ಮುಹೂರ್ತ_ಮೀರಿದ_ಮದುವೆ_37_ವಸಂತಗಳ ಸುಂದರ_ಪಯಣ. ಅಂದು ಶಿವಮೊಗ್ಗದ ಕೋಟೆ ಆಂಜನೇಯನ ಸನ್ನಿಧಿಯಲ್ಲಿ ನಡೆದ ಆ ರೋಚಕ ಕಥೆ!.. ಜೀವನದಲ್ಲಿ ಕೆಲವು ನೆನಪುಗಳು ಕಾಲ ಸರಿದಂತೆ ಮಾಸುವುದಿಲ್ಲ ಬದಲಿಗೆ ಇನ್ನಷ್ಟು ಹಸನಾಗುತ್ತವೆ. ಇಂದು ನಮ್ಮ ದಾಂಪತ್ಯ ಜೀವನಕ್ಕೆ ಭರ್ತಿ 37 ವರ್ಷ, ನಮ್ಮದು ಅಂತರ್ಜಾತಿ ಪ್ರೇಮ ವಿವಾಹ. ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುಟ್ಟಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೆವು,ಎರಡು ವರ್ಷಗಳ ಕಾಲ ಕಾದ ನಂತರ ಕೊನೆಗೂ ನಮ್ಮ ತಂದೆಯವರನ್ನು ಒಪ್ಪಿಸಿ 1989ರ ಆಗಸ್ಟ್ 23ರಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಅಧಿಕೃತವಾಗಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ದಿನ ನಿಗದಿಯಾಗಿತ್ತು. ಆದರೆ ಅಂದು ನಡೆದ ಘಟನೆಗಳು ಯಾವುದೋ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಿಂತ ಕಡಿಮೆಯಿರಲಿಲ್ಲ! ಅವತ್ತು ನಮ್ಮೂರಲ್ಲಿ ಧಾರಾಕಾರ ಮಳೆ,ಇನ್ನೇನು ದೇವಸ್ಥಾನಕ್ಕೆ ಹೊರಡಬೇಕು ಅನ್ನುವಾಗಲೇ ನಮ್ಮ ತಂದೆಯವರು "ನಾನು ಮದುವೆಗೆ ಬರುವುದಿಲ್ಲ" ಎಂದು ಹಠ ಹಿಡಿದುಬಿಟ್ಟರು. ಪರಿಸ್ಥಿತಿ ತೀರಾ ಗಂಭೀರವಾಗಿ ಕೊನೆ ಗಳಿಗೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಒಪ್ಪಿಸುವಷ್ಟರಲ್ಲಿ ಸಮಯ ಮೀರಿಹೋಗಿತ್ತು. ಸುರಿಯುವ ಮಳೆಯಲ್ಲೇ ಹೇಗೋ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಿದೆವು. ಆದರೆ ಅಷ್ಟರಲ್ಲಾಗಲೇ ವಿವಾ...