Skip to main content

Posts

Showing posts with the label Corana memories dairy

Blog number 2072. ಕೊರಾನಾ ನೆನಪುಗಳ ಡೈರಿ,ನಾನು ಸ್ವಯಂ ಕ್ಷೌರ ಮಾಡಿ ಕೊಳ್ಳಲು ಕಲಿತದ್ದು ಕೊರಾನಾ ಲಾಕ್ ಡೌನ್ ನಿಂದ

#ಕೊರಾನಾ_ನೆನಪುಗಳ_ಡೈರಿ #ನಾನೇ_ನನ್ನ_ಕೇಶವಿನ್ಯಾಸಗಾರ. #ನನ್ನ_ಕೊನೆಯ_ಸಲೂನ್_ಕ್ಷೌರ_20_ಮಾರ್ಚ್_2020. #ಕೊರಾನದಿಂದ_ಬದಲಾದ_ಪದ್ದತಿಗೆ_ನಾಲ್ಕು_ವರ್ಷ_ಆಯಿತು.      ಬಾಲ್ಯದಿಂದಲೇ ಆನಂದಪುರಂನ ಆ ಕಾಲದ ಅದುನಿಕ ಸಲೂನ್ ರಾಮಣ್ಣರಿಂದ ತಲೆಗೂದಲ ಕ್ಷೌರ ಅಂದರೆ ಅಕ್ಷರಶಃ ನೋವಿನ ನರಕ, ಆ ಕಾಲದಲ್ಲಿ ಇಂಗ್ಲೆಂಡ್ ನಿಂದ ಆಮದಾಗುತ್ತಿದ್ದ ಕ್ಲಿಪ್ಪರ್ ಗಳ೦ತು ಜೀವ ತೆಗೆದಂತೆ ಆಗುತ್ತಿತ್ತು ಆದರೂ ಅದನ್ನು ಬಳಸುವುದು ಸಲೂನ್ ಮಾಲಿಕರ ಪ್ರತಿಷ್ಟೆ ಆಗಿತ್ತು.     ನಂತರ ಗಾಂಧೀಜಿ ಆತ್ಮಚರಿತ್ರೆ ಸತ್ಯಾನ್ವೇಷಣೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡಕ್ಕೆ ಅನುವಾದಿಸಿದ ಪುಸ್ತಕ 5 ನೇ ತರಗತಿಯಲ್ಲೇ ನಮ್ಮ ತಂದೆ ಆನ೦ದಪುರಂನ ವೇದನಾರಾಯಣ ಭಟ್ಟರ ಮನೆಯಿಂದ ತಂದುಕೊಟ್ಟಿದ್ದರು ಅದರಲ್ಲಿ ಅವರ ಸ್ವಂತ ಕ್ಷೌರದ ಬಗ್ಗೆ ಓದಿ ವಿಪಲ ಪ್ರಯತ್ನವೂ ಆಗಿತ್ತು.     2020 ರ ಮಾರ್ಚ್ 24 ರಿಂದ ಕೊರಾನಾ ಲಾಕ್ ಡೌನ್ ಸ್ವಯಂ ಕ್ಷೌರಕ್ಕೆ ಪ್ರೇರಣೆ ಆಯಿತು, ನನ್ನ ಖಾಯಂ ಕ್ಷೌರ ಮಾಡುತ್ತಿದ್ದ ಕೃಷ್ಣ  ಅವರ ಅಜ್ಜ ನಾರಾಯಣಪ್ಪ, ಅವರ ತಂದೆ ಮುನಿಯಣ್ಣ, ಕೃಷ್ಣ, ಅವರ ಮಗನೂ ನನ್ನ ಹೇರ್ ಕಟಿಂಗ್ ಮಾಡಿದವರು ಹೀಗೆ ಅವರ ನಾಲ್ಕು ತಲೆಮಾರಿನ ಸಂಬಂದ ಈ ರೀತಿ ಮುಕ್ತಾಯವಾದೀತೆಂದು ಗೊತ್ತೇ ಇರಲಿಲ್ಲ.    20-ಮಾಚ್೯ -2020 ರಂದು ಕೃಷ್ಣ ನನ್ನ ಕ್ಷೌರ ಮಾಡಿದ್ದು ನನ್ನ ಕೊನೆಯ ಕ್ಷೌರಿಕ ಸಂ...