Skip to main content

Posts

Showing posts from February, 2019

#ರೈತ ನಾಯಕ ಪೋಪೆಸರ್ ನಂಜುಂಡ ಸ್ವಾಮಿಯವರ 15ನೇ ಪುಣ್ಯತಿಥಿ ನೆನಪು#

#ಇವತ್ತು ಪ್ರೋಫೆಸರ್ ನಂಜು೦ಡಸ್ವಾಮಿಯವರ 15 ನೇ ಪುಣ್ಯತಿಥಿ# 1999 ರಲ್ಲಿ ನನ್ನ ಮನೆಗೆ ಅವರು ಬಂದದ್ದು ನನಗಿOತ ನನ್ನ ತಂದೆಗೆ ತುಂಬಾ ಸಂತೋಷ ಆಗಿತ್ತು, ಇವರ ಬಾಷಣ ಜಿಲ್ಲೆಯಲ್ಲಿ ಎಲ್ಲೇ ಇದ್ದರೂ ಹೋಗುತ್ತಿದ್ದರು, ಇವರ ಜೈಲ್ ಬರೋ ಕರೆಯಿಂದ ಜೈಲಿಗೂ ಹೋಗಿದ್ದರು ಅವತ್ತು ಪ್ರೋಫೆಸರ್ ಗೆ ನಮ್ಮ ತಂದೆ ಹೂವಿನ ಹಾರ ಹಾಕಿದರು ಯಾರಿಂದಲೂ ಹಾರ ಸ್ವೀಕರಿಸದ ಅವರು ನಮ್ಮ ತಂದೆಯ ಅನಾರೋಗ್ಯ, ವಯಸ್ಸು ಮತ್ತು ಅಭಿಮಾನಕ್ಕಾಗಿ ಹಾರ ಹಾಕಿಸಿಕೊಂಡೆ ಎಂದು ನಗು ಬೀರಿದರು.    ಒಮ್ಮೆ ಮೈಸೂರಿಗೆ ಹೋಗುವಾಗ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್ ಮತ್ತು ನಾನು ಪ್ರೊಫೆಸರ್ ವಾಸಿಸುತ್ತಿದ್ದ ರಾಜರಾಜೇಶ್ವರಿ ನಗರದ ಅವರ ಮನೆಗೆ ಹೋಗಿದ್ದೆವು, ತುಂಬಾ ಕೆಮ್ಮು ಕಾಡುತ್ತಿತ್ತು ಅವರಿಗೆ ಟೀಪಾಯಿ ಮೇಲೆ ಬೀಡಿ ಇಟ್ಟುಕೊಂಡಿದ್ದರು, ಸಿಗರೇಟು ಬಿಟ್ಟಿರಾ? ಎಂದೆ ಅದಕ್ಕೆ ಅವರು ತುಂಬಾ ಕೆಮ್ಮು ಅದಕ್ಕೆ ಈ ತಂಬಾಕು ಇಲ್ಲದ ನೀಲಗಿರಿ ಸೊಪ್ಪಿನ ಬೀಡಿ ಸೇ ಯುತ್ತಾ ಇದ್ದೇನೆ ಅಂದರು, ವಾಪಾಸು ನಾವು ಹೊರಟಾಗ ನನಗೆ ಒಂದು ಕಟ್ಟು ಬೀಡಿ ಕೊಟ್ಟರು, ನಾನು ದೂಮಪಾನ ಮಾಡುವುದಿಲ್ಲ ಆದರೆ ಅದೇನು ಹೇಳದೆ ಸ್ಟೀಕರಿಸಿದೆ, ಆ ಬೀಡಿ ಹೆಸರು ವದ೯ಮಾನ ಬಿಡಿ ಎಂದು ನೆನಪು.    ಅವರ ಬಂಡಿ ಯಾತ್ರೆ (ಕನ್ಯಾಕುಮಾರಿಯಿ೦ದ ಮು೦ಬೈ ವರೆಗೆ) ಸಾಗರ ತಾಲ್ಲೂಕಿಗೆ ಬಂದಾಗ ನನ್ನ ಮನೆ ಯಡೇಹಳ್ಳಿಯಿಂದ ಸ್ವಾಗತಿಸಿ ಸಭೆ ನಡೆಸಿ ಸಾಗರದವರೆಗೆ ನಾನು, ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ 

