ಭಾಗ_1_ಜೈನ_ನಿಶಿದಿ_ಮಂಟಪಗಳು #ಸಿದ್ದಪ್ಪನ_ಗುಡಿಗಳಾದಕಥೆ!... ಇತಿಹಾಸದ ಮರೆಯಲ್ಲಿ ಕಳೆದುಹೋದ ಸತ್ಯ ಗರ್ಭಗುಡಿಯ ಕಂಬಗಳು ಹೇಳುವ ಕಥೆ ಜೈನ ಸಲ್ಲೇಖನ ಸ್ಮಾರಕಗಳು ಹಿಂದೂ ದೇವಾಲಯಗಳಾಗಿ ಬದಲಾಗಿದ್ದು ಹೇಗೆ?... ನಮ್ಮ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸುತ್ತಾಡುವಾಗ ಹಾದಿಬೀದಿಯಲ್ಲಿ, ಹೊಲದ ಬದುಗಳಲ್ಲಿ ಸಣ್ಣ ಸಣ್ಣ "ಸಿದ್ದಪ್ಪನ ಗುಡಿ", "ಸಿದ್ಧರ ಮಂಟಪ" ಅಥವಾ "ಸಿದ್ಧೇಶ್ವರ ದೇವಸ್ಥಾನಗಳನ್ನು" ನೀವು ನೋಡಿರುತ್ತೀರಿ. ಆದರೆ ಈ ದೇವಾಲಯಗಳ ಗೋಡೆಗಳ ಒಳಗೆ ಶತಮಾನಗಳ ಹಿಂದಿನ ಒಂದು ಅಪ್ರತಿಮ ತ್ಯಾಗದ ಇತಿಹಾಸ ಅಡಗಿದೆ ಎಂಬುದು ನಿಮಗೆ ಗೊತ್ತೇ?... ಹೌದು ಇಂದು ನಾವು ಪೂಜಿಸುತ್ತಿರುವ ಹಲವು ಸಣ್ಣ ಪುಟ್ಟ ಈಶ್ವರ ಅಥವಾ ಸಿದ್ದಪ್ಪನ ಗುಡಿಗಳು ಮೂಲತಃ ಜೈನ ಧರ್ಮದ "ನಿಶಿದಿ ಮಂಟಪಗಳು", ಸಲ್ಲೇಖನ ಸ್ಮಾರಕಗಳು!... #ಏನಿದು_ನಿಶಿದಿ_ಮಂಟಪ? ಜೈನ ಧರ್ಮದಲ್ಲಿ ಅತ್ಯಂತ ಕಠಿಣವಾದ, ಆಹಾರ-ನೀರನ್ನು ತ್ಯಜಿಸಿ ದೇಹ ಬಿಡುವ 'ಸಲ್ಲೇಖನ ವ್ರತ' ಅಂದರೆ ಸಮಾಧಿ ಮರಣ ಆಚರಿಸಿದ ಮಹಾನ್ ಮುನಿಗಳು ಕೊನೆಯುಸಿರೆಳೆದ ಪವಿತ್ರ ಜಾಗದಲ್ಲಿ ಅವರ ನೆನಪಿಗಾಗಿ ಕಂಬಗಳಿರುವ ಸಣ್ಣ ತೆರೆದ ಮಂಟಪಗಳನ್ನು ಕಟ್ಟಲಾಗುತ್ತಿತ್ತು. ಇದನ್ನೇ 'ನಿಷಿಧಿ' ಅಥವಾ ನಿಶಿದಿ ಮಂಟಪ ಎನ್ನಲಾಗುತ್ತದೆ ಇಲ್ಲಿ ಯಾವುದೇ ದೇವರ ವಿಗ್ರಹ ಇರದೆ ಕೇವಲ ಮುನಿಗಳ ಜೋಡಿ ಪಾದಗಳನ್ನು (ಪಾದುಕೆ) ಕೆತ್ತಲಾಗಿ...