#ಯಾವುದೇ_ಪಕ್ಷದಲ್ಲಿರಲಿ_ಶ್ರೀಕಾಂತ್_ನನ್ನ_ಸ್ನೇಹಿತರು. #ಜೆಡಿಎಸ್_ತೊರೆದು_ಕಾಂಗ್ರೇಸ್_ಸೇರುತ್ತಿದ್ದಾರೆ. #ದೇವೇಗೌಡರು_ಕುಮಾರಸ್ವಾಮಿಗಳು_ಶ್ರೀಕಾಂತರನ್ನು_ವಿದಾನಪರಿಷತ್_ಸದಸ್ಯರಾಗಿ_ಮಾಡಬಹುದಾಗಿತ್ತು. #ಮಿತಭಾಷಿ_ಸಂಘಟನಾ_ಚತುರ_ಗೆಳೆತನಕ್ಕೆ_ಇನ್ನೊಂದು_ಹೆಸರು_ಶ್ರೀಕಾಂತ್. #ಕಾಂಗ್ರೇಸ್_ಪಕ್ಷ_ಇವರಿಗೆ_ಸೂಕ್ತ_ಸ್ಥಾನ_ಮಾನ_ಕಲ್ಪಿಸಲಿ. ರಾಜಕಾರಣಿಗಳಲ್ಲಿ ದ್ವಿಮುಖ ವ್ಯಕ್ತಿಗಳನ್ನು ಕಾಣುವುದು ಸಹಜ ಆದರೆ ಶಿವಮೊಗ್ಗ ಜಿಲ್ಲಾ ಜಾತ್ಯಾತೀತ ಜನತಾದಳದ ಜಿಲ್ಲಾ ಅದ್ಯಕ್ಷರಾಗಿದ್ದ ಶ್ರೀಕಾಂತ್ ಮಾತ್ರ ಅವರೆಲ್ಲರಿಗಿಂತ ಬಿನ್ನ ವ್ಯಕ್ತಿತ್ವದವರು. ಗೆಳೆತನಕ್ಕೆ ನಂಬಿಕೆಗೆ ಶ್ರೀಕಾಂತ್ ಮಾತ್ರ ಅಪರಂಜಿಯಂತವರು ಆದ್ದರಿಂದ ಜಿಲ್ಲೆಯಲ್ಲಿ ಅವರಿಗೆ ಅಪಾರ ಗೆಳೆಯರಿದ್ದಾರೆ. ಮಿತಭಾಷಿಗಳು ಸಂಘಟನಾ ಚತುರರು ಆದ್ದರಿಂದಲೇ ಶಿವಮೊಗ್ಗ ಜಿಲ್ಲೆಯಲ್ಲಿ ಇವರು ಏಕಾಂಗಿ ಆಗಿ ಜೆಡಿಎಸ್ ಪಕ್ಷ ಸಂಘಟಿಸಿ ಅನೇಕ ಚುನಾವಣೆಯಲ್ಲಿ ಅನೇಕರಿಗೆ ಅಧಿಕಾರ ದೊರೆಯುವಂತೆ ಮಾಡಿದ್ದರು. ಶಿವಮೊಗ್ಗ ವಿದಾನಸಬಾ ಕ್ಷೇತ್ರದ ಚುನಾವಣೆಯಲ್ಲಿ ಈಶ್ವರಪ್ಪರ ಎದುರು 25 ಸಾವಿರ ಮತಗಳಿಸಿದ್ದು ಇವರ ಜನಪ್ರಿಯತೆಗೆ ಸಾಕ್ಷಿ ನಂತರದ ಚುನಾವಣೆಯಲ್ಲಿ ಇವರಿಗೆ ಅವಕಾಶ ನೀಡದೆ ಬೇರೆಯವರಿಗೆ ಸ್ಪರ್ಧಿಸಲು ಜೆಡಿಎಸ್ ಪಕ್ಷ ಅವಕಾಶ ನೀಡಿದಾಗ ಅವರೆಲ್ಲ ಐದು ಸಾವಿರ ಮತಗಳಿಸಲು ಮಾತ್ರ ಸಾಧ್ಯವಾಗಿತ್ತು. ಶ್ರೀಕಾಂತ್ 20...