Skip to main content

Posts

Showing posts with the label Today's my guest Margi Ashok and Kugve Sudakar

Blog number 2216. ಬರದವಳ್ಳಿ ರಾಮಪ್ಪ ನನ್ನ ಆತ್ಮೀಯರು ಅವರ ಪ್ರತ್ರ ಅಶೋಕ್ ಮರ್ಗಿ ಮುಂದಿನ ತಲೆಮಾರಿನ ಉದಯೋನ್ಮುಖ ರಾಜಕಾರಣಿ ಇವತ್ತು ನನ್ನ ಅತಿಥಿ.

#ಇವತ್ತಿನ_ನನ್ನ_ಅತಿಥಿಗಳು #ಅಶೋಕಮರ್ಗಿ_ಮತ್ತು_ಕುಗ್ವೆಸುಧಾಕರ್ #ದರ್ಮಸ್ಥಳದಿಂದ_ವಾಪಾಸು_ಬರುವಾಗ_ಭೇಟಿ    ಸಾಗರ ತಾಲ್ಲೂಕ್ ಪಂಚಾಯ್ತಿಯಲ್ಲಿ ಐದು ವರ್ಷ ಉಪಾಧ್ಯಕ್ಷರಾಗಿ ಆಡಳಿ ನಡೆಸಿ ಹೆಸರು ಗಳಿಸಿದ್ದರು ಅವರ ಜೀವನದ ವಿಶೇಷ ಸಂದರ್ಭದ ಕಾರಣದಿಂದ ಧರ್ಮಸ್ಥಳಕ್ಕೆ ಹೋಗಿದ್ದವರು ವಾಪಾಸಾಗುವಾಗ ಜಿಲ್ಲಾ ಕಾಂಗ್ರೇಸಿನ ಪ್ರಧಾನ ಕಾರ್ಯದರ್ಶಿ ಕುಗ್ವೆ ಸುಧಾಕರ್ ಜೊತೆ ನನ್ನ ಕಛೇರಿಗೆ ಬಂದಿದ್ದರು.    ಇವರ ತಂದೆ ರಾಮಪ್ಪ ನನ್ನ ಆತ್ಮೀಯರು 1995- 2000 ದ ಅವದಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಎಲ್ಲಾ ಹೋರಾಟಗಳಿಗೆ ಜೊತೆ ಆದವರು.    ಅಶೋಕ್ ರಾಜಕಾರಣದ ಚಾಣಕ್ಷತನ ಅದರ ಒಳಗುಟ್ಟು ಚೆನ್ನಾಗಿ ತಿಳಿದಿದ್ದಾರೆ ಬರಲಿರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮೀಸಲಾತಿ ಬಂದರೆ, ಮದುಬಂಗಾರಪ್ಪ ಅವಕಾಶ ನೀಡಿದರೆ ಸ್ಪರ್ದಿಸುವುದಾಗಿ ತಿಳಿಸಿದರು.    ಅವರ ಜೀವನದ ಶುಭ ಸಂದರ್ಭದ ವಿಶೇಷ ದಿನವಾದ ಇಂದು ಅವರಿಗೆ ಅವರ ಮುಂದಿನ ಜೀವನ ಸುಖಮಯವಾಗಲಿ,ಉಜ್ವಲವಾಗಲಿ ಮುಂದಿನ ಅವರ ರಾಜಕೀಯ ಜೀವನದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸಿ ಬಿಳ್ಕೊಟ್ಟೆ.