#ಡಾ_ಶ್ರೀಕಂಠಕೂಡಿಗೆ_ಅವರಿಗೆ_ಹುಟ್ಟು_ಹಬ್ಬದ_ಶುಭಾಷಯಗಳು.
#ಅವರು_ಹುಟ್ಟಿದ_ದಿನಾಂಕ_5_ಸೆಪ್ಟೆಂಬರ್_1947.
#ಎಪ್ಪತ್ತಾರನೆ_ಹುಟ್ಟು_ಹಬ್ಬ.
#ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯ_ಕೂಡಿಗೆ_ಊರಿನವರು.
#ಪದವಿ_ವಿದ್ಯಾರ್ಥಿಗಳಿಗೆ_ಕೂಡಿಗೆ_ಅವರ_ಪಾಠಗಳಿತ್ತು.
#ಕುವೆಂಪು_ವಿಶ್ವವಿದ್ಯಾಲಯ_ಶಿವಮೊಗ್ಗ_ಜಿಲ್ಲೆಗೆ_ತಂದವರು.
#ಆದರೆ_ಕುವೆಂಪು_ವಿವಿ_ಕುಲಪತಿ_ಆಗುವ_ಆರ್ಹತೆ_ಇದ್ದರೂ_ಕುಲಪತಿ_ಮಾಡಲಿಲ್ಲ.
#ವಾಮನವತಾರಿಯ_ಹಿನ್ನೆಲೆ_ನೋಡಿದರೆ_ವಿಶ್ವದರ್ಶನ
#ಅವರಿಗೆ_76ನೇ_ಹುಟ್ಟು_ಹಬ್ಬದ_ಶುಭಾಷಯಗಳನ್ನು_ಹೇಳೋಣ.
ಡಾಕ್ಟರ್ ಶ್ರೀಕಂಠ ಕೂಡಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆ ಊರಿನವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ, ಪಿ ಹೆಚ್ ಡಿ ಪದವೀದರರು, ಚಿನ್ನದ ಪದಕ ವಿಜೇತರರು ಶ್ರೀಯುತರು ಉತ್ತಮ ಪ್ರಾಧ್ಯಾಪಕರು, ಸೃಜನಶೀಲ ಲೇಖಕರು ಮತ್ತು ಪ್ರಸಿದ್ಧ ಜನಪದ ತಜ್ಞರು.
ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ತರಲು ಇವರ ವಿಶೇಷ ಪ್ರಯತ್ನವಿದೆ ನಂತರ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಆಗೇ ಬಿಟ್ಟರು ಎಂಬ ಸುದ್ದಿ ಇತ್ತು ಆದರೆ ಜೆಲ್ಲೆಯ ರಾಜಕಾರಣಿಗಳು ಈ ಹುದ್ದೆಯನ್ನೆ ಮಾರಿಕೊಂಡರು.
ಈ ವಿಚಾರದಲ್ಲಿ ಶ್ರೀಕಂಠ ಕೂಡಿಗೆಯವರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ ಅವರ ಪ್ರತಿಭೆಗೆ, ಅವರು ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಗೆ ಅವರು ಪಟ್ಟ ಶ್ರಮಕ್ಕೆ ಮತ್ತು ಶಿವಮೊಗ್ಗ ಜಿಲ್ಲೆಯವರೇ ಎಂಬುದಕ್ಕೆ ಮಾನ್ಯತೆ ನೀಡದ ನೋವು ಶ್ರೀಕಂಠ ಕೂಡಿಗೆ ಆಪ್ತರಲ್ಲಿ ಇದೆ.
ಶ್ರೀಕಂಠ ಕೂಡಿಗೆ ಅವರ ಹಸ್ತಾಕ್ಷರ ಮುತ್ತುಗಳನ್ನು ಜೋಡಿಸಿದಂತೆ ಅತಿ ಸುಂದರ ಅನೇಕ ರಾಜ್ಯ ಮಟ್ಟದ ಪ್ರಶಸ್ತಿ ಇವರ ಕನ್ನಡ ಹಸ್ತಾಕ್ಷರಕ್ಕೆ ದೊರಕಿದೆ.
ಪದವಿ ವಿದ್ಯಾರ್ಥಿಗಳಿಗೆ ಇವರು ಬರೆದ ಅನೇಕ ಪಠ್ಯಗಳು ಪ್ರಸಿದ್ಧಿ ಪಡೆದಿತ್ತು, ಕುವೆಂಪು ವಿವಿ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಮತ್ತು ನೌಕರರ ವೃಂದಕ್ಕೆ ಇವರು ಚಿರಪರಿಚಿತರು.
