Skip to main content

Blog number 1731. ಪ್ರವಾಸಿ ಕಂಡ ಇಂಡಿಯಾ ಬರೆದ ಜನಪದ ಲೋಕ ನಿರ್ಮಾತೃ ಹೆಚ್.ಎಲ್.ನಾಗೇಗೌಡರು ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿದ್ದರು.

ಪ್ರತಿಯೊಬ್ಬ ಕನ್ನಡಿಗನೂ ಓದಲೇ ಬೇಕಾದ ನಮ್ಮ ಇತಿಹಾಸ ಪ್ರವಾಸಿ ಕಂಡ ಇಂಡಿಯಾ ಪುಸ್ತಕ ಇದನ್ನು ಬರೆದವರು ಹೆಚ್. ಎಲ್.ನಾಗೇಗೌಡರು ... ಸದ್ಯದಲ್ಲೇ ಪ್ರಕಟವಾಗಲಿರುವ ಆನಂದಪುರಂ - ಇತಿಹಾಸ ಪುಸ್ತಕದಲ್ಲಿ ಈ ವಿವರ ದಾಖಲಾಗಿದೆ.

#ಭಾಗ_60.
#ಆನಂದಪುರಂ_ಇತಿಹಾಸ.

#ಪ್ರವಾಸಿ_ಕಂಡ_ಇಂಡಿಯಾ_ಬರೆದವರು

#ಜನಪದ_ಲೋಕ_ನಿರ್ಮಿಸಿದ_ಹೆಚ್_ಎಲ್_ನಾಗೇಗೌಡರು .

#1963ರಲ್ಲಿ_ಶಿವಮೊಗ_ಜಿಲ್ಲಾದಿಕಾರಿಗಳು.

#ಇವರು_ಆನಂದಪುರಂ_ಚಂಪಕಸರಸ್ಸು_ಅನೇಕ_ಬಾರಿ_ಸಂದರ್ಶಿಸಿದ್ದರು.

#ಇವರು_ಬರೆದ_ಪುರಾತನ_ಕಾಲದಿಂದ_18ನೇ_ಶತಮಾನದವರೆಗಿನ_ಭಾರತ_ಇತಿಹಾಸ_ಪ್ರವಾಸಿ_ಕಂಡ_ಇಂಡಿಯಾ .

#ಮೈಸೂರು_ವಿಶ್ವವಿದ್ಯಾಲಯದಿಂದ_ಪ್ರಕಟ

#ಕುವೆಂಪು_ಪ್ರದಾನ_ಸಂಪಾದಕರು.

