4116. ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆಸದ್ಗತಿಗಾಗಿ_ಪ್ರಾರ್ಥನೆ. ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.
ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆ
ಸದ್ಗತಿಗಾಗಿ_ಪ್ರಾರ್ಥನೆ.
ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.
ಸಾಮಾನ್ಯವಾಗಿ ವ್ಯಕ್ತಿ ತೀರಿಕೊಂಡ 11, 12 ಅಥವಾ ೧೩ನೇ ದಿನದಂದು ವೈಕುಂಠ ಸಮಾರಾಧನೆಯನ್ನು ನೆರವೇರಿಸಲಾಗುತ್ತದೆ. (ಕೆಲವು ಸಮುದಾಯಗಳಲ್ಲಿ ಅವರವರ ಕುಲಾಚಾರಕ್ಕೆ ತಕ್ಕಂತೆ ದಿನಗಳು ಬದಲಾಗಬಹುದು).
ಪ್ರಮುಖ ಧಾರ್ಮಿಕ ವಿಧಿಗಳು
ಧಾರ್ಮಿಕ ಪೂಜೆ ಹಾಗೂ ಪಿಂಡದಾನ ಪುರೋಹಿತರ ಮಾರ್ಗದರ್ಶನದಲ್ಲಿ ಮೃತರ ಹೆಸರಿನಲ್ಲಿ ತರ್ಪಣ, ಶ್ರಾದ್ಧ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.
ಅನ್ನದಾನ (ಬ್ರಹ್ಮಸಂತರ್ಪಣೆ), ಆಗಮಿಸಿದ ಬಂಧು-ಮಿತ್ರರಿಗೆ ಹಾಗೂ ಅಭ್ಯಾಗತರಿಗೆ ಭೋಜನವನ್ನು ಏರ್ಪಡಿಸುವುದು ಈ ದಿನದ ಪ್ರಮುಖ ಭಾಗ.
ದಾನ ಧರ್ಮಗಳು,ಮೃತರ ಆತ್ಮದ ಶ್ರೇಯಸ್ಸಿಗಾಗಿ ಗೋದಾನ, ಭೂದಾನ, ವಸ್ತ್ರದಾನ, ಹಾಗೂ ದೀಪದಾನಗಳಂತಹ ಕಾರ್ಯಗಳನ್ನು ಮಾಡಲಾಗುತ್ತದೆ.
ಇವತ್ತು ನನ್ನ ಜೀವನದ ಮಾರ್ಗದರ್ಶಕ ಗುರುಗಳಾಗಿದ್ದ ಬೆಂಗಳೂರಿನ ವಿಜಯನಗರದ ಖ್ಯಾತ ಜೋತಿಷಿ ಆಗಿದ್ದ ಡಾಕ್ಟರ್ ಎನ್. ಎಸ್. ವಿಶ್ವಪತಿಗಳ 13 ನೇ ದಿನದ ವೈಕುಂಠ ಸಮಾರಾಧನೆ ( 3 - ಆಗಸ್ಟ್-2026 ಸೋಮವಾರ).
ನಮ್ಮೂರ ಪುರ ದೈವ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಅವರ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ 21 ವರ್ಷದ ಹಿಂದೆ ಪ್ರತಿಷ್ಟಾಪನೆಗೊಂಡು ನಿನ್ನೆ 245 ನೇ ಸಂಕಷ್ಟ ಹರ ಚತುರ್ಥಿ ದಿನ ಅವರ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸಲಾಯಿತು ಮತ್ತು ಅವರ ಸ್ಮರಣಾರ್ಥ ದೇವಾಲಯದಲ್ಲಿ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು.
ಅವರಿಗಾಗಿ ಇವತ್ತು ಬೆಳಿಗ್ಗೆ ಕೆಂಜೆಗಾಪುರದ ಶ್ರೀವೀರಭದ್ರ ದೇವಸ್ಥಾನದಲ್ಲಿ #ರುದ್ರಾಭಿಶೇಕ ಪೂಜೆ ನೆರವೇರಿಸಲಾಗಿದೆ.
ಮೂಡ ನಂಬಿಕೆಗಳನ್ನ ಮತ್ತು ಜಾತಿಯತೆಯನ್ನ ಸದಾ ವಿರೋದಿಸುತ್ತಿದ್ದವರು ವಿಶ್ವಪತಿ ಶಾಸ್ತ್ರೀಯವರು.
ನಮ್ಮೂರ ಈ ಶ್ರೀವರಸಿದ್ದಿ ವಿನಾಯಕ ದೇವಸ್ಥಾನ ಲೋಕಾರ್ಪಣೆ ದಿನ ಅವರು ಮಾಡಿದ ಆಶ್ರೀವಚನದಲ್ಲಿ ನನಗೆ ಸದಾ ನೆನಪಿನಲ್ಲಿರುವವುದು ...
ನಿಮ್ಮ ಊರು ಆನಂದಪುರಂ ದೊಡ್ಡ ಇತಿಹಾಸ ಇರುವ ಊರು ರಾಜರು ಆಳಿದ ಊರು ಇಲ್ಲಿ ಗಣಪತಿ ದೇವಸ್ಥಾನ ಇರಲೇ ಬೇಕು ಆದರೆ ಇಡೀ ಹೋಬಳಿಯಲ್ಲಿ ಎಲ್ಲೂ ಇಲ್ಲ ಅಂದರೆ ಪುರಾತನ ಗಣಪತಿ ದೇವಸ್ಥಾನ ಯಾವುದೋ ಕಾರಣದಿಂದ ನಶಿಸಿ ಹೋಗಿರಬೇಕು ಬಹುಶಃ ಈಗ ಪ್ರತಿಷ್ಟಾಪನೆಗೊಂಡ ಶ್ರೀವರಸಿದ್ದಿ ವಿನಾಯಕ ಸ್ವಾಮಿy ದೇವಾಲಯದಲ್ಲೇ ಪ್ರರಾತನ ಗಣಪತಿ ದೇವಸ್ಥಾನ ಇದ್ದಿರ ಬೇಕು ಎಂದಿದ್ದರು.
ಈ ದೇವಾಲಯ ಪ್ರಾರಂಭದಿಂದ ಆನಂದಪುರಂ ಸುತ್ತ ಮುತ್ತಲಿನ ಎಲ್ಲಾ ಹಳೆಯ ದೇವಾಲಯ ಅಭಿವೃದ್ದಿ ಆಗಲಿದೆ ಈ ಇಡೀ ಊರಿನ ಪ್ರತಿ ಕುಟುಂಬಗಳು ಆರ್ಥಿಕ ಅಭಿವೃದ್ಧಿ ಹೊಂದಲಿದೆ ಎಂದು ಆ ದಿನ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯವಾಗಿದೆ.
ಪ್ರತಿ ಸಂಕಪ್ಟಹರ ಚತುರ್ಥಿಯಲ್ಲಿ ರಾತ್ರಿ ಚಂದ್ರ ದರ್ಶನ ನಂತರ ದೇವಾಲಯದಲ್ಲಿ ಅವರು ಪ್ರಾರಂಭಿಸಿದ ಅನ್ನ ಸಂತರ್ಪಣೆ ನಿನ್ನೆಗೆ 245 ನೇ ಸಂಕಷ್ಟಹರ ಚತುರ್ಥಿ ಅಂತಹ ದಿನಗಳಲ್ಲಿ ವಿಶ್ವಪತಿ ಶಾಸ್ತ್ರಿಗಳು ಸ್ವತಃ ಸಾಮೂಹಿಕ ಭೋಜನದಲ್ಲಿ ಭಾಗವಹಿಸಿ ಆಹಾರ ಸ್ವೀಕರಿಸುತ್ತಿದ್ದರು.
ಅಲ್ಲಿ ಜಾತಿ ಇರಲಿಲ್ಲ ಅದಕ್ಕೆ ಶಾಸ್ತ್ರೀಗಳು ಹೇಳುತ್ತಿದ್ದದ್ದು "ಇಲ್ಲಿ ಜಾತಿ ಇಲ್ಲ, ಭಕ್ತಿಯಿಂದ ಭಕ್ತರು ಶುಚಿಯಾಗಿ ದೇವರ ಪ್ರಸಾದ ತಯಾರಿಸಿ ಬಡಿಸುತ್ತಾರೆ, ಇಲ್ಲಿ ತೋರುಗಾಣಿಕೆಗೆ ಜಾತಿ ಕಾರಣದಿಂದ ಊಟ ಮಾಡದೆ ಹೋಟೆಲ್ ಗೆ ಹೋದರೆ ಅಲ್ಲಿ ಅಡುಗೆ ಮಾಡುವವರು ಅಡುಗೆ ಮಾಡಿಟ್ಟು ಸ್ನಾನಕ್ಕೆ ಹೋಗುತ್ತಾರೆ ಯಾವುದು ಶ್ರೇಷ್ಟ ಎಂದು ಪ್ರಶ್ನಿಸುತ್ತಿದ್ದರು.
ನಮ್ಮ ದೇವಾಲಯಕ್ಕೆ ಐದು ಲಕ್ಷ ವೆಚ್ಚದಲ್ಲಿ ಪ್ರಸಾದದ ಮನೆ ನಿರ್ಮಿಸಿಕೊಟ್ಟಿದ್ದಾರೆ, ದೇವರ ಉತ್ಸವ ಮೂರ್ತಿ ಇವರೇ ನೀಡಿದ್ದು, ಇವರ ಅತ್ತೆ ಪತ್ನಿ ಸುದಾಮಣಿ ಅವರ ತಾಯಿ ತ್ಯಾಗರ್ತಿ ಗುರುಮೂರ್ತಿ ರಾಯರ ಪತ್ನಿ ಗೋಪುರದ ಕಳಶ ನೀಡಿದ್ದಾರೆ ಈ ರೀತಿ ಶಾಸ್ತ್ರೀಯವರ ಕುಟುಂಬ ನಮ್ಮ ಊರ ದೇವಾಲಯಕ್ಕೆ ದೊಡ್ಡ ಕೊಡುಗೆ ನೀಡಿದ ಕುಟುಂಬ ಆಗಿದೆ.
ಅವರ ಸಂಪರ್ಕಕ್ಕೆ ಬಂದವರಿಗೆ ಸರಿದಾರಿಯ ಸನ್ಮಾರ್ಗ ತೋರುವುದು ಅವರ ಕಾಯಕ ಆಗಿತ್ತು.
ವಿಶ್ವಪತಿ ಶಾಸ್ತ್ರೀಗಳ ಆತ್ಮಕ್ಕೆ ಸದ್ಗತಿ - ಮೊಕ್ಷ ಮತ್ತು ಸ್ವರ್ಗ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ.
#vishwapathishastri #srivatsa #sudhamani #vijayanagara #bangalore #shivamogga #yadehalli #siddivinayakatemple
Comments
Post a Comment