Skip to main content

Posts

Showing posts with the label ANANDAPURAM NAMED BY KELADI KING VENKATAPPA NAYAKA FOR MEMORIES OF HIS QUEEN CHAMPAKA

ಭಾಗ - 23, ಆನಂದಪುರಂ ಅಂತ ನಮ್ಮ ಊರಿಗೆ ನಾಮಕರಣ ಮಾಡಿದವರು ಕೆಳದಿ ರಾಜ ವೆಂಕಟಪ್ಪ ನಾಯಕರು,ಅವರ ದುರಂತ ಪ್ರೇಮ ಕಥೆಯ ನಾಯಕಿ ಚಂಪಕಾಳ ಸ್ಮರಣಾಥ೯ ಈ ಹೆಸರು ಬಂತು.

#ಭಾಗ_23. #ಆನಂದಪುರಂ_ಎಂದು_ನಾಮಕರಣ_ಮಾಡಿದ್ದು_ಕೆಳದಿ_ರಾಜ_ವೆಂಕಟಪ್ಪನಾಯಕ. #ನಿತ್ಯ_ರಾಜರು_ಸಾಗುವ_ಬೀದಿಯಲ್ಲಿ_ರಂಗೋಲಿ_ಬಿಡಿಸುತ್ತಿದ್ದ_ಸುಂದರಿ_ಚಂಪಕಳಿಗಾಗಿ_ಈ_ಹೆಸರು #ಮೊದಲು_ಈ_ಊರಿನ_ಮೂಲ_ಹೆಸರು_ಯಡೇಹಳ್ಳಿಕೋಟೆ #ಬದರಿನಾರಾಯಣ್_ಅಯ್ಯ೦ಗಾರರ_ಕುಟುಂಬದಲ್ಲಿ_ಎಲ್ಲರ_ಹೆಸರಿನ_ಮೊದಲು_ಆನಂದಪುರಂ_ಎಂದೇ_ಇದೆ.   ಎ.ಆರ್. ಬದರಿನಾರಾಯಣ್ ಅಯ್ಯಂಗಾರರು ಅಂದರೆ ಪೂರ್ಣವಾದ ಹೆಸರು ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಬದರಿನಾರಾಯಣ ಅಯ್ಯಂಗಾರ್ ಅಂತ.   ಇವರ ಅಣ್ಣ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ವೆಂಕಟಾಚಲ ಅಯ್ಯಂಗಾರ್ ಅಂತ ಸಂಕ್ಷಿಪ್ತವಾಗಿ ಎ.ಆರ್.ವೆಂಕಟಚಲ ಆಯ್ಯಂಗಾರ್ ಅಂತ.   ಈ ಕುಟುಂಬದ ಅನೇಕ ನ್ಯಾಯಾಲಯಗಳ (ಇನಾಂ ಅದೇ ಶ ರದ್ದು ಇತ್ಯಾದಿ) ಆದೇಶಗಳಲ್ಲೂ ಈ ಕುಟುಂಬದವರ ಹೆಸರುಗಳೆಲ್ಲ ಪ್ರಾರ೦ಭದಲ್ಲಿ ಆನಂದಪುರಂ ಎಂದೇ ಇದೆ ಇದು ಈ ಕುಟುಂಬಕ್ಕೆ ತಮ್ಮ ಊರಾದ ಆನಂದ ಪುರ೦ ಮೇಲಿನ ಅಭಿಮಾನ ತೋರಿಸುತ್ತದೆ.     ಎ.ಎಸ್. ಬೋಜರಾಜ ಆಯ್ಯಂಗಾರ್ ಅಂದರೆ ಆನಂದಪುರಂ ಸುಂದರ್ ರಾಜ್ ಬೋಜರಾಜ್ ಅಂತ.  ಎ.ಎಸ್. ಪ್ರಾಣೇಶ್ ಆಚಾರ್ ಅಂದರೆ ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ ಅಂತ.     ಬಹುಶಃ ಈ ಮೂರು ಕುಟುಂಬ ಹೊರತು ಪಡಿಸಿ ಆನಂದಪುರಂನ ನಿವಾಸಿಗಳಾರು ತಮ್ಮ ಹೆಸರಿನ ಮುಂದೆ ಆನಂದಪುರಂ ಎಂಬ ಇನಿಷಿಯಲ್ ನಮೂದಿಸಿದ್ದು ನಾನು ನೋಡಲಿಲ್ಲ.   ...