Skip to main content

Posts

Showing posts with the label 2026 Aridra Rain

4067.2026 ರ ಆರಿದ್ರಾ ಮಳೆ ಅಭಾವ

ಆರಿದ್ರಾ_ಮಳೆ_ಹಬ್ಬ     ಈ ವರ್ಷ ಪ್ರಾರಂಭದಲ್ಲೇ ಮುಂಗಾರು ಕ್ಷೀಣಿಸಿದೆ,ಆರಿದ್ರಾ ನಕ್ಷತ್ರದ ಮಳೆ ಕಾಲದಲ್ಲಿ ಆರಿದ್ರಾ ಮಳೆ ಹಬ್ಬ ಆಚರಿಸಲು ರೈತರು ತಯಾರಾಗುತ್ತಿದ್ದಾರೆ.   ಇವತ್ತಿನಿಂದ ಪ್ರಾರಂಭ ಅಂದರೆ 22 -ಜೂನ್ - 2026 ಸೋಮವಾರದಿಂದ ಜುಲೈ -6 ರ ವರೆಗೆ ಆರಿದ್ರಾ ಮಳೆ ಆಗಲಿದೆ.   ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಲಿ ಎಂಬ ಹರಕೆ ಹಾರೈಕೆಗಳು ಫಲಿಸಲಿ.      ಆರಿದ್ರಾ ಮಳೆ ಹಬ್ಬವು ಕರ್ನಾಟಕದ ಮಲೆನಾಡು ಭಾಗದಲ್ಲಿ ಮುಖ್ಯವಾಗಿ ಶಿವಮೊಗ್ಗ, ಸಾಗರ, ಸೊರಬ ಮುಂತಾದ ಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುವ ಸಾಂಪ್ರದಾಯಿಕ ಮತ್ತು ಪ್ರಕೃತಿ ಆರಾಧನೆಯ ವಿಶೇಷ ಹಬ್ಬವಾಗಿದೆ.  ಮಳೆರಾಯನನ್ನು ಸ್ವಾಗತಿಸಲು ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸಲು ಈ ಹಬ್ಬವನ್ನು ನಡೆಸಲಾಗುತ್ತದೆ.   ಆರಿದ್ರಾ ಮಳೆ ಹುಯ್ಯದಿದ್ದರೆ ದಾರಿದ್ರ್ಯ ಖಚಿತ ಎಂಬುದು ಹಿರಿಯರ ನಂಬಿಕೆ. ಮಳೆಗಾಲದ ಆರಂಭದಲ್ಲಿ ಮಳೆರಾಯನನ್ನು ಒಲಿಸಿಕೊಳ್ಳಲು ರೈತರು ಪ್ರಕೃತಿಯನ್ನು ಪೂಜಿಸುತ್ತಾರೆ.  ಮಲೆನಾಡಿನ ಕೆಲವು ಸಮುದಾಯಗಳು ವಿಶೇಷವಾಗಿ ದೀವರ ಜನಾಂಗ ತಮ್ಮ ಆರಾಧ್ಯ ದೈವವಾದ ಕುಮಾರರಾಮನನ್ನು ಈ ಹಬ್ಬದಲ್ಲಿ ನೆನೆಯುತ್ತಾರೆ.  ಹಬ್ಬದ ಸಂದರ್ಭದಲ್ಲಿ ಸುರಿಯುವ ಮಳೆ ನೀರನ್ನು ಹಿಡಿದಿಟ್ಟು ನಂತರ ದೇವರ ವಿಗ್ರಹಕ್ಕೆ ಅದೇ ನೀರಿನಿಂದ ಅಭಿಷೇಕ ಮಾಡುವ ಪದ್ಧತಿಯೂ ಇದೆ.   ಹಬ್...