Skip to main content

Posts

Showing posts with the label Cobra with crest hair a falls story

Blog number 1975. ಅಸ್ತಿತ್ವದಲ್ಲಿರದ ಜುಟ್ಟು ಕಾಳಿಂಗ ಸರ್ಪ ಪಶ್ಚಿಮ ಘಟ್ಟದ ಜನಮಾನಸದಲ್ಲಿ ಅಳಿಸದೇ ಉಳಿದಿದೆ.

ಈ ಲೇಖನ ಮತ್ತೆ ಬರೆಯಲು ಕಾರಣ ಇವತ್ತಿನ ನಾಗರಾಜ ಕೊವೆ ಅವರ ಲೇಖನ ಅದರಲ್ಲಿ ಊರಿಗೆ ಬರುವ ಕಾಳಿಂಗ ಹಿಡಿದು ದೂರ ಬಿಡುವುದು ಕೂಡ ಅವುಗಳ ಸಂಕುಲಕ್ಕೆ ಮಾರಕವಂತೆ ಅದರ ಜೊತೆ ಇಂತಹ ಕಾಳಿಂಗದ ಕಾಲ್ಪನಿಕ ಕಥೆಗಳು ರೋಚಕವಾಗಿರುತ್ತದೆ. https://www.facebook.com/share/p/7hZfWrJXbGQwiDF9/?mibextid=oFDknk #ಜುಟ್ಟು_ಕಾಳಿಂಗ_ನೋಡಿದೀರಾ?! #ಮಲೆನಾಡ_ಪಶ್ಚಿಮಘಟ್ಟದ_ಜನರಲ್ಲಿರುವ_ವದಂತಿಗಳು #ಆನಂದಪುರಂನ_ಪಾಳುಬಿದ್ದ_ಕೆಳದಿ_ಅರಸರ_ಕೋಟೆಯಲ್ಲಿ_ಜುಟ್ಟು_ಕಾಳಿಂಗ_ಸರ್ಪ #ಕೆಳದಿ_ಅರಸರ_ಕಾಲದ_ನಿದಿ_ಕಾಯುತ್ತಿದೆ_ಎಂಬ_ವದಂತಿ #ಜುಟ್ಟು_ಕಾಳಿಂಗದ_ಕಾಲ್ಪನಿಕ_ಕಥೆಗಳು_ಮಹಾರಾಷ್ಟ್ರದ_ರತ್ನಗಿರಿಯಿಂದ_ಕೇರಳದ_ಕಾಸರಗೋಡಿನ_ತನಕ_ಇದೆ.    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಮಾತ್ರ ಈ ಭಾಗದಲ್ಲಿ ಹರಿದಾಡುತ್ತಲೇ ಇದೆ.    ಇದು ಒಂದು ಊರು ಹಳ್ಳಿಯಲ್ಲಿನ ಕಥೆ ಆಗಿಲ್ಲ, ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರ...