Blog number 1748. ಒಂದು ಕಾಲದಲ್ಲಿ ಸಾಗರ ತಾಲ್ಲೂಕಿನ ಜನಪರ ಹೋರಾಟಗಾರರಿಗೆ ಸ್ಥಳಿಯ ಪತ್ರಿಕಾ ಸಂಪಾದಕರಿಗೆ ಅತ್ಯಾಪ್ತರಾಗಿದ್ದ ಕಾಮಾಕ್ಷಿ ಪ್ರಿಂಟರ್ ಉಲ್ಲಾಸ್ ಶೇಟ್ ಕುಟುಂಬ ನನ್ನ ಅತಿಥಿಗಳು.
#ಒಂದು_ಕಾಲದ_ಸಾಗರದ_ಕಾಮಾಕ್ಷಿ_ಪ್ರಿಂಟರ್_ಉಲ್ಲಾಸ್_ಕುಟು೦ಬ_ನನ್ನ_ಅತಿಥಿಗಳು
#ಅಕ್ಷರದ_ಮೊಳೆ_ಜೋಡಿಸುವ_ಆ_ಕಾಲದ_ಪ್ರಿಂಟಿಂಗ್_ಪ್ರೆಸ್
#ಮೂರು_ದಶಕಗಳ_ಕಾಲ_ಸಾಗರದ_ಸ್ಥಳಿಯ_ಪತ್ರಿಕೆಗಳಿಗೆ_ಜನಪರ_ಹೋರಾಟಗಳಿಗೆ_ಉಲ್ಲಾಸ್_ಬೆನ್ನೆಲುಬು_ಆಗಿದ್ದರು.
1980 ರ ದಶಕದಲ್ಲಿ ಸಾಗರದಲ್ಲಿನ ಖ್ಯಾತ ವಕೀಲರಾದ ಮಂಜುನಾಥ ಶೆಟ್ಟರ ಮನೆ ಎದುರಿಗಿದ್ದ ಕಾಮಾಕ್ಷಿ ಪ್ರಿಂಟರ್ ಸ್ಥಳಿಯ ಪತ್ರಿಕೆಗಳು ನಿತ್ಯ ಅಚ್ಚಾಗುತ್ತಿದ್ದ ಕೇಂದ್ರವಾಗಿತ್ತು.
ಎಲ್ಲಾ ಜನಪರ ಹೋರಾಟಗಳ ಸಂಘ ಸಂಸ್ಥೆಗಳ ಕರಪತ್ರ ಸುಂದರವಾಗಿ ಮುದ್ರಿಸಿ ಕೊಡುವ ಕೇಂದ್ರವೂ ಆಗಿತ್ತು.
ಇದರ ಮಾಲಿಕರು ಉಲ್ಲಾಸ್ ಶೇಟ್ ಇವರು ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಪದವಿದರರು ತಮ್ಮ ಕಾಲೇಜ್ ಸಹಪಾಠಿ ಸಾಗರದ ಖ್ಯಾತ ನರಸಿಂಹ ಭಟ್ & ಕೊ ಸಂಸ್ಥೆಯ ಮತ್ತು ಲಾಲ್ ಬಹದ್ದೂರ್ ಕಾಲೇಜಿನ ಉಪನ್ಯಾಸಕರಾಗಿದ್ದ ರಮೇಶ್ ಭಟ್ ರ ಸಹೋದರಿಯನ್ನು ಪ್ರೇಮ ವಿವಾಹ ಆದವರು.
ಈ ವಿವಾಹ 1980 ರ ದಶಕದಲ್ಲಿ ಸಾಗರದಲ್ಲಿ ದೊಡ್ಡ ಸುದ್ದಿ ಮಾಡಿತ್ತು ನಂತರ ಈ ದಂಪತಿ ಸ್ವತಂತ್ರವಾಗಿ ಬದುಕಲು ಪ್ರಿಂಟಿಂಗ್ ಉದ್ಯಮದಲ್ಲಿ ತುಂಬಾ ಕಷ್ಟ ಪಟ್ಟಿದ್ದರು.