 
  ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ  ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು.
  ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ.
  ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಬರೆದಿದ್ದಾರೆ.
  #ಪ್ರಾಚೀನ_ಭಾರತದ_ಇತಿಹಾಸ
ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು 
#ಮಧ್ಯಕಾಲ_ಇತಿಹಾಸ
13 ನೇ ಶತಮಾನದಿಂದ 18ನೇ ಶತಮಾನದವರೆಗೆ
#ಆದುನಿಕ_ಇತಿಹಾಸ
18ನೇ ಶತಮಾನದಿಂದ ಈವರೆಗಿನದ್ದು
 ಈ ಎಂಟು ಸಂಪುಟಗಳು ಓದಿದರೆ ಭಾರತದ ಇತಿಹಾಸದ ಸಂಪೂರ್ಣ ಜ್ಞಾನ ಲಭ್ಯವಿದೆ, ಅವರು ದಾಖಲೆ ಮಾಡುತ್ತಾ ಹೋಗಿರುವ ಕ್ರಮ ಓದಲು ಶುರು ಮಾಡಿದರೆ ಎಂಟು ಸಂಪುಟವೂ ರಾತ್ರಿ ಹಗಲೆನ್ನದೆ ಓದಿ ಮುಗಿಯುವವರೆಗೆ ಮುಂದುವರಿಯುವುದಷ್ಟೆ ಅಲ್ಲ ಪುನಃ ಪುನಃ ಓದುವ ಮನಸ್ಸು ಆಗುತ್ತದೆ.
  ಕನ್ನಡದ ಇತಿಹಾಸ ಸಂಶೋದಕರು ಈ ಗ್ರಂಥಗಳನ್ನು ಓದದಿದ್ದರೆ ಅವರ ಸಂಶೋದನ ಜ್ಞಾನ ಪೂರ್ಣ ಆಗಲಾರದು.
  ಹೆಚ್.ಎಲ್.ನಾಗೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹೆರಗಾನಹಳ್ಳಿಯಲ್ಲಿ 22- ಸೆಪ್ಟೆಂಬರ್ -1915 ರಲ್ಲಿ ಜನಿಸಿ 2005 ರಲ್ಲಿ ಇಹಲೋಕ ತ್ಯಜಿಸಿದರು.
  ವಿಜ್ಞಾನ ಮತ್ತು ಕಾನೂನು ಪದವೀದರಾಗಿ 1940 ರಲ್ಲಿ ಮೈಸೂರು ಸಿವಿಲ್ ಸರ್ವಿಸ್ ಪಾಸ್‌ ಮಾಡಿದರು, 1963 ರಲ್ಲಿ ಶಿವಮೊಗ್ಗ ಜಿಲ್ಲಾದಿಕಾರಿಗಳಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಆನಂದಪುರಂ ನ ಕೋಟೆ, ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ದುರಂತ ಪ್ರೇಮ ಕಥೆಯ ರಾಣಿ ಚಂಪಕಾ ಸ್ಮರಣೆಗಾಗಿ ನಿಮಿ೯ಸಿದ #ಚಂಪಕ_ಸರಸ್ಸು ವಿಗೆ ಅನೇಕ ಬಾರಿ ಸಂದರ್ಶಿಸುತ್ತಾರೆ. ಅವರ ಪ್ರಯತ್ನದಿಂದ ಪ್ರಾಚ್ಯ ವಸ್ತು ಸಂಶೋದನ ಇಲಾಖೆಯಿಂದ ಇಲ್ಲಿಗೆ ಬೋರ್ಡ್ ಅಳವಡಿಸಿ ಕೆಲಕಾಲ ಕಾವಲುಗಾರರನ್ನು ನೇಮಿಸುತ್ತಾರೆ.
  ಮಂಡ್ಯ ಜಿಲ್ಲೆಯಲ್ಲಿನ ರಾಮನಗರದಲ್ಲಿ ಇವರು 1986ರಿಂದ ಕೆಲಸ ಪ್ರಾರಂಬಿಸಿ 1994 ರಲ್ಲಿ ಲೋಕಾರ್ಪಣೆ ಮಾಡಿಸಿದ #ಜನಪದ_ಲೋಕ ಜನಪದ ಕಲೆಯ ಸಂಸ್ಕೃತಿಯ  ಅತಿದೊಡ್ಡ ಮ್ಯೂಸಿಯಂ ಆಗಿದೆ.
  1979 ರಲ್ಲಿ ಇವರೇ ಜನಪದ ಪರಿಷತ್ ಸ್ಥಾಪಿಸುತ್ತಾರೆ.
 ಗಾಂಧೀಜಿಯವರು ದೇಶ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ಕರೆಯನ್ನು ಮೈಸೂರು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲನೆಯದಾಗಿ ಪ್ರಾದೇಶಿಕ ಬಾಷೆಗೆ ಅಗ್ರಸ್ಥಾನ ನೀಡುವ ದ್ವಿಭಾಷಾ ಸೂತ್ರ ಅಂಗಿಕರಿಸಿ ಅಗ್ರಸ್ಥಾನದಲ್ಲಿರುವ ಸಂದರ್ಭದಲ್ಲಿ ಹೆಚ್.ಎಲ್.ನಾಗೇಗೌಡರ ಈ ಗ್ರಂಥಗಳಿಗೆ ಕುವೆಂಪು ಪ್ರದಾನ ಸಂಪಾದಕರಾಗಿ ಪ್ರಕಟನೆ ಮಾಡಿರುವುದು ಕನ್ನಡಿಗರಿಗೆ ಅತಿ ದೊಡ್ಡ ಆಸ್ತಿ.
  ಹೆಚ್.ಎಲ್.ನಾಗೇಗೌಡರು 1963 ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಆನಂದಪುರಂನ ಕೆಳದಿ ರಾಜರ ಕೋಟೆ, ಚಂಪಕ ಸರಸ್ಸು ಬೇಟಿ ಮಾಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...