ಡಾ_ಶ್ರೀಕಂಠಕೂಡಿಗೆ_ಅವರ_79ನೇ_ಹುಟ್ಟು_ಹಬ್ಬದ_ಶುಭಾಶಯಗಳು. ಶ್ರೀಕಂಠ ಕೂಡಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೂಡಿಗೆ ಊರಿನವರು, ಶಿಕ್ಷಣ -ಸಾಹಿತ್ಯ ಮತ್ತು ಜನಪದ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ,ಇವರ ಜನ್ಮ ದಿನಾಂಕ -5-ಸೆಪ್ಟೆಂಬರ್-1947 ಇವತ್ತು ಅವರ 79 ನೇ ಹುಟ್ಟುಹಬ್ಬ. ಪದವಿ ವಿದ್ಯಾರ್ಥಿಗಳಿಗೆ ಕೂಡಿಗೆ ಅವರು ಬರೆದ ಪಾಠಗಳಿತ್ತು, ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ತರುವಲ್ಲಿ ಇವರ ಶ್ರಮವೂ ಇದೆ. ಆದರೆ ಅದೇ ಕುವೆಂಪು ವಿವಿ ಕುಲಪತಿ ಆಗುವ ಆರ್ಹತೆ ಇವರಿಗೆ ಇದ್ದರೂ ಶಿವಮೊಗ್ಗದವರೇ ಉನ್ನತ ಶಿಕ್ಷಣ ಸಚಿವರಾದರೂ ಇವರನ್ನು ಕುಲಪತಿ ಮಾಡಲಿಲ್ಲ. ಈ ವಾಮನವತಾರಿಯ ಹಿನ್ನೆಲೆ ನೋಡಿ ಇದು ಒಂದು ರೀತಿ ಪ್ರತಿಭೆಯ ವಿಶ್ವದರ್ಶನ ಆಗಿದೆ ಅದರಲ್ಲೂ ಇವರ ಕನ್ನಡ ಕೈ ಬರಹ ಮಾತ್ರ ಅತ್ಯಂತ ಸುಂದರ. ಇವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ, ಪಿ ಹೆಚ್ ಡಿ ಪದವೀದರರು, ಚಿನ್ನದ ಪದಕ ವಿಜೇತರರು ಶ್ರೀಯುತರು ಉತ್ತಮ ಪ್ರಾಧ್ಯಾಪಕರು, ಸೃಜನಶೀಲ ಲೇಖಕರು ಮತ್ತು ಪ್ರಸಿದ್ಧ ಜನಪದ ತಜ್ಞರು. ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ತರಲು ಇವರ ವಿಶೇಷ ಪ್ರಯತ್ನವಿದೆ ನಂತರ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಆಗೇ ಬಿಟ್ಟರು ಎಂಬ ಸುದ್ದಿ ಇತ್ತು ಆದರೆ ಜೆಲ್ಲೆಯ ರಾಜಕಾರಣಿಗಳು ಈ ಹುದ್ದೆಯನ್ನೆ ಮಾರಿಕೊಂಡರು. ಈ ವಿಚಾರದ...