# ಜಾಜ್೯ ಪನಾ೯೦ಡಿಸ್ ನೆನಪುಗಳು 4.#

ದೆಹಲಿಯ ಜಾಜ್ ೯ ಪನಾ೯೦ ಡಿ ಸ್ ರ ಮನೆ ಗೇಟು ನಾಪ ತ್ತೆ ಆಗಿ ದ್ದು ಏಕೆ?    ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂದ ಅವರು ವಾಸಿಸುತ್ತಿದ್ದು ನಂ 3 , ಕೃಷ್ಣ ಮೆನನ್ ಮಾಗ್೯ ನವದೆಹಲಿ.     ಒಂದು ದಿನ ಜಾಜ್೯ರು ತಮ್ಮ ನೀಲಿ ಬಣ್ಣದ ಪಿಯಟ್ ಕಾರು ಚಲಾಯಿಸಿಕೊಂಡು ಪಾಲಿ೯ಮೆಂಟ್ ನಿಂದ ಬಂದಾಗ ಜಾಜ್೯ರ ಮನೆ ಗೇಟು ಹಾಕಿತ್ತು, ಪ್ರತಿ ದಿನ ಬೆಳಿಗ್ಗೆ 6ಕ್ಕೆ ಗೇಟು ತೆರೆದರೆ ಮಧ್ಯದಲ್ಲಿ ಹಾಕುವುದಿಲ್ಲ ಹೀಗೇಕೆ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದದ್ದು ಏನೆಂದರೆ ಇವರ ಬಂಗಲೆಯ ಎದುರಿನಲ್ಲಿ ನಂ.6. ರ ಬಂಗಲೆ ಅವತ್ತಿನ ಕೇಂದ್ರ ಗೃಹ ಮಂತ್ರಿ S. B. ಚೌಹಾಣರದ್ದು ಅವರ ರಕ್ಷಣೆಯ ಹೊಣೆ ಹೊತ್ತ ಬ್ಲಾಕ್ ಕಮ್ಯಾ೦ಡೊಗಳು ಗೃಹ ಸಚಿವರು ಮನೆಯಿಂದ ಹೋಗಿ ಬರುವ ಸಮಯದಲ್ಲಿ ಸುತ್ತಮುತ್ತದ ಎಲ್ಲಾ ಬಂಗಲೆಗಳ ಗೇಟ್ ಮುಚ್ಚಿ ಬಿಡುತ್ತಿದ್ದರು.   ಈ ಬಗ್ಗೆ ಜಾಜ್೯ರು ಬ್ಲಾಕ್ ಕಮಾ೦ಡೋಗಳಿಗೆ ವಿಚಾರಿಸುತ್ತಾರೆ ಅವರು ರಕ್ಷಣಾ ಉದ್ದೇಶದಿಂದ ಇದನ್ನ ನಿರಂತರ ಮಾಡಲೇ ಬೇಕಾಗಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ.   ಮರು ದಿನ ಬ್ಲಾಕ್ ಕಮಾಂಡೋಗಳು ಅಚ್ಚರಿ ಪಡುತ್ತಾರೆ, ಗೃಹ ಮಂತ್ರಿಗಳ ಎದುರಿನ ಜಾಜ್೯ ಪನಾ೯Oಡಿಸರ ಮನೆಯ ಗೇಟುಗಳೆ ನಾಪತ್ತೆ!?   ಅಂದಿನಿಂದ ಜನವರಿ 20 I9ರ ಕೊನೆ ದಿನಗಳವರೆಗೆ ಜಾಜ್೯ರ ನಂ 3 ಕೃಷ್ಣ ಮೆನನ್ ಮಾಗ೯ದ ಬಂಗಲೆ ದಿನದ 2