ಕುವೆಂಪು ವಿವಿಯ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಂಗದ ನಿದೇ೯ಶಕರಾಗಿ, ಸೆನೆಟ್ - ಸಿಂಡಿಕೇಟ್ - ಶಿಕ್ಷಣ ಮಂಡಳಿ ಸದಸ್ಯರಾಗಿ, ಡೀನ್ ಆಗಿ ಪರಿಕ್ಷಾಂಗದ ಕುಲ ಸಚಿವರಾಗಿದ್ದರು.
ಕನಾ೯ಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯ ಜಾನಪದ ಯಕ್ಷಗಾನ ಅಕಾಡೆಮಿ ನಿದೇ೯ಶಕರಾಗಿ, ಹಂಪಿ ಕನ್ನಡ ವಿವಿಯ ಆಡಳಿತ ಮಂಡಳಿ ಸದಸ್ಯರಾಗಿದ್ದರು.
UGC/NET ಪರೀಕ್ಷಾ ಮಂಡಳಿ ಸದಸ್ಯರಾಗಿ, ದೆಹಲಿ ನ್ಯಾಷನಲ್ ಬುಕ್ ಟ್ರಸ್ಟ್ ಸದಸ್ಯರಾಗಿ, UPSC ಕನ್ನಡ ಪಠ್ಯ ರಚನಾ ಮಂಡಳಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರೂ ಆಗಿದ್ದರು.
ಕನ್ನಡ ಲಾವಣಿ ಮೇಲೆ ಪಿ .ಹೆಚ್.ಡಿ ಮಾಡಿದ್ದಾರೆ, 15 ಜನ ಎಂಪಿಲ್ ವಿದ್ಯಾರ್ಥಿಗಳಿಗೆ, 25 ಪಿ.ಹೆಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.
ಇವರ ವಿದ್ಯಾರ್ಥಿಗಳು ಮತ್ತು ಶಿಷ್ಯರು ಸೇರಿ ಬೇರೆ ಬೇರೆ ಸಂದರ್ಭದಲ್ಲಿ ಇವರಿಗಾಗಿ ಎರೆಡು ಅಭಿನಂದನಾ ಗ್ರಂಥ ಇವರಿಗೆ ಸಮರ್ಪಿಸಿದ್ದಾರೆ (ಕೂಡಿಗೆ ಮತ್ತು ಆರು ಮುನಿಸು).
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಗೌರವ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ ಜೊತೆ ಅಸಂಖ್ಯಾತ ಸಂಘ ಸಂಸ್ಥೆಗಳು ರಾಜ್ಯದಾದ್ಯಂತ ಇವರಿಗೆ ನೀಡಿದ ಪ್ರಶಸ್ತಿಗಳ ದೊಡ್ಡ ಪಟ್ಟಿಯೇ ಇದೆ.
ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ತೀರ್ಥಹಳ್ಳಿಯಲ್ಲಿ ನಡೆದ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಶಸ್ಸಿಗೆ ಕಾರಣರಾಗಿದ್ದರು.
ಬೆಳಗಾವಿಯ VTU ಪ್ರಸಾರಾಂಗದ ಸಲಹಾ ಮಂಡಳಿ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಮಂಡಳಿ ಅಧ್ಯಕ್ಷರೂ ಆಗಿದ್ದರು.
ಕುವೆಂಪು ವಿಶ್ವವಿದ್ಯಾಲಯದ ಎಂಟು ಪದವಿ ಕನ್ನಡ ಪುಸ್ತಕಗಳಿಗೆ ಪ್ರದಾನ ಸಂಪಾದಕರೂ ಆಗಿದ್ದರು.
ಇನ್ನೂ ಬರೆದರೆ ಇನ್ನೂ ಕೆಲವು ಪುಟಗಳಾಗುವ ಇವರ ಸಾದನೆ ಇಲ್ಲಿಗೆ ಸಂಕ್ಷಿಪ್ತಗೊಳಿಸಿದ್ದೇನೆ ಮತ್ತು ಇಷ್ಟೆಲ್ಲಾ ಸಾದನೆಯ ಶ್ರೀಕಂಠ ಕೊಡಿಗೆ ಶಿವಮೊಗ್ಗ ಜಿಲ್ಲೆಯವರೆಂಬುದು ನನಗೆ ಹೆಮ್ಮೆ ಕೂಡ.
ಪ್ರತಿಬೆ - ಅರ್ಹತೆ-ಯೋಗ್ಯತೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೇರುಸ್ಥಾನದಲ್ಲಿರುವ 76 ನೇ ಹುಟ್ಟುಹಬ್ಬ ಆಚರಿಸುತ್ತಿರುವ ಆತ್ಮೀಯ ಶ್ರೀಕಂಠ ಕೂಡಿಗೆ ಅವರಿಗೆ ಶುಭ ಹಾರೈಕೆಗಳನ್ನು ಮುಂಗಡವಾಗಿ ಹಾರೈಸುತ್ತೇನೆ ಮತ್ತು ದೇವರು ಅವರಿಗೆ ಆರೋಗ್ಯ ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
Comments
Post a Comment