ಲಿ ಆನಂದಪುರ೦ ಬಯಲು ಸೀಮೆ ಆಗಬಹುದು ಎಂಬ ಅನುಮಾನ ಇದೆ.
#ಇದು_ಮಲೆನಾಡಿನ_ಎಲ್ಲಾ_ಹಳ್ಳಿಗಳ_ಕಥೆ.
ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇವತ್ತಿಗೂ ಕಾಡಾನೆಗಳು ಅವುಗಳ ಕಾರಿಡಾರ್ ಇದೆ, ಶರಾವತಿ ಅಭಯಾರಣ್ಯದಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ ನಂತರ ಕಾಡಾನೆಗಳು ಇಲ್ಲ.
ಆದರೆ ಒಂದು ಒಂಟಿ ಸಲಗ ತೀರ್ಥಹಳ್ಳಿಯ ಆಗು೦ಬೆ ಭಾಗದಲ್ಲಿ ಪ್ರತಿ ವರ್ಷ ನಿಗದಿತ ಸಮಯದಲ್ಲಿ ಜನವಸತಿ ಕೇಂದ್ರಗಳಲ್ಲಿ ಕಾಣಿಸುಕೊಳ್ಳುತ್ತಾ ಆ ಭಾಗದಲ್ಲಿನ ಜನರಲ್ಲಿ ಭಯ - ಆತಂಕ ಸೃಷ್ಟಿಸಿದೆ.
ಕೆಲವು ವರ್ಷದ ಹಿಂದೆ ಸಾಗರ ತಾಲ್ಲೂಕಿನ ಗಿಣಿವಾರ ಎಂಬ ಗ್ರಾಮದಲ್ಲಿ ಈ ಆನೆ ಕಾಣಿಸಿಕೊಂಡಾಗ ಗ್ರಾಮಸ್ಥರು ಒಂದು ರಾತ್ರಿ ಕಾಡಾನೆಯ ಉಪಟಳ ನಿವಾರಿಸಲು ಸಭೆ ಆಯೋಜಿಸಿದ್ದರು ಅದಕ್ಕೆ ಭಾಗವಹಿಸಲು ಕೃಷಿ ಕಾರ್ಮಿಕ ಮಹಿಳೆ ರಾತ್ರಿಯ ಅಡುಗೆ ಮಾಡಿ ಮನೆಯಿಂದ ಹೊರಬಂದಾಗ ಈ ಕಾಡಾನೆ ಆ ಮಹಿಳೆಯನ್ನು ಹತ್ಯೆ ಮಾಡಿತ್ತು.
ಸಾಗರ ಹೊಸನಗರ ತಾಲ್ಲೂಕಿನ ಜನರಿಗೆ ಇದು ಅಘಾತಕಾರಿ ಸುದ್ದಿ ಏಕೆಂದರೆ ಕಳೆದ ನೂರು ವರ್ಷದಲ್ಲಿ ಈ ಭಾಗದಲ್ಲಿ. ಆನೆ ಹಾವಳಿಗೊತ್ತಿಲ್ಲದವರು.1970 ರಲ್ಲಿ ಅರಸಾಳು ಭಾಗದಲ್ಲಿ ಒ0ದು ಕಾಡಾನೆ ಉಪಟಳ ಹೊರತು ಪಡಿಸಿ.
ಅರಸಾಳು ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಿನ ಆನೆ ಒಂದನ್ನು ಹಿಡಿಯಲು ಸರ್ಕಾರ ಆ ಕಾಲದ ಆನೆ ಖೆಡ್ಡಾ ನಿಮಿ೯ಸಿ ಕಾಡಾನೆ ಹಿಡಿಯಲು ಯಶಸ್ವಿ ಆದರೂ ಕಾಡಾನೆ ಬದುಕುಳಿಯಲಿಲ್ಲ.
ಈಗೆಲ್ಲ ಈ ರೀತಿ ಜನರಿಗೆ ಉಪಟಳ ನೀಡುವ ಕಾಡಾನೆ ಹಿಡಿಯಲು ವ್ಯೆಜ್ಞಾನಿಕವಾದ ದಾರಿಗಳಿದೆ.
ಗಿಣಿವಾರದ ನರಹಂತಕ ಮಾತ್ರ ಸರ್ಕಾರದ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ವೀರಪ್ಪನಂತೆ ಒಂಟಿಯಾಗಿ ಮಲೆನಾಡಿನಲ್ಲಿ ಆತಂಕ ಸೃಷ್ಟಿಸುತ್ತಿದೆ.
ಕೆಲ ವರ್ಷದ ಹಿಂದೆ ಕೊಡಚಾದ್ರಿಯ ಮೂಲ ಮೂಕಾಂಬಿಕ ದೇವಾಲಯದ ಅವರಣಕ್ಕೂ ಒಮ್ಮೆ ದಿಡೀರನೆ ನುಗ್ಗಿತ್ತು.
ಮೊದಲೆಲ್ಲ ಜನರ ಕಣ್ಣಿಗೆ ಅಪರೂಪವಾಗಿ ಕಾಣಿಸುತ್ತಿದ್ದ ಈ ಗಿಣಿವಾರದ ನರ ಹಂತಕ ಪ್ರತಿ ವರ್ಷ ಆಗುಂಬೆಯ ಸಮೀಪದಲ್ಲಿ ರಸ್ತೆಗಳಲ್ಲಿ ಸಂಚರಿಸಿ ಆಭಾಗದ ಜನರಲ್ಲಿ ಆತಂಕ ಉಂಟು ಮಾಡುತ್ತಿದೆ ಮತ್ತು ಅದನ್ನು ಸರ್ಕಾರಗಳು ಸೆರೆ ಹಿಡಿಯಲಾಗದಿದ್ದರು ಜನರು ತಮ್ಮ ಸೆಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.
ಈ ವರ್ಷ ಮಳೆ ಕೂಡ ಕಡಿಮೆ ಇರುವುದರಿಂದ ಬತ್ತಿರುವ ಹಳ್ಳ ಕೊಳ್ಳಗಳು ಈ ಗಿಣಿವಾರದ ನರ ಹಂತಕನಿಗೆ ಸಾಗರ ತಾಲೂಕಿನ ಭಾಗಗಳಿಗೆ ಸಾಗಲು ತೆರೆದ ಬಾಗಿಲಾಗಿದೆ.
ದಶಕಗಳಿಂದ ಈ ಕಾಡಾನೆ ಯಾಕೆ ಒಂಟಿ ಆಗಿ ಸಂಚರಿಸುತ್ತಿದೆ? ಈ ನಿಗೂಡ ಆನೆಯ ಮೂಲ ಎಲ್ಲಿ? ಇದನ್ನು ಯಾಕೆ ಸರ್ಕಾರ ಸೆರೆ ಹಿಡಿಯಲಾಗುತ್ತಿಲ್ಲ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
Comments
Post a Comment