Skip to main content

Blog number 1738. ಒಂದು ಹಾಡಿನಿಂದ ಒಂದು ಸಾವಿರ ಕಿ.ಮಿ. ಪ್ರಯಾಣಿಸಿ ಕಲ್ಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲೂಕಿನ ಘತ್ತರಗದ ಬಾಗಮ್ಮ ದೇವಸ್ಥಾನ ದರ್ಶನ.

#ಒಂದು_ಹಾಡು_ಸಾವಿರ_ಕಿಲೋಮೀಟರ್_ಪ್ರಯಾಣಕ್ಕೆ_ಕಾರಣವಾಯಿತು.

#ಕಳೆದ_ವರ್ಷ_ಆ_ಹಾಡು_ಕೇಳಿದ_ನಂತರ_ಅಲ್ಲಿಗೆ_ಹೋಗಲೇ_ಬೇಕೆಂದು_ನಿರ್ದರಿಸಿದ್ದೆ

#ಕಲಬುರ್ಗಿ_ಜಿಲ್ಲೆಯ_ಅಪ್ಜಲ್ಪುರ_ತಾಲ್ಲೂಕಿನ_ಘತ್ತರಗಿಯ_ಬಾಗಮ್ಮ_ದೇವಾಲಯಕ್ಕೆ.

#ವಿಜಯನಗರ_ಪತನದ_ನಂತರ_ಕೃಷ್ಣದೇವರಾಯರ_ಕುಲದೇವತೆ_ಇಲ್ಲಿಗೆ_ಬಂದು_ನೆಲೆಸಿದಳೆಂಬ_ಸ್ಥಳಪುರಾಣ

#ಇಲ್ಲಿಗೆ_ಬಂದು_ಪ್ರಾರ್ಥಿಸಿದರೆ_ಇಷ್ಟಾರ್ಥ_ನೂರಕ್ಕೆ_ನೂರು_ಸಿದ್ಧಿ_ಎಂಬ_ನಂಬಿಕೆ

#ನಿತ್ಯ_ಕನಿಷ್ಟ_ಎರೆಡು_ಸಾವಿರ_ಭಕ್ತರಿಗೆ_ದಾಸೋಹ

#ಇಲ್ಲಿ_ದೇವರ_ಅರ್ಚಕರು_ಹಿಂದುಳಿದ_ಗಂಗಾಮತಸ್ಥ_ಮಹಿಳೆಯರು.

https://youtube.com/shorts/I3-Clnq_iPw?feature=shared


    ನಾನು ಈ ಚೌಡಿಕೆಯ ಪ್ರಕಾರದ ಸ್ಥಳ ಪುರಾಣದ ಹಾಡು ಒಂದು ಸಾವಿರಕ್ಕೂ ಹೆಚ್ಚು ಸಾರಿ ಕೇಳಿದ್ದೇನೆ ಉತ್ತರ ಕರ್ನಾಟಕದ ಸೊಗಡಿನ ಕನ್ನಡದಲ್ಲಿ ತಮ್ಮದೇ ಸಂಪ್ರದಾಯಿಕ ವಾದ್ಯದೊಂದಿಗೆ ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗ ಎಂಬ ಊರಿನ ಬಾಗಮ್ಮ ತಾಯಿಯ (ಭಾಗ್ಯವಂತೆ ದೇವಿಯ) ಸ್ಥಳ ಪುರಾಣದ ಕಥೆ ಹೇಳುವು ಹಾಡು ಇದು.
   ನೀವು ಈ ಲಿಂಕ್ ಕ್ಲಿಕ್ ಮಾಡಿ ಇದನ್ನು ಕೇಳ ಬಹುದು 
https://youtu.be/E1Ny8LfCOUA?feature=shared

