https://youtube.com/shorts/swtbkP_Yebs?feature=shared
#ನಿತ್ಯ_ವಾಕಿಂಗ್_ನನ್ನ_ಅನುಭವದ_ಟಿಪ್ಸ್
#ಚೌತಿಹಬ್ಬದ_ಮರುದಿನ
#ಬೆಳಿಗ್ಗೆಯೇ_ತುಂತುರು_ಮಳೆ
#ನಾನು_ಮತ್ತು_ನನ್ನ_ಪ್ರೀತಿಯ_ಶಂಭೂರಾಮನ_ವಾಕಿಂಗ್
#ನಮ್ಮಿಬ್ಬರ_ಬೆಳಗಿನ_ಜಗತ್ತು.
ಬೆಳಗಿನ ಒಂದು ಗಂಟೆಯ ನಡಿಗೆ (ವಾಕಿಂಗ್ ) ನಮ್ಮ ದೇಹವನ್ನು ಬಿಪಿ ಶುಗರ್ ನಿಂದ ನಿಯಂತ್ರಣದಲ್ಲಿಡುವ ಜೊತೆ ಸ್ಥೂಲ ಕಾಯ ನಿವಾರಣೆಗೆ ತುಂಬಾ ಅನುಕೂಲಕರ ಆದರೆ ಬೆಳಿಗ್ಗೆ ಎದ್ದು ವಾಕಿಂಗ್ ಮಾಡಲು ನಮ್ಮ ಮನಸ್ಸು ಮಾತ್ರ ಕುಂಟು ನೆಪ ಹೇಳುವುದರಿಂದ ಅನೇಕರು ಶುರು ಮಾಡುವ ವಾಕಿಂಗ್ ಸ್ವಲ್ಪ ದಿನದಲ್ಲಿ ನಿಲ್ಲಿಸಿ ಬಿಡುತ್ತಾರೆ.
ಮೊದಲ ದಿನವೇ ಒಂದು ಗಂಟೆ ವಾಕಿಂಗ್ ಯಾವ ಕಾರಣಕ್ಕೂ ಮಾಡ ಬೇಡಿ, 5 ನಿಮಿಷದ ವಾಕಿಂಗ್ ಪ್ರಾರಂಬಿಸಿ ಪ್ರತಿ ಹತ್ತು ದಿನಕ್ಕೆ ದ್ವಿಗುಣ ಮಾಡುತ್ತಾ ಹೋದರೆ ಒಂದು ಗಂಟೆ ವಾಕಿಂಗ್ ಸಾಮರ್ಥ್ಯಕ್ಕೆ ದೇಹ ತಲುಪುತ್ತದೆ ಮತ್ತು ನಿರಂತರ ವಾಕಿಂಗ್ ಮಾಡಲು ಮನಸ್ಸು ದೇಹ ತಯಾರಾಗಿರುತ್ತದೆ.
ಬೆಳಗಿನ ಮತ್ತು ಸಂಜೆಯ ವಾಕಿಂಗ್ ನಲ್ಲಿ ನನ್ನ ಆಯ್ಕೆ ಬೆಳಗಿನದ್ದು ಇದಕ್ಕಾಗಿ ಸಮಯ ಹೊಂದಿಸುವುದು ಸುಲಭ ನಮ್ಮ ಕೆಲಸ ವ್ಯವಹಾರಗಳಿಗೆ ಬೇಗ ಹೋಗ ಬೇಕಾದರೆ ಒಂದು ಗಂಟೆ ಬೇಗ ಎದ್ದರಾಯಿತು.
ವಾಕಿಂಗ್ ಮಾಡಲು ರಸ್ತೆ ಆಯ್ಕೆ ಮಾಡಬೇಡಿ ಈಗಿನ ವೇಗದ ವಾಹನಗಳಿಂದ ಅನೇಕ ಪಾದಚಾರಿಗಳು ಅಪಘಾತ ಸಾವುನೋವು ಅನುಭವಿಸಿದ್ದಾರೆ.
