ಭಾಗ_20.
ಘಟ್ಟಕ್ಕೆ_ಕರಾವಳಿಗರ_ವಲಸೆ.
ಮುಂಬೈ_ಕನ್ನಡ_ಸಂಘಗಳು
ಮುಂಬೈ ಮತ್ತು ಕರಾವಳಿ ಕರ್ನಾಟಕದ ನಡುವಿನ ಬಾಂಧವ್ಯ ಶತಮಾನಗಳಷ್ಟು ಹಳೆಯದು.
ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಮುಂಬೈಗೆ ವಲಸೆ ಹೋದ ಕರಾವಳಿಗರು ಹಾಗೂ ಉತ್ತರ ಕರ್ನಾಟಕದ ಕನ್ನಡಿಗರು ತಾವು ನೆಲೆಸಿದ ನೆಲದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಡಲು ಹಲವು ಪ್ರಬಲ ಸಂಸ್ಥೆಗಳನ್ನು ಕಟ್ಟಿದರು.
ಮುಂಬೈನಲ್ಲಿ ದಶಕಗಳಿಂದ ಕನ್ನಡ ಡಿಂಡಿಮವನ್ನು ಬಾರಿಸುತ್ತಾ, ವಲಸಿಗ ಕನ್ನಡಿಗರಿಗೆ ಆಸರೆಯಾಗಿರುವ ಪ್ರಮುಖ ಕನ್ನಡ ಸಂಘಗಳ ಕೆಲಸ ಶ್ಲಾಘನೀಯವಾದದ್ದು.
1.#ಮುಂಬಯಿ_ಕನ್ನಡ_ಸಂಘ_ಮಾಟುಂಗಾ.
ಇದು ಮುಂಬೈನ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಕನ್ನಡ ಸಂಸ್ಥೆಗಳಲ್ಲಿ ಒಂದಾಗಿದೆ.
1936ರಲ್ಲಿ ಸ್ಥಾಪನೆಯಾದ ಈ ಸಂಘವು ಮುಂಬೈನಲ್ಲಿ ಕನ್ನಡ ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ.
ವರ್ಷಪೂರ್ತಿ ಕವಿಗೋಷ್ಠಿಗಳು, ಪುಸ್ತಕ ಬಿಡುಗಡೆ, ನಾಟಕೋತ್ಸವಗಳು ಮತ್ತು ಪ್ರಸಿದ್ಧ ಸಾಹಿತಿಗಳ ಜನ್ಮದಿನೋತ್ಸವಗಳನ್ನು ಆಯೋಜಿಸುತ್ತದೆ.
ಮುಂಬೈ ಕನ್ನಡಿಗರಿಗೆ ಓದಲು ಉತ್ತಮ ಕನ್ನಡ ಗ್ರಂಥಾಲಯವನ್ನು Library ನಡೆಸುತ್ತಿದೆ.
ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಶಿವರಾಮ ಕಾರಂತರು, ಕುವೆಂಪು, ಬೇಂದ್ರೆ ಮುಂತಾದವರು ಈ ಸಂಘಕ್ಕೆ ಭೇಟಿ ನೀಡಿ ಉಪನ್ಯಾಸ ನೀಡಿದ್ದಾರೆ.
1.#ಮೈಸೂರು_ಅಸೋಸಿಯೇಷನ್ ಮುಂಬೈ (ಮಾಟುಂಗಾ).
1936ರಲ್ಲೇ ಸ್ಥಾಪನೆಯಾದ ಅತ್ಯಂತ ಐತಿಹಾಸಿಕ ಸಂಸ್ಥೆ. ಆರಂಭದಲ್ಲಿ ಮುಂಬೈಗೆ ಬಂದ ಮೈಸೂರು ಪ್ರಾಂತ್ಯದ ಕನ್ನಡಿಗರು ಇದನ್ನು ಕಟ್ಟಿದರೂ ಕಾಲಕ್ರಮೇಣ ಇದು ಇಡೀ ಮುಂಬೈ ಕನ್ನಡಿಗರ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಯಿತು.
ಈ ಸಂಸ್ಥೆಯು ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ, ಇಲ್ಲಿನ ಸುಸಜ್ಜಿತ ರಂಗಮಂದಿರದಲ್ಲಿ ನಿರಂತರವಾಗಿ ಕನ್ನಡ ನಾಟಕಗಳು ಪ್ರದರ್ಶನಗೊಳ್ಳುತ್ತವೆ.
