Skip to main content

Blog number 1732. ಬೆಲಾರಸಿನ ಆ್ಯನಾ ಮತ್ತು ಪೆಡರ್ ದಂಪತಿಗಳು ಮತ್ತು ಅವರನ್ನು ಕರೆತಂದು ಪರಿಚಯಿಸಿದ ಶಿವ ಭಕ್ತ ನಿಕೋಲ್

https://youtu.be/PoaEyZLgbrA?feature=shared

#ಬೆಲಾರಸಿನ_ಆ್ಯನಾ_ಮತ್ತು_ಪೆಡರ್_ದಂಪತಿಗಳು.

#ಇಬ್ಬರೂ_ಅಮೆರಿಕಾದಲ್ಲಿ_ಐಟಿ_ಇಂಜಿನಿಯರ್

#ಆ್ಯನಾಗೆ_ಚರ್ಮದ_ಕ್ಯಾನ್ಸರ್_ಕಾಯಿಲೆ

#ಇದು_ಗೊತ್ತಾದ_ಮೇಲೆ_ಆ್ಯನಾಳನ್ನು_ಮದುವೆ_ಆದ_ಪೆಡರ್.

#ಇವರಿಬ್ಬರನ್ನು_ಪರಿಚಯಿಸಿದ_ನಿಕೋಲ_ಹಿಂದೂ_ದರ್ಮದ_ಶಿವನ_ಆರಾದಕ.