ಉಲ್ಲಾಸ್ ಆ ಕಾಲದಲ್ಲಿ ಪಟ್ಟ ಕಷ್ಟ ನಾನು ಕಣ್ಣಾರೆ ಕಂಡಿದ್ದೇನೆ, ಉಲ್ಲಾಸರಲ್ಲಿ ಮಾನವೀಯತೆ ಯಾವತ್ತೂ ಕಳೆದು ಹೋಗಲಿಲ್ಲ, ಅಂತಹ ಕಷ್ಟದಲ್ಲೂ ಜನಪರ ಹೋರಾಟಗಳಿಗೆ ಹಣವಿಲ್ಲದೆ ಕರಪತ್ರ ಮಾಡಿಕೊಡುತ್ತಿದ್ದ ದೊಡ್ಡ ಹೃದಯವಂತಿಕೆ ಅವರಲ್ಲಿತ್ತು ಇವರ ಸಹಾಯಕರಾಗಿ ಲೋಕೇಶ್ ಎಂಬುವವರು ಆ ದಿನಗಳಲ್ಲಿ ಕಾಮಾಕ್ಷಿ ಪ್ರಿಂಟರ್ ಲ್ಲಿದ್ದರು.
ನಿನ್ನೆ ಉಲ್ಲಾಸ್ ದಂಪತಿಗಳು ತಮ್ಮ ಪುತ್ರ ಸೊಸೆ ಮತ್ತು ಮೊಮ್ಮಗಳ ಜೊತೆ ಚೌತಿ ಹಬ್ಬದ ಆಚರಣೆಗೆ ಬೆಂಗಳೂರಿಂದ ಸಾಗರಕ್ಕೆ ತೆರಳುವಾಗ ನನ್ನ ಕಛೇರಿಗೆ ಬಂದಿದ್ದರು.
ಈ ದಂಪತಿಗಳು ಈಗ ಮಗ ಮತ್ತು ಸೊಸೆ ಜೊತೆಗೆ ಬೆಂಗಳೂರಲ್ಲಿ ನೆಲೆಸಿದ್ದಾರೆ ಇಬ್ಬರೂ ಬಿಪಿ ಶುಗರ್ ಯಾವುದೇ ಕಾಯಿಲೆ ಇಲ್ಲದೆ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ "ಯಾವುದೇ ಕೊರತೆ ಇಲ್ಲದಂತೆ ಮಗ ಸೊಸೆ ಸುಖವಾಗಿ ಇಟ್ಟಿದ್ದಾರೆ ಅದೇ ನಮಗೆ ನೆಮ್ಮದಿ" ಅಂದಾಗ ಅವರ ಕಣ್ಣಿನಲ್ಲಿ ಸಂತೃಪ್ತಿ ಕಂಡೆ.
ಉಲ್ಲಾಸ್ ಬಗ್ಗೆ ಕೆಲ ವರ್ಷದ ಹಿಂದೆ ಬರೆದ ಪರಿಚಯ ಲೇಖನ ಈ ಲಿಂಕ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2021/01/blog-post_12.html
ನಮ್ಮ ಮಲ್ಲಿಕಾ ವೆಜ್ ನಲ್ಲಿ ಬಿಸಿಬೇಳೆಬಾತ್ - ಗೋಬಿ ಮಂಚೂರಿ ಮತ್ತು ವೆಜ್ ತಾಲಿ ಉಣಬಡಿಸಿ ಅವರನ್ನು ಬೀಳ್ಕೊಟ್ಟೆ ಸುಮಾರು 25 ವರ್ಷದ ನಂತರದ ಇವರ ಬೇಟಿ ನನಗೆ ತುಂಬಾ ಸಂತೋಷ ನೀಡಿತು.
ಉಲ್ಲಾಸ್ ಮಂಗಳವಾರ ಬೆಳಿಗ್ಗೆ ವಾಪಾಸ್ ಬೆಂಗಳೂರಿಗೆ ತೆರಳಲಿದ್ದಾರೆ ಅವರ ಸಂಪರ್ಕ ಸಂಖ್ಯೆ 99860 49924.
Comments
Post a Comment