ಕರ್ನಾಟಕ ಸಂಗೀತ, ಭರತನಾಟ್ಯ ಹಾಗೂ ಯಕ್ಷಗಾನ ತರಬೇತಿ ಮತ್ತು ಪ್ರದರ್ಶನಗಳಿಗೆ ಈ ಅಸೋಸಿಯೇಷನ್ ಮುಂಬೈನಲ್ಲಿ ದೊಡ್ಡ ವೇದಿಕೆಯಾಗಿದೆ.
3.#ಮೊಗವೀರ_ವ್ಯವಸ್ಥಾಪಕ_ಮಂಡಳಿ ಮತ್ತು #ಬಂಟರ_ಸಂಘ
ಇವು ಕರಾವಳಿಯಿಂದ ಮುಂಬೈಗೆ ವಲಸೆ ಹೋದ ನಿರ್ದಿಷ್ಟ ಸಮುದಾಯಗಳು ಕಟ್ಟಿದ ಸಂಸ್ಥೆಗಳಾದರೂ ಇವುಗಳ ಸಾಂಸ್ಕೃತಿಕ ಕೊಡುಗೆ ಇಡೀ ಕನ್ನಡ ಸಮಾಜಕ್ಕೆ ಸಂದಿದೆ.
#ಬಂಟರ_ಸಂಘ_ಕುರ್ಲಾ.
ಮುಂಬೈ ಬಂಟರ ಸಂಘವು ಅತ್ಯಂತ ಬಲಿಷ್ಠ ಸಂಸ್ಥೆಯಾಗಿದ್ದು, ಮುಂಬೈನಲ್ಲಿ ಕನ್ನಡ ಮಾಧ್ಯಮದ ಶಾಲೆಗಳು, ಕಾಲೇಜುಗಳನ್ನು ನಡೆಸುತ್ತಿದೆ.
ಕರಾವಳಿಯ ಯಕ್ಷಗಾನ ಮತ್ತು ತುಳು-ಕನ್ನಡ ನಾಟಕಗಳಿಗೆ ಭಾರಿ ಪ್ರೋತ್ಸಾಹ ನೀಡುತ್ತದೆ.
#ಮೊಗವೀರ_ವ್ಯವಸ್ಥಾಪಕ_ಮಂಡಳಿ.
ಮುಂಬೈಗೆ ಬಂದ ಆರಂಭಿಕ ಕರಾವಳಿ ವಲಸಿಗರಿಗೆ ರಾತ್ರಿ ಶಾಲೆಗಳು ಮತ್ತು ಉಚಿತ ವಸತಿ ನಿಲಯಗಳನ್ನು ಒದಗಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಸಂಸ್ಥೆ ಇದು.
4.#ಗೋಕರ್ಣ_ಪರ್ತಗಾಳಿ_ಜೀವೋತ್ತಮ_ಮಠ ಮತ್ತು #ಜಿ_ಎಸ್_ಬಿ_ಸಭಾ_ಸಾಯನ್.
ಕರಾವಳಿಯ ಗೌಡ ಸಾರಸ್ವತ ಬ್ರಾಹ್ಮಣ (GSB) ಸಮುದಾಯದವರು ಮುಂಬೈನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಸಕ್ರಿಯರಾಗಿದ್ದಾರೆ.
ಸಾಯನ್‌ನ ಜಿ.ಎಸ್.ಬಿ ಸಭಾ ಮತ್ತು ಮಠಗಳ ನೇತೃತ್ವದಲ್ಲಿ ಪ್ರತಿವರ್ಷ ದಾಸರ ಪದಗಳ ಗಾಯನ, ಹರಿಕಥಾ ಸಪ್ತಾಹಗಳು ಮತ್ತು ಸಾಂಪ್ರದಾಯಿಕ ಉತ್ಸವಗಳು ನಡೆಯುತ್ತವೆ.
ಕರಾವಳಿಯ ಪ್ರಸಿದ್ಧ ಕೀರ್ತನಕಾರರನ್ನು ಮುಂಬೈಗೆ ಕರೆಸಿ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಇವರ ಪಾತ್ರ ದೊಡ್ಡದು.
5.#ಮುಂಬೈ_ವಿಶ್ವವಿದ್ಯಾಲಯದ_ಕನ್ನಡ ವಿಭಾಗ.
