Blog number 1345. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಶಿಕಾರಿಪುರದ ಮನೆ ಮೇಲೆ ಕಲ್ಲು ತೂರಾಟ (27-ಮಾರ್ಚ್ -2023) 43 ವಷ೯ದ ಹಿಂದೆ ಮಂತ್ರಿ ಯ೦ಕಟಪ್ಪರ ಮನೆ ಮೇಲಿನ ದಾಳಿ ನೆನಪಿಸಿತು.
#ಶಿಕಾರಿಪುರದಲ್ಲಿ_ಯಡೂರಪ್ಪರ_ಮನೆ_ಮೇಲೆ_ಕಲ್ಲು_ತೂರಾಟ #ತಪ್ಪು_ಮಾಡಿದವರನ್ನು_ಬಂದಿಸದಂತೆ_ಕ್ಷಮಿಸಿದ_ಯಡೂರಪ್ಪರ_ಮತ್ಸದ್ಧಿ_ರಾಜಕಾರಣ #ಮರುಕಳಿಸಿದ_ಶಿಕಾರಿಪುರ_ರಾಜಕೀಯ_ಚರಿತ್ರೆ #ಗುಂಡೂರಾವ್_ಸಂಪುಟದಲ್ಲಿ_ತೋಟಗಾರಿಕಾ_ಮತ್ತು_ಬಂದಿಖಾನೆ_ಮಂತ್ರಿ_ಆಗಿದ್ದ_ಶಿಕಾರಿಪುರದಿಂದ #ಎರೆಡು_ಬಾರಿ_ಶಾಸಕರಾಗಿದ್ದ_ಕೆ_ಯ೦ಕಟಪ್ಪರ_ಮನೆ_ಮೇಲೂ_ದಾಳಿ_ಆಗಿತ್ತು #ಶಿಕಾರಿಪುರ_ವಿದಾನ_ಸಭಾ_ಕ್ಷೇತ್ರದ_ನಿಜ_ಚಾಣಕ್ಯ_ಪದ್ಮನಾಭ_ಭಟ್ಟರು. #ದುರಂತ_ನಾಯಕ_ನಗರದ_ಮಹಾದೇವಪ್ಪ ನಿನ್ನೆ ಇದ್ದಕ್ಕಿದ್ದಂತೆ ಶಿಕಾರಿಪುರದಲ್ಲಿ ಒಳ ಮೀಸಲಾತಿ ವಿರೋದಿಸಿ ನಡೆಯುತ್ತಿದ್ದ ಮೆರವಣಿಗೆ ದಿಕ್ಕು ಬದಲಿಸಿ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಶಿಕಾರಿಪುರ ಶಾಸಕರಾದ ಯಡೂರಪ್ಪರ ಮನೆ ಮೇಲೆ ಕಲ್ಲು ತೂರಾಟವಾಯಿತು, ಅವರ ಹುಟ್ಟು ಹಬ್ಬದ ಕೊಡುಗೆ ಆಗಿ ನೀಡಿದ್ದ ಸೀರೆಗಳನ್ನು ತಂದು ಸುಡಲಾಯಿತು, ಮನೆಯ ಮೇಲಿದ್ದ ಅವರ ಬಾವ ಚಿತ್ರದ ಪ್ಲೆಕ್ಸ್ ಮತ್ತು ಬಿಜೆಪಿ ದ್ವಜ ಕೂಡ ದ್ವಂಸ, ಲಾಠಿ ಚಾರ್ಚ್ ಮಾಡಲಾಯಿತು ಅನೇಕರನ್ನು ಬಂದಿಸಲಾಗಿದೆ ಎಂಬ ಸುದ್ದಿ ಕೇಳಿದವರಿಗೆ ದಿಗ್ಭ್ರಮೆ ಉಂಟಾಗಿದ್ದು ಸುಳ್ಳಲ್ಲ. ಇಡೀ ರಾಜ್ಯದಲ್ಲಿ ಒಳ ಮೀಸಲಾತಿ ಬಗ್ಗೆ ಈ ರೀತಿ ಆಕ್ರೋಷ ನಡೆದಿಲ್ಲ ಆದರೆ ಶಿಕಾರಿಪುರದಲ್ಲಿ ಯಾಕೆ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಷ್ಟೆ. ಯಾರೇ ಆದರೂ ಈ ವಾಮ ಮಾರ್ಗದಲ್ಲಿ ಪ್ರಚೋದನೆ ನೀಡಿದ್ದರೆ ಅದು ಖಂಡನೀಯವಾದದ್ದು. ...