   2017ರಲ್ಲಿ ನಮ್ಮ ಊರಿನಲ್ಲಿದ್ದ ಆಯುರ್ವೇದ ವೈದ್ಯರಾದ ನರಸೀಪುರ ಸಣ್ಣಯ್ಯ ಹೆಗ್ಗಡೆಯವರಿಂದ ಚಿಕಿತ್ಸೆ ಪಡೆಯಲು ಯೂರೋಪಿನ ಬೆಲಾರಸ್ ದೇಶದ ಈ ಮೂವರು ನನ್ನ ಸಹಾಯ ಕೇಳಿ ಬಂದಿದ್ದರು.
  ಇವರಿಬ್ಬರ ಗೆಳೆಯ ನಿಕೋಲ ಹಿಂದೂ ಧರ್ಮದ ಶಿವನ ಆರಾದಕ ಅನೇಕ ಬಾರಿ ಭಾರತ ಯಾತ್ರೆ ಮಾಡಿದ್ದರು ಹಿಮಾಲಯ ಇವರಿಗೆ ಬಾರೀ ಆಕರ್ಷಣೆ ಶಿವನ ಜಟೆ ಇವರು ಬಿಟ್ಟಿದ್ದರು.
   ಬೆಲಾರಸಿನ ಆಡಳಿತದ ಬಗ್ಗೆ, ರಷ್ಯಾ ದೇಶದ ಬಾರ್ಡರ್ ಇವರದ್ದು ಆದ್ದರಿಂದ ಇವರ ಭಾಷೆ ಬೆಲಾರಸ್ ರಷ್ಯಾ ಎಂಬ ಭಾಷೆ ಆದರೆ ಇವರೆಲ್ಲ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದರಿಂದ ಇಂಗ್ಲೀಷ್ ಭಾಷೆ ಬಲ್ಲವರು.
   ಹೀಗಿರುವಾಗಲೇ ಆ್ಯನಾಗೆ ಚರ್ಮದ ಕ್ಯಾನ್ಸರ್ ಕಾಯಿಲೆ ಬಂದಿದ್ದು ಅಮೇರಿಕಾ ವೈದ್ಯರು ದೃಡೀಕರಿಸುತ್ತಾರೆ ಮತ್ತು ಅಪರೂಪದ ತೀವ್ರ ಸ್ವರೂಪದ ಕಾಯಿಲೆ ಅಂತಿಮ ಹಂತ ತಲುಪಿರುವುದರಿಂದ ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಭಾರತೀಯ ಆಯುರ್ವೇದ ಔಷದಿ ಪಡೆಯಲು ಕೊನೆಯ ಆಸೆಯಿಂದ ಬಂದಿದ್ದರು.
  ಇದಕ್ಕಾಗಿ 6 ತಿಂಗಳು ಭಾರತದಲ್ಲಿ ಇರುವುದು ಚಿಕಿತ್ಸೆ ಪಡೆಯುವ ಜೊತೆಗೆ ಭಾರತ ದೇಶದ ಮುಖ್ಯ ಸ್ಥಳಗಳ ಪ್ರವಾಸದ ಗುರಿ ಕೂಡ ಇವರದ್ದು.
   ಇವರು ಮೂವರೂ ಗೆಳೆಯರು ಅನೇಕ ಬಾರಿ ನಮ್ಮ ಲಾಡ್ಜ್ ನಲ್ಲಿ ತಂಗುತ್ತಿದ್ದರು ಈ ರೀತಿ ಆತ್ಮೀಯರಾದಾಗ ಗೊತ್ತಾಗಿದ್ದು ಆ್ಯನಾ ಮತ್ತು ಪೆಡರ್ ಇಬ್ಬರು ಪ್ರೇಮಿಸಿದ್ದರು ಆ ಸಂದರ್ಭದಲ್ಲೇ ಆ್ಯನಾಗೆ ಕ್ಯಾನ್ಸರ್ ಬಂದು ಅವರ ಕನಸಿನ ಸೌಧ ಕುಸಿದಿದೆ ಆದರೆ ಪೆಡರ್ ಆ್ಯನಾಳಿಗಾಗಿ ತನ್ನ ಉದ್ಯೋಗ ತೊರೆದು ತನ್ನ ಉಳಿತಾಯದ ಹಣವನ್ನ ಆ್ಯನಾಳ ಆಯುರ್ವೇದ ಚಿಕಿತ್ಸೆಗಾಗಿ ಭಾರತ ಪ್ರವಾಸಕ್ಕೆ ವಿನಿಯೋಗಿಸಲು ತೀರ್ಮಾನಿಸುತ್ತಾರೆ.
   ಆ್ಯನಾಳ ಕೊನೆಯ ದಿನಗಳಲ್ಲಿ ಅವಳನ್ನು ಸಂತೋಷವಾಗಿಡಲು ಬೆಲಾರಸಿನಲ್ಲಿ ವಿವಾಹವೂ ಆಗುತ್ತಾರೆ  ನಂತರ ನನ್ನಲ್ಲಿಗೆ ಬರುತ್ತಾರೆ.
  ಇವರ ಈ ಕಥೆ ಕೇಳಿ ನನ್ನ ಹೃದಯ ಹಿಂಡುತ್ತದೆ ಪ್ರತಿ ತಿಂಗಳು ವೈದ್ಯರನ್ನು ನೋಡಲು ಬಂದಾಗ ನನ್ನ ಅತಿಥಿಗಳಾಗುತ್ತಿದ್ದರು ನಾನು ಇವರಿಗೆ ಉಚಿತವಾಗಿ ವಸತಿ ವ್ಯವಸ್ಥೆ ಮಾಡುತ್ತಿದ್ದೆ ಪ್ರತಿ ಬಾರಿ ಬಂದಾಗ ಅವರಿಬ್ಬರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರವಾಸದ ತಮ್ಮ ಅನುಭವ ಹೇಳುತ್ತಿದ್ದರು.