ಇದು ಕೇವಲ ಸಂಘವಲ್ಲದಿದ್ದರೂ ಮುಂಬೈನಲ್ಲಿ ಕನ್ನಡ ಭಾಷೆಯ ಶೈಕ್ಷಣಿಕ ಅಸ್ತಿತ್ವವನ್ನು ಕಾಯ್ದುಕೊಂಡಿರುವ ಪ್ರಮುಖ ಕೇಂದ್ರವಾಗಿದೆ.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕರಾವಳಿ ಮತ್ತು ಮುಂಬೈ ಕನ್ನಡಿಗರ ಸಾಹಿತ್ಯಿಕ ಸಂಶೋಧನೆಗಳಿಗೆ ದೊಡ್ಡ ವೇದಿಕೆ ಕಲ್ಪಿಸಿದೆ.
ಮುಂಬೈ ಕನ್ನಡಿಗರ ಇತಿಹಾಸ ವಲಸೆಯ ಇತಿಹಾಸದ ಕುರಿತು ಹಲವು ಮಹತ್ವದ ಪುಸ್ತಕಗಳನ್ನು ಈ ವಿಭಾಗ ಪ್ರಕಟಿಸಿದೆ.
6.#ಉಪನಗರಗಳ_ಕನ್ನಡ_ಸಂಘಗಳು.
ಮುಂಬೈ ವಿಶಾಲವಾಗಿ ಬೆಳೆದಂತೆ ಕನ್ನಡಿಗರು ಹೆಚ್ಚಾಗಿ ವಾಸಿಸುವ ವಿವಿಧ ಉಪನಗರಗಳಲ್ಲಿ ಪ್ರತ್ಯೇಕ ಕನ್ನಡ ಸಂಘಗಳು ಹುಟ್ಟಿಕೊಂಡವು.
#ಡೊಂಬಿವಲಿ_ಕನ್ನಡ_ಸಂಘ
#ಕಲ್ಯಾಣ್_ಕನ್ನಡ_ಸಂಘ
#ಬೊರಿವಲಿ_ಕನ್ನಡ_ಸಂಘ
#ಥಾಣೆ_ಕನ್ನಡ_ಸಂಘ
#ಮುಂಬೈ_ಕನ್ನಡ_ಕಲಾ_ಸಂಘ
#ಚೆಂಬೂರು_ಕರ್ನಾಟಕ_ಸಂಘ (ಇದು ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ).
ಈ ಉಪನಗರ ಸಂಘಗಳು ಸ್ಥಳೀಯವಾಗಿ ಗಣೇಶೋತ್ಸವ, ಶಾರದೋತ್ಸವ ಮತ್ತು ಕನ್ನಡ ರಾಜ್ಯೋತ್ಸವಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತವೆ.
ಊರಿನಿಂದ ಯಕ್ಷಗಾನ ಮೇಳಗಳನ್ನು ಕರೆಯಿಸಿ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುವುದು ಇವುಗಳ ಮುಖ್ಯ ಆಕರ್ಷಣೆ.
ಈ ಸಂಘಗಳು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿರಲಿಲ್ಲ ಆರಂಭದ ದಿನಗಳಲ್ಲಿ ಊರಿನಿಂದ ಮುಂಬೈಗೆ ಬರಿಗೈಲಿ ಬರುತ್ತಿದ್ದ ಕರಾವಳಿಯ ಯುವಕರಿಗೆ ಆರಂಭಿಕ ದಿನಗಳಲ್ಲಿ ಉಳಿದುಕೊಳ್ಳಲು ರೂಮು ಕೊಟ್ಟು ಹೋಟೆಲ್‌ಗಳಲ್ಲಿ ಕೆಲಸ ಕೊಡಿಸಲು ಅಥವಾ ಶೈಕ್ಷಣಿಕ ನೆರವು ನೀಡಲು ಈ ಸಂಘಗಳು ಕರಾವಳಿಗರ ಪಾಲಿಗೆ "ದೊಡ್ಡಣ್ಣ"ನಂತೆ ಬೆಂಬಲವಾಗಿ ನಿಂತಿದ್ದವು.
#coastal #migration #mubai #kannadasanga
#hotels #employment #chemburu #thane #borivile
#KALYAN
Comments
Post a Comment