#ಜಾಜ್೯ ಪನಾ೯೦ಡಿಸ್ ನೆನಪುಗಳು 1. #

# ವಿಶಿಷ್ಟ ವ್ಯಕ್ತಿತ್ವದ ಜಾಜ್೯(1) #   ಕೇರಳ ರಾಜ್ಯದ ಯುವಕ 200O ಇಸವಿಯಿಂದ ಸೋಪಿನ ಪುಡಿಯ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಎಲ್ಲಾ ಬ್ಯಾಂಕ್‌ಗಳಿಗೆ ಅಲೆದಾಡಿ ಸುಸ್ತಾಗಿದ್ದ.   ಸಮತಾ ಪಾಟಿ೯ಯ ಕಾಯ೯ಕತ೯ನಾಗಿದ್ದ ಆತ ಒಮ್ಮೆ ದೆಹಲಿಯಲ್ಲಿ ಸಾಲ ಕೊಡಿಸಿ ಅಂತ ಜಾಜ್೯ರಿಗೆ ಮನವಿ ನೀಡಿದ್ದ.   ಜಾಜ್೯ ಯಾವುದೋ ಬ್ಯಾಂಕ್ ಒಂದರ ಚೇಮ೯ನರಿಗೆ ಶಿಪಾರಸ್ಸು ಮಾಡಿದ್ದರಿಂದ ಆ ಯುವಕ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿ ಆದನು, ಇದಕ್ಕೆ ಸಹಾಯ ಮಾಡಿದ ಜಾಜ್೯ರಿಗೆ ಒಂದು ಕೃಜ್ಞತೆ ಪತ್ರ ಅದರ ಜೊತೆ ಅವನು ತಯಾರಿಸುವ ಒಂದು ಸೋಪಿನ ಪುಡಿ ಪೊಟ್ಟಣ ಮಾದರಿ ತೋರಿಸಲು ಕಳಿಸಿದ್ದ.   ಕೆಲವು ದಿನದ ನಂತರ ಆ ಯುವಕನಿಗೆ ದೇಶದ ಪ್ರತಿಷ್ಠಿತ ಪಂಚತಾರ ಹೋಟೆಲ್ ಆದ ಲಲಿತಾ ಪ್ಯಾಲೇಸ್ ನಿಂದ ಪ್ರತಿ ತಿಂಗಳು 6 ಟನ್ ಸೋಪಿನ ಪುಡಿಯ ಆಡ೯ರ್ ಅಂಚೆಯಲ್ಲಿ ಬಂದಾಗ ಯುವ ಉದ್ಯಮಿ ತಬ್ಬಿಬ್ಬಾಗಿದ್ದ.    ವಾಸ್ತವ ಏನಾಗಿತ್ತೆ೦ದರೆ, ಆ ಯುವಕ ಕಳಿಸಿದ ಸೋಪಿನ ಪುಡಿಯನ್ನ ಸ್ವತಃ ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವ ರಕ್ಷಣಾ ಸಚಿವರು ಬಳಸಿದಾಗ ಅವರಿಗೆ ಆ ಸೋಪಿನ ಪುಡಿಯ ಕಾಯ೯ಕ್ಷಮತೆ ಹಿಡಿಸಿತು ಹಾಗಾಗಿ ಅವರು ಲಲಿತಾ ಪ್ಯಾಲೇಸ್ ನ ಮಾಲಿಕರಾದ ನಿವೃತ್ತ ಕನ೯ಲ್ ರಿಗೆ ಪತ್ರ ಬರೆದು "ಈ ಸೋಪಿನ ಪುಡಿ ನಾನು ಸ್ವತಃ ಬಳಸಿ ನೋಡಿದ್ದೇನೆ ಉತ್ತಮವಾಗಿದೆ ಹಾಗಾಗಿ ಹೊಸದಾಗಿ ಉದ್ಯಮ ಸ್ಥಾಪನೆ ಮಾಡಿರುವ ಕೇರಳದ ಯುವಕನಿಗೆ ನಿಮ್ಮ ಸಂಸ್ಥೆಗೆ ಬೇಕಾದ ಸೋಪಿನ ಪುಡಿ ಖರೀದಿಸ

#ಜಾಜ್೯ ಪನಾ೯೦ಡಿಸ್ ನೆನಪುಗಳು 3 #

# ಜಾಜ್೯ ನೆನಪು 3.#        ಜಾಜ್೯ ತಮಗೆ ಬಂದ ಪತ್ರಗಳನ್ನ ಸ್ವತಃ ಓದಿ ಉತ್ತರಿಸುವುದಾದರೂ ಹೇಗೆ? ಅಷ್ಟೆಲ್ಲ ದೊಡ್ಡ ಜವಾಬ್ದಾರಿಯ ಜನ ಇದಕ್ಕೆ ಸಮಯ ಎಲ್ಲಿ? ಬಹುಷ: ಅವರ ಆಪ್ತರಾಗಿದ್ದ ಅನಿಲ್ ಹೆಗ್ಗಡೆ ಜಾಜ್೯ ಪರವಾಗಿ ನಿವ೯ಹಿಸುತ್ತಿರ ಬಹುದೆಂದು ಬಾವಿಸಿದ್ದೆ.       ಈ ಬಗ್ಗೆ ಅನಿಲ್ ಗೆ ಕೇಳಿದಾಗ ಬಂದ ಉತ್ತರ ಕೇಳಿ ನನಗೆ ಆಶ್ಚಯ೯ ಆಯಿತು, ಆಯಾ ದಿನದ ಪತ್ರಿಕೆ ಅವತ್ತೇ ಓದಿ ಬಿಡುವುದು ಮತ್ತು ಪ್ರತಿ ದಿನದ ಪತ್ರಗಳನ್ನ ರಾತ್ರಿಯೇ ಓದಿ ಅದಕ್ಕೆ ಉತ್ತರಿಸುವುದು ಜಾಜ್೯ ರ ಅಭ್ಯಾಸ.     ಇದಕ್ಕಾಗಿ ಜಾಜ್೯ ಒಂದು ಸರಳ ವಿದಾನ ಅಳವಡಿಸಿದ್ದರು, ಪ್ರತಿ ಪತ್ರಕ್ಕೆ ಕ್ರಮ ಸಂಖ್ಯೆ ಹಾಕಿ ಆ ಪತ್ರ ಓದುತ್ತಿದ್ದರು ನಂತರ ಇದಕ್ಕಾಗಿ ಒಂದು ಟೇಪ್ ರೆಕಾಡ್೯ರ್ ಇಟ್ಟುಕೊಂಡಿದ್ದರು ಅದರಲ್ಲಿ ಪತ್ರ ಸಂಖ್ಯೆ ಹೇಳಿ ಅದಕ್ಕೆ ಉತ್ತರಿಸಬೇಕಾದ ಕಂಟೆಂಟ್ ರೆಕಾಡ್೯ ಮಾಡಿಬಿಡುತ್ತಿದ್ದರು.   ಮರುದಿನ ಸಿಬ್ಬ೦ದಿ ಅವರು ಟೇಪ್ ರೆಕಾಡ್೯ನಲ್ಲಿ ನೀಡಿದ ನಿದೇ೯ಶನದಂತೆ ಮರು ಉತ್ತರ ಟೈಪಿಸಿ ಅವರ ಸಹಿಗಾಗಿ ಇಡುತ್ತಿದ್ದರು.       ಇವತ್ತು ನಮ್ಮ ಜನಪ್ರತಿನಿದಿಗಳು ಪತ್ರಿಕೆಯು ಓದುವುದಿಲ್ಲ, ಬಂದ ಪತ್ರಕ್