ವಾಕಿಂಗ್ ಮಾಡಲು ನಿಮ್ಮ ಮನೆಯ ಹತ್ತು ಹೆಜ್ಜೆಯ ಅಂಗಳ ಸಾಕು, ಅದಕ್ಕಾಗಿ ದುಭಾರಿ ಟ್ರಾಕಿಂಗ್ ಸೂಟ್ ಬೂಟು ಬೇಕೇ ಬೇಕು ಅಂತೇನಿಲ್ಲ ನಿಮ್ಮ ನಿತ್ಯದ ಉಡುಗೆ ಜೊತೆ ಕನಿಷ್ಟ ದರದ ಕ್ಯಾನ್ವಾಸ್ ಶೂ ಸಾಕು. (ಮದುಮೇಹಿಗಳಿಗೆ ಕ್ಯಾನ್ವಾಸ್ ಶೂ ಕಡ್ಡಾಯ).
ನೀವು ಪ್ರಾಣಿ ಪ್ರಿಯರಾಗಿದ್ದರೆ ನಿಮ್ಮ ಸಾಕು ನಾಯಿ ನಿಮ್ಮ ಜೊತೆ ಇರಲಿ ಅದು ನಿಮ್ಮ ಒಂದು ಗಂಟೆಯ ವಾಕಿಂಗ್ ಆಯಾಸವನ್ನು ಅವರ ಒಡನಾಟ ನಿರಾಯಾಸ ಮಾಡುತ್ತದೆ.
ನಿತ್ಯ ವಾಕಿಂಗ್ ಮಾಡುವ ನಿಮ್ಮ ಮನೆ ಅಂಗಳದ ದಾರಿ ಇಕ್ಕೆಲದಲ್ಲಿ ಹೂವಿನ ಕುಂಡಗಳನ್ನು ಇಟ್ಟು ಅವುಗಳ ನಿತ್ಯ ನಿರ್ವಹಣೆ ನೀವೇ ಮಾಡಿ ಇದು ವಾಕಿಂಗ್ ಜೊತೆ ಸುಂದರ ಅಂಗಳ ನಮಗೆ ಅರಿವಿಲ್ಲದೇ ತಯಾರಾಗಿ ನಮ್ಮ ನಡಿಗೆಯ ಕಂಪನದ ಜೊತೆ ಸಂವಹನ ಮಾಡುತ್ತದೆ.
ನಾನು ನನ್ನ ನಿತ್ಯದ ಜೊತೆಗಾರ ಶಂಭೂರಾಮನ ಜೊತೆ ನನ್ನ ಮನೆ ಹಿಂಬಾಗ ಮತ್ತು ನಮ್ಮ ಲಾಡ್ಜ್ ನ ಒಂದು ಪಾರ್ಶ್ವದ ಮಧ್ಯದ 90 ಅಡಿ ಉದ್ದದ ಮತ್ತು 10 ಅಡಿ ಅಗಲದ ಜಾಗವನ್ನು ಪೇವರ್ಸ ಅಳವಡಿಸಿ(ಟ್ರೆಡ್ ಮಿಲ್ ಖರೀದಿಸಬೇಕೆಂದಿದ್ದ ಹಣದಿಂದ) ವಾಕಿಂಗ್ ಟ್ರಾಕ್ ಮಾಡಿಕೊಂಡಿದ್ದೇನೆ.
ಇಕ್ಕೆಲದಲ್ಲಿ ಹೂವಿನ ಪಾಟ್ ಇಟ್ಟು ಚಿಕ್ಕ ಉದ್ಯಾನವನ ಮಾಡಿಕೊಂಡು ಪ್ರಾಥಃ ಕಾಲದ ಒಂದು ಗಂಟೆ ವಾಕಿಂಗ್ ಮಾಡುತ್ತೇನೆ.
ಇವತ್ತು ಬೆಳಿಗ್ಗೆ ನಮ್ಮಲ್ಲಿ ತುಂತುರು ಮಳೆ ಆದ್ದರಿಂದ ಹೂವಿನ ಕುಂಡಗಳಿಗೆ ನೀರು ಉಣಿಸುವ ಕೆಲಸಕ್ಕೆ ರಜೆ
Comments
Post a Comment