#ನಮ್ಮ_ದೀರ್ಘಕಾಲದ_ಗೆಳೆಯನನ್ನ_ಕೊಂದವರ್ಯಾರು
#ಕೆರೆ_ಹಾವು_ವಿಷರಹಿತ_ಹಾವು.
https://youtu.be/GLvw4bFzizs?feature=shared
ನಮ್ಮ ಸಂಸ್ಥೆಯ ಹಿಂಬಾಗದ ಕಂಪೌಂಡ್ ನ ಹೂ ಗಿಡಗಳ ಮಧ್ಯದಲ್ಲಿ ತನ್ನ ಇಲಿ ಶಿಕಾರಿ ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಕೆರೆ ಹಾವಿನ ವಯಸ್ಸು ಗೊತ್ತಿಲ್ಲ ಆದರೆ ಕಳೆದ ಆರೇಳು ವರ್ಷಗಳಿಂದ ನಮಗೆ ಪರಿಚಿತ.
ಇದು ಜೀವಂತ ಇದ್ದಾಗ ಆರು ಅಡಿಗಿಂತ ಉದ್ದವಾಗಿ ಗಾತ್ರದಲ್ಲಿ ಶಕ್ತಿಯಲ್ಲಿ ಬಲಿಷ್ಟವಾಗಿ ನೋಡುವವರಿಗೆ ಭಯ ಉಂಟು ಮಾಡುವಂತಿತ್ತು.
ಹಾವಿನ ಬಗ್ಗೆ ಮಾಹಿತಿ ಇಲ್ಲದವರು ಇದನ್ನು ನಾಗರ ಹಾವೆಂದೇ ಭಾವಿಸುತ್ತಿದ್ದರು ಆದರೆ ನಮಗೆಲ್ಲ ಇದರ ವೇಗದ ಓಟದಿಂದ ಮತ್ತು ಆರೇಳು ವರ್ಷಗಳ ಪರಿಚಯದಿಂದ ಇದು ನಿರಪಾಯಕಾರಿ ರೈತ ಸ್ನೇಹಿ ಕೆರೆ (Rat Snake) ಹಾವು ಎಂದು ಗೊತ್ತಿತ್ತು.
ನಿನ್ನೆ ಕಂಪೌಂಡ್ ಹತ್ತಿರ ಇದು ಸತ್ತು ಬಿದ್ದಿದ್ದು ನೋಡಿ ಆಶ್ವರ್ಯವಾಯಿತು ಮತ್ತು ಬೇಸರವಾಯಿತು ಇದರ ತಲೆ ಯಾವುದೊ ಪ್ರಾಣಿಯ ಬಾಯಿಗೆ ಸಿಕ್ಕಿ ಜಕ್ಕಂ ಆಗಿದೆ ಇಡೀ ದೇಹದಲ್ಲಿ ಎಲ್ಲೂ ಗಾಯ ಇಲ್ಲ ನಮ್ಮ ಸಿಬ್ಬಂದಿಗಳ ಪ್ರಕಾರ ಮುಂಗುಸಿ ಕಾರಣ ಅಂತಾರೆ, ಮು೦ಗುಸಿ ಕೆರೆ ಹಾವು ಸಾಯಿಸುತ್ತಾ? ... ಈ ಬಗ್ಗೆ ನನಗೆ ಮಾಹಿತಿ ಇಲ್ಲ.
Comments
Post a Comment