   ಕೆಲ ತಿಂಗಳು ಉತ್ತರ ಗೋವಾದ ರಷ್ಯನ್ ಗೆಳೆಯರ ಕಾಲೋನಿಗಳಲ್ಲಿ ಕಾಲ ಕಳೆದ ಬಗ್ಗೆ ಅಲ್ಲಿ ಆ್ಯನಾ ರಷ್ಯನ್ ಮಕ್ಕಳಿಗೆ ಹಾಡು ನೃತ್ಯ ಕಲಿಸಿದ ಬಗ್ಗೆ ಸಂತೋಷ ವ್ಯಕ್ತ ಪಡಿಸುತ್ತಿದ್ದಳು ಅವಳ ನಗು ಮುಖದ ಹಿಂದೆ ಎಂತಹ ನೋವಿತ್ತೊ? ಸಾವಿನ ಭಯವಿತ್ತಾ ಗೊತ್ತಿಲ್ಲ ನಾನು ಆ್ಯನಾಳಿಗೆ ಜೀವನೋತ್ಸವ ಉಂಟಾಗುವಂತೆ ಮಾತಾಡುತ್ತಿದ್ದೆ.
  ನನ್ನ ಮನೆಯಲ್ಲಿ ಆ್ಯನಾ ಮತ್ತು ಅವಳ ಪತಿ ಪೆಡರ್ ಹಾಗೂ ಇವರಿಬ್ಬರ ಗೆಳೆಯ ನಿಕೋಲ್ ಗಾಗಿ ಡಿನ್ನರ್ ವ್ಯವಸ್ಥೆ ಮಾಡಿದ್ದೆ ನಿಕೋಲ್ ತನ್ನ ದೇಶದ ಸಂಗೀತ ವಾದ್ಯದ ಜೊತೆ ಹಾಡಿ ಎಲ್ಲರನ್ನೂ ರಂಜಿಸಿದ್ದ.
  ವಿಪರೀತ ಚಳಿಯ ಒಂದು ದಿನ ನಡಗುತ್ತಿದ್ದ ಆ್ಯನಾಗೆ ನನ್ನ ಪತ್ನಿ ಹೊಸ ಶಾಲು ಹೊದಿಸಿ ಬೆಚ್ಚಗೆ ಮಾಡಿದಾಗ ಆ್ಯನಾ ತನ್ನ ದುಃಖ ತಡೆಯದೆ ಕಣ್ಣೀರಿಟ್ಟಾಗ ನಮ್ಮ ಕಣ್ಣುಗಳು ಒದ್ದೆ ಆಗಿತ್ತು.
  ಆರು ತಿಂಗಳ ನಂತರ ಬೆಲಾರಸಿಗೆ ತಲುಪಿದ ಆ್ಯನಾ ಪೋನ್ ಮಾಡಿ ನನ್ನ ಸಹಾಯಕ್ಕೆ ಇನ್ನೊಮ್ಮೆ ಕೃತಜ್ಞತೆ ತಿಳಿಸಿ ನನಗಾಗಿ ಅವರ ದೇಶದ ದುಬಾರಿ ಚಾಕಲೇಟ್ ಗಳನ್ನು ಕಳಿಸುತ್ತಿರುವುದಾಗಿ ಸ್ವೀಕರಿಸಲು ವಿನಂತಿಸಿದ್ದಳು.
  ಬಹುಶಃ ಕೋರಿಯರ್ ವೆಚ್ಚ 15 ಸಾವಿರ ಇರಬೇಕು ಚಾಕಲೇಟ್ ಬೆಲೆ 10 ಸಾವಿರ ಒಟ್ಟು 25 ಸಾವಿರ ಖರ್ಚು ಮಾಡಿ ಕಳಿಸಿದ ಚಾಕಲೇಟ್ ನನಗೆ ತಲುಪಿದಾಗ ಆ ಬಾಕ್ಸ್ ದಾರಿಯಲ್ಲಿ ಇಲಿಗಳ ದಾಳಿಗೆ ಒಳಗಾಗಿತ್ತು ಆದ್ದರಿಂದ ಇಡೀ ಚಾಕಲೇಟ್ ಬಾಕ್ಸ್ ತಿನ್ನದೇ ವಿಲೇವಾರಿ ಮಾಡಿದೆ.
 ಆ್ಯನಾಗೆ ಪೋನಿನಲ್ಲಿ ಚಾಕಲೇಟ್ ತಲುಪಿದ ಬಗ್ಗೆ ತಿಳಿಸಿದೆ ಆದರೆ ಚಾಕಲೇಟ್ ತಿನ್ನಲಾಗಲಿಲ್ಲ ಅಂತ ಹೇಳಲಿಲ್ಲ ಹೇಳಿದ್ದರೆ ಆ್ಯನಾಗೆ ನಿರಾಸೆ ಆದೀತೆಂಬ ಭಯ ನನಗೆ.
  ನಂತರ ಆ್ಯನಾಳಿಂದ ಯಾವುದೇ ಸುದ್ದಿ ಬರಲೇ ಇಲ್ಲ.... ಆ್ಯನಾ -ಪೆಡರ್ - ನಿಕೋಲರ ಜೊತೆಯ ಅವತ್ತಿನ ಡಿನ್ನರ್ ನ ವಿಡಿಯೋ ಮತ್ತು ಪೋಟೊ ಚಿಕ್ಕ ವಯಸ್ಸಲ್ಲೇ ಇಹ ಲೋಕ ತ್ಯಜಿಸಿದ ಆ್ಯನಾಳ ನೆನಪು ನನ್ನ ಜೀವಮಾನ ಪೂರ್ತಿ ಉಳಿದಿದೆ, ಆ್ಯನಾಳ ಕಾಯಿಲೆ ಅವಳ ಆಯಸ್ಸು ಕ್ಷೀಣವಾದರೂ ಆ್ಯನಾಳ ಮದುವೆ ಮಾಡಿಕೊಂಡು ತನ್ನ ದುಡಿಮೆಯ ಉಳಿತಾಯದ ಹಣದಲ್ಲಿ ಭಾರತ ಪ್ರವಾಸ ಮಾಡಿಸಿ ಅವಳ ಇಚ್ಚೆಯಂತೆ ಆಯುರ್ವೇದ ಚಿಕಿತ್ಸೆ ಕೊಡಿಸಿದ ಆ್ಯನಾಳ ಪತಿ ಪೆಡರ್ ನಿಜಕ್ಕೂ ದೊಡ್ಡ ಮನುಷ್ಯ ಇವರಿಬ್ಬರಿಗೆ ಸಹಾಯ ಮಾಡಿ ನನಗೆ  ಪರಿಚಯಿಸಿದ ನಿಕೋಲ್ ನ ಗೆಳೆತನ ಕೂಡ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...