   ವಿಜಯನಗರದ ಅರಸರ ಕುಲದೇವತೆ ಭಾಗ್ಯವತಿ ವಿಜಯನಗರದ ಸಿರಿ ಸಮೃದ್ಧಿಗೆ ಕಾರಣಳಾದವಳೆಂದು ಕೃಷ್ಣದೇವರಾಯರ ನಂತರ ಕೊನೆಯ ಅರಸ  ರಾಮರಾಯನು ಈ ದೇವಿಯ ವಚನ ಮಾನ್ಯ ಮಾಡದಾದನು ಇದರ ಪರಿಣಾಮ ವಿಜಯ ನಗರದ ಮಹಾ ಸಂಪತ್ತು ಕ್ಷೀಣಿಸ ತೊಡಗಿತ್ತು.
  ಆ ಕಾಲದಲ್ಲಿ ದೇವಿಯ ಕಡೆಗಾಣಿಸಿದ್ದರಿಂದ ದೇವಿ ತುಂಗಾ ಭದ್ರಾ ನದಿಗೆ ಸರ್ಪದ ರೂಪದಲ್ಲಿ ಹಾರಿ ನಂತರ ಪ್ರವಾಹದಲ್ಲಿ ಸಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಹಿಸುವ  ಬೀಮಾ ನದಿ ಮಾರ್ಗವಾಗಿ ಘತ್ತರಗಿ ಎಂಬ ಊರಿನಲ್ಲಿ ನೆಲೆಸುತ್ತಾಳೆ.
   ದ್ಯಾವಣ್ಣ ಎಂಬ ದೈವಭಕ್ತ ಕಡು ಬಡವನಿಗೆ ಕಾಜಿನ ಒಂದು ಕಂಬದ ರೂಪದಲ್ಲಿ ಗೋಚರಿಸುತ್ತದೆ ಅದರಲ್ಲಿ ಬೇರೆ ನೀರು ಮತ್ತು ಘಟ ಸರ್ಪ ನೋಡುತ್ತಾನೆ ಆ ಕಂಬದಿಂದ ವಿಚಿತ್ರವಾದ ಧ್ವನಿ ಕೇಳಿ ಬರುತ್ತದೆ ಅದನ್ನು ಊರಲ್ಲಿ ತಿಳಿಸಿದರೆ ಯಾರೂ ನಂಬುವುದಿಲ್ಲ.
  ಬಡ ಕುರುಬನ ಈ ಮಾತು ಹುಚ್ಚರಾಡುವ ಮಾತು ಎಂದು ಊರ ಜನ ಹೀಯಾಳಿಸುತ್ತಾರೆ ನಂತರ ನಡೆದ ಕೆಲ ಪವಾಡಗಳಿಂದ ದೇವಿಗೆ ಗುಡಿ ನಿರ್ಮಿಸುತ್ತಾರೆ.
   ಈ ದೇವಾಲಯದಲ್ಲಿ ಸಿಡಿ ಆಡುವ ಹರಕೆ ಪದ್ಧತಿ ಪ್ರಸಿದ್ಧಿ ಪಡೆದಿತ್ತು ನಂತರ ಮಾನವ ಹಕ್ಕುಗಳ ಆಯೋಗದ ತೀರ್ಮಾನವನ್ನು ಮನ್ನಿಸಿ ರಾಜ್ಯ ಸರ್ಕಾರ ಇಲ್ಲಿ ಸಿಡಿ ಪದ್ಧತಿ ರದ್ದು ಮಾಡಿದೆ ಆದ್ದರಿಂದ ದೇವಾಲಯದ ಒಳಗೆ ಶತಮಾನಗಳಿಂದ ಆಚರಣೆಯಲ್ಲಿದ್ದ ಸಿಡಿ ಕಂಬಗಳನ್ನು ಸಂರಕ್ಷಿಸಿಟ್ಟಿದ್ದಾರೆ.
   ಸುಮಾರು ನಾಲ್ಕು ನೂರು ವರ್ಷಗಳಿಂದ ಇಲ್ಲಿ ಪ್ರಾರ್ಥನೆ ಮಾಡಿದರೆ ಭಕ್ತರ ಇಷ್ಟಾರ್ಥ ಸಿದ್ದಿ ನೂರಕ್ಕೆ ನೂರು ಶತಸಿದ್ಧ ಎಂಬ ನಂಬಿಕೆ ಭಕ್ತರಲ್ಲಿದೆ ನಂತರ ಘತ್ತರಗದ ಬಾಗಮ್ಮ ಸಿರಿ ಸಂಪತ್ತುಗಳನ್ನು ನೀಡುವ ಏಕೈಕ ದೇವತೆ ಎಂದು ಮಹಾರಾಷ್ಟ್ರ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಭಕ್ತರು ಬರಲು ಪ್ರಾರಂಬಿಸಿದ ಮೇಲೆ ಈ ಕ್ಷೇತ್ರ ಇನ್ನೂ ಹೆಚ್ಚು ಪ್ರಸಿದ್ದಿ ಪಡೆಯಿತು.
   ಪ್ರತಿನಿತ್ಯ ಇಲ್ಲಿನ ಅನ್ನ ದಾಸೋಹಕ್ಕೆ ಕನಿಷ್ಟ 2000 ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ ವಿಶೇಷ ದಿನದಲ್ಲಿ ಇದರ 5- 6 ಪಟ್ಟು ಹೆಚ್ಚು ಭಕ್ತರು ಬರುತ್ತಾರೆ.
  ಇಲ್ಲಿಂದ ದೇವರ ಗಾಣಗಾಪುರದ ದತ್ತ ಮಂದಿರ ಕೇವಲ 28 ಕಿ.ಮಿ.ದೂರದಲ್ಲಿದೆ.
  ನಾನು ಮೊನ್ನೆ ಅಂದರೆ ದಿನಾಂಕ 5- ಸೆಪ್ಟೆಂಬರ್ -2023ರ ಮಂಗಳವಾರ ಬೆಳಿಗ್ಗೆ 7ಕ್ಕೆ ನಮ್ಮ ಮನೆಯಿಂದ ಪ್ರಯಾಣ ಪ್ರಾರಂಬಿಸಿ 440 ಕಿ.ಮಿ.ದೂರದ ಇಲ್ಲಿಗೆ ಹುಬ್ಬಳ್ಳಿ- ನರಗುಂದ - ಕೊಲ್ಹಾರ - ಬಸವನ ಬಾಗೇವಾಡಿ ಮಾರ್ಗದಲ್ಲಿ ಈ ದೇವಾಲಯ ಮಧ್ಯಾಹ್ನ 2ಕ್ಕೆ ತಲುಪಿದಾಗ ದೇವರ ದರ್ಶನಕ್ಕೆ ಸಾವಿರಾರು ಜನ ಸರತಿ ಸಾಲಿನಲ್ಲಿದ್ದರು.
  ಈ ದೇವಾಲಯದ ಸಿಬ್ಬಂದಿ ವರ್ಗದ ಪ್ರಮುಖರಲ್ಲಿ ಒಬ್ಬರಾದ ಬೀಮರಾಯ ದೊಡ್ಡಮನಿ ನಮಗೆ ದೂರದಿಂದ ಬಂದವರೆಂದು ಸುಲಭದರ್ಶನ ಭಾಗ್ಯ ಕೊಡಿಸಿ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದರು.
  ನಿಮ್ಮ ಪ್ರಾರ್ಥನೆ ದೇವಿಯಲ್ಲಿ ಮಾಡಿಕೊಳ್ಳಿ ನೂರಕ್ಕೆ ನೂರು ಸಿದ್ಧಿ ಆಗೇ ಆಗುತ್ತೆ ನಿಮ್ಮ ಪ್ರಾರ್ಥನೆ ಈಡೇರಿದ ಮೇಲೆ ಇಲ್ಲಿಗೆ ಬಂದು ನಿಮ್ಮ ಹರಕೆ ತೀರಿಸಿ (ಹಿಂದೆ ಪ್ರಾರ್ಥನೆ ಈಡೇರಿದರೆ ಸಿಡಿ ಆಡುವುದಿತ್ತು ಈಗ ಇಲ್ಲ) ಎಂದರು.
  ಈ ದೇವಾಲಯದ ಗರ್ಭಗುಡಿಯ ಹಿಂಬಾಗದ 3 ಅಡಿ ಎತ್ತರದ 2 ಅಡಿ ಅಗಲದ ಅತ್ಯಂತ ಚಿಕ್ಕ ಬಾಗಿಲಿನಿಂದ ಗರ್ಭಗುಡಿ ಪ್ರವೇಶ ಇದೆ.
  ಗರ್ಭಗುಡಿಯ ಹೊರ ಭಾಗದ ಕಿಟಕಿಯ ಕಿಂಡಿಯಿಂದಲೂ ದೇವಿ ದರ್ಶನಕ್ಕೆ ಅವಕಾಶ ಇದೆ.
   ಗರ್ಭಗುಡಿಯಲ್ಲಿ ಬೀಮಾ ನದಿಯಲ್ಲಿ ತೇಲಿ ಬಂದ ಬಾಗಮ್ಮ ದೇವಿಯ ಕಾಜಿನ ಕಂಬ ನಿಲ್ಲಿಸಿದ್ದಾರೆ ಅದರ ಎದರು ದೇವಿಯ ಬೆಳ್ಳಿಯ ಮುಖವಾಡ ಮತ್ತು ಪಾದುಕೆಗಳ ಪೂಜೆ ನಿರ್ವಹಿಸುವವರು ಅರ್ಚರಲ್ಲ, ತಲೆ ತಲಾಂತರದಿಂದ ಪೂಜಾ ಕಾರ್ಯ ನಿರ್ವಹಿಸುವ ಹಿಂದುಳಿದ ಜಾತಿಯ ಗಂಗಾ ಮತಸ್ಥ ಮಹಿಳೆಯರೆಂದು ಬೀಮರಾಯ ದೊಡ್ಡಮನಿ ತಿಳಿಸಿದರು.
  ಇಲ್ಲಿಂದ ದೇವರ ಗಾಣಿಗಾಪುರದ ದತ್ತಾತ್ರೇಯ ಮಂದಿರಕ್ಕೆ ನಮ್ಮ ಮುಂದಿನ ಪ್ರಯಾಣ ಪ್ರಾರಂಬಿಸಿದೆವು, ಒಂದು ಹಾಡು ಸುಮಾರು ಒಂದು ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿ ಈ ಸ್ಥಳದ ದರ್ಶನ ಮಾಡಿಸಿತು ಎ೦ಬುದೇ ವಿಶೇಷ ಮೇಲಿನ ಲಿಂಕ್ ನಲ್ಲಿ ಒಮ್ಮೆ ನೀವೂ ಆ ಹಾಡು ಕೇಳಿ ನೋಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...