Blog number 1762. ಮಲೆನಾಡಿನಲ್ಲಿ ಅನೇಕ ಅಗೋಚರ ಕವಿಗಳಿದ್ದಾರೆ ಅವರಲ್ಲಿ ಪ್ರಬಂದ ಅಂಬುತೀರ್ಥರ ಕಥೆಗಳಿಂದ ನಾನು ಅವರ ಅಭಿಮಾನಿ.
#ಮಲೆನಾಡಿನಲ್ಲಿ_ಅನೇಕ_ಅಗೋಚರ_ಕವಿಗಳಿದ್ದಾರೆ.
#ಅವರಲ್ಲಿ_ಪ್ರಬಂದಅಂಬುತೀರ್ಥ_ಒಬ್ಬರು
#ಪೇಸ್_ಬುಕ್_ಗೆಳೆಯರು.
#ನಾನು_ಇವರ_ಬರವಣಿಗೆ_ಓದಿ_ಇವರ_ಅಭಿಮಾನಿ
#ಇವತ್ತಿಗೂ_ಮುಖತಃ_ಬೇಟಿ_ಆಗಲಿಲ್ಲ
#ಈಗ_ಸಾಮಾಜಿಕ_ಜಾಲತಾಣದಿಂದ_ದೂರ_ಆಗಿದ್ದಾರೆ.
#ದ್ರಾವಣ_ರೂಪದಲ್ಲಿ_ಸಾವಯುವ_ಗೊಬ್ಬರ_ತಯಾರಿಯ_ಸಂಶೋದನೆಯಲ್ಲಿ_ತೊಡಗಿದ್ದಾರೆ.
ಮಲೆನಾಡಿನಲ್ಲಿ ಅನೇಕ ಅಗೋಚರ ಕವಿಗಳಿದ್ದಾರೆ ಅವರಾರು ಪ್ರಚಾರ ಪ್ರಿಯರಲ್ಲ, ಕೀತಿ೯ ಶನಿಯ ಬೆನ್ನು ಬಿದ್ದವರಲ್ಲ, ಸನ್ಮಾನ ಸಭೆಗಳಿಂದ ದೂರ ಆದರೆ ಅವರ ಬರಹಗಳು ರಾಜ್ಯ ಪ್ರಶಸ್ತಿ ನೀಡುವ೦ತ ಯೋಗ್ಯತೆ ಇರುವ ಸಾಹಿತ್ಯ ಆದರೆ ವಸೂಲಿ ಬಾಜಿ ಮಾಡದಿರುವುದರಿಂದ ಪ್ರಕಟವಾಗದ ಸಾಹಿತ್ಯ ಮುಂದಿನ ದಿನದಲ್ಲಿ ಇವರೇ ಕನ್ನಡದ ಮೇರು ಸಾಹಿತಿಗಳಾಗುವ ದಿನ ಬರದೇ ಇರಲಾರದು.
ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ. ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.
ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.
ಈ ಬ್ಲಾಗ್ ಓದಿ ಇವರ ಒಂದು ಕಥೆ ಇಲ್ಲಿದೆ.
https://arunprasadhombuja.blogspot.com/2019/07/blog-post_14.html
Comments
Post a Comment