#ಯಾವುದೇ_ಪಕ್ಷದಲ್ಲಿರಲಿ_ಶ್ರೀಕಾಂತ್_ನನ್ನ_ಸ್ನೇಹಿತರು.
#ಜೆಡಿಎಸ್_ತೊರೆದು_ಕಾಂಗ್ರೇಸ್_ಸೇರುತ್ತಿದ್ದಾರೆ.
#ದೇವೇಗೌಡರು_ಕುಮಾರಸ್ವಾಮಿಗಳು_ಶ್ರೀಕಾಂತರನ್ನು_ವಿದಾನಪರಿಷತ್_ಸದಸ್ಯರಾಗಿ_ಮಾಡಬಹುದಾಗಿತ್ತು.
#ಮಿತಭಾಷಿ_ಸಂಘಟನಾ_ಚತುರ_ಗೆಳೆತನಕ್ಕೆ_ಇನ್ನೊಂದು_ಹೆಸರು_ಶ್ರೀಕಾಂತ್.
#ಕಾಂಗ್ರೇಸ್_ಪಕ್ಷ_ಇವರಿಗೆ_ಸೂಕ್ತ_ಸ್ಥಾನ_ಮಾನ_ಕಲ್ಪಿಸಲಿ.
ರಾಜಕಾರಣಿಗಳಲ್ಲಿ ದ್ವಿಮುಖ ವ್ಯಕ್ತಿಗಳನ್ನು ಕಾಣುವುದು ಸಹಜ ಆದರೆ ಶಿವಮೊಗ್ಗ ಜಿಲ್ಲಾ ಜಾತ್ಯಾತೀತ ಜನತಾದಳದ ಜಿಲ್ಲಾ ಅದ್ಯಕ್ಷರಾಗಿದ್ದ ಶ್ರೀಕಾಂತ್ ಮಾತ್ರ ಅವರೆಲ್ಲರಿಗಿಂತ ಬಿನ್ನ ವ್ಯಕ್ತಿತ್ವದವರು.
ಗೆಳೆತನಕ್ಕೆ ನಂಬಿಕೆಗೆ ಶ್ರೀಕಾಂತ್ ಮಾತ್ರ ಅಪರಂಜಿಯಂತವರು ಆದ್ದರಿಂದ ಜಿಲ್ಲೆಯಲ್ಲಿ ಅವರಿಗೆ ಅಪಾರ ಗೆಳೆಯರಿದ್ದಾರೆ.
ಮಿತಭಾಷಿಗಳು ಸಂಘಟನಾ ಚತುರರು ಆದ್ದರಿಂದಲೇ ಶಿವಮೊಗ್ಗ ಜಿಲ್ಲೆಯಲ್ಲಿ ಇವರು ಏಕಾಂಗಿ ಆಗಿ ಜೆಡಿಎಸ್ ಪಕ್ಷ ಸಂಘಟಿಸಿ ಅನೇಕ ಚುನಾವಣೆಯಲ್ಲಿ ಅನೇಕರಿಗೆ ಅಧಿಕಾರ ದೊರೆಯುವಂತೆ ಮಾಡಿದ್ದರು.
ಶಿವಮೊಗ್ಗ ವಿದಾನಸಬಾ ಕ್ಷೇತ್ರದ ಚುನಾವಣೆಯಲ್ಲಿ ಈಶ್ವರಪ್ಪರ ಎದುರು 25 ಸಾವಿರ ಮತಗಳಿಸಿದ್ದು ಇವರ ಜನಪ್ರಿಯತೆಗೆ ಸಾಕ್ಷಿ ನಂತರದ ಚುನಾವಣೆಯಲ್ಲಿ ಇವರಿಗೆ ಅವಕಾಶ ನೀಡದೆ ಬೇರೆಯವರಿಗೆ ಸ್ಪರ್ಧಿಸಲು ಜೆಡಿಎಸ್ ಪಕ್ಷ ಅವಕಾಶ ನೀಡಿದಾಗ ಅವರೆಲ್ಲ ಐದು ಸಾವಿರ ಮತಗಳಿಸಲು ಮಾತ್ರ ಸಾಧ್ಯವಾಗಿತ್ತು.
ಶ್ರೀಕಾಂತ್ 2013ರಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದಾಗ ನಾನು ಸಾಗರ ತಾಲೂಕಿನ ಜೆಡಿಎಸ್ ಅದ್ಯಕ್ಷ ಆಗ ಸಾಗರ ವಿಧಾನಸಭಾ ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು (ಈಗ ಕಾಂಗ್ರೇಸ್ ಪಕ್ಷದ ಶಾಸಕರು ) 23 ಸಾವಿರ ಮತ ಕಾಗೋಡು ಎದರು ಗಳಿಸಿದ್ದರು.
ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದಾಗೆಲ್ಲ ದೇವೇಗೌಡರು ಮತ್ತು ಕುಮಾರ ಸ್ವಾಮಿ ಶ್ರೀಕಾಂತರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡುತ್ತಾರೆ ಎಂದು ಶ್ರೀಕಾಂತ್ ರ ಅಭಿಮಾನಿಗಳಾದ ನಾವೆಲ್ಲ ನಿರೀಕ್ಷೆ ಮಾಡಿದ್ದು ಈಡೇರಲೇ ಇಲ್ಲ.
ಶ್ರೀಕಾಂತ್ ದೇವೇಗೌಡರ ಮಾನಸ ಪುತ್ರರಿದ್ದಂತೆ ಶಿವಮೊಗ್ಗಕ್ಕೆ ಅವರು ಬಂದಾಗೆಲ್ಲ ಶ್ರೀಕಾಂತ್ ಮನೆಯಲ್ಲೇ ವಾಸ್ತವ್ಯ ಹೂಡುತ್ತಿದ್ದರು.
ಅಂತಾ ಒಂದು ಸಂದರ್ಭದ ಬೆಳಿಗ್ಗೆನೆ ಶಿವಮೊಗ್ಗದ ಶ್ರೀಕಾಂತ್ ಮನೆಯಲ್ಲಿ ದೇವೇಗೌಡರಲ್ಲಿ "ಶ್ರೀಕಾಂತರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಮೂರು ಶಾಸಕರು, ಮೇಯರ್, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ, ಡಿಸಿಸಿ ಬ್ಯಾಂಕ್, ಎಪಿಎಂಸಿಗಳಲ್ಲಿ ಅಧಿಕಾರ ಪಡೆದಿದೆ ಇದಕ್ಕೆ ಕಾರಣ ಶ್ರೀಕಾಂತ್, ಇಂತಹ ಸಂಘಟನಾ ಶಕ್ತಿ ಇರುವ ಶ್ರೀಕಾಂತರನ್ನ ನೀವು ವಿಧಾನ ಪರಿಷತ್ ಗೆ ನಾಮಕರಣ ಮಾಡಬೇಕು" ಅಂತ ವಿನಂತಿಸಿದ್ದೆ.
ಅದಕ್ಕೆ ಗೌಡರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ವಿದಾನ ಪರಿಷತ್ ಗೆ ಕಳಿಸುವ ಭರವಸೆ ನೀಡಿದ್ದರು ಈ ಸಂದರ್ಭದಲ್ಲಿ ಶ್ರೀಕಾಂತ್, ಸಾಗರದ ನಗರಸಭಾ ಸದಸ್ಯರಾದ ಮಂಜುನಾಥ್ ಮತ್ತು ಮುಂಬೈನ ರಾಜೇಶ್ ನಿಚ್ಚಾನಿ ನನ್ನ ಜೊತೆ ಇದ್ದರು.
ಈ ವಿನಂತಿ ನಂತರ ಮತ್ತೊಮ್ಮೆ ಕುಮಾರ್ ಸ್ವಾಮಿಗಳು ಮುಖ್ಯಮಂತ್ರಿ ಆದರು ಆದರೆ ಶ್ರೀಕಾಂತರಿಗೆ ಸ್ಥಾನ ಕಲ್ಲಿಸಲಿಲ್ಲ ಇದಕ್ಕೆ ಸ್ಥಳಿಯ ಅನೇಕ ಮುಖಂಡರುಗಳ ಚಾಡಿ, ಹೊಟ್ಟೆ ಕಿಚ್ಚು ಕಾರಣ.
ವಿನಾಕಾರಣ ಶ್ರೀಕಾಂತರನ್ನ ವಿರೋದಿಸುವ ಗುಂಪೊಂದು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗೆಲ್ಲ ಸಕ್ರಿಯವಾಗಿರುತ್ತಿತ್ತು ಇದು ಶ್ರೀಕಾಂತರಿಗೂ ಗೊತ್ತು.
2014ರಿಂದ ನಾನು ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರವೂ ಈ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ಶ್ರೀಕಾಂತ್ ನನ್ನ ಬೇಟಿ ಮಾಡಿ ಚಹಾ ಕುಡಿದು ಹೋಗುತ್ತಾರೆ.
ನಾಳೆ ಶ್ರೀಕಾಂತ್ ಜೆಡಿಎಸ್ ತೊರೆದು ಕಾಂಗ್ರೇಸ್ ಸೇರುತ್ತಿದ್ದಾರೆ ಬರಲಿರುವ ಲೋಕ ಸಭಾ ಚುನಾವಣೆಯಲ್ಲಿ ಶ್ರೀಕಾಂತರನ್ನು ಬಳಸಿಕೊಳ್ಳುವ ಕಾಂಗ್ರೇಸ್ ನಂತರ ಜೆಡಿಎಸ್ ನಂತೆ ಮಾಡುವುದಿಲ್ಲ ಎಂಬ ನಿರೀಕ್ಷೆ ಶ್ರೀಕಾಂತ್ ಅಭಿಮಾನಿಗಳಿಗೆ ಇದೆ.
ಶ್ರೀಕಾಂತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತರು ಕೂಡ ಆದ್ದರಿಂದ ಶ್ರೀಕಾಂತರನ್ನು ವಿದಾನ ಪರಿಷತ್ ಗೆ ನಾಮಕಾರಣ ಮಾಡಲಿ ಅದಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೇಸ್ ಮುಖಂಡರು ಒಕ್ಕೂರಲಿನಿಂದ ಪ್ರಯತ್ನಿಸಲಿ ಎಂದು ಹಾರೈಸುತ್ತೇನೆ.
Comments
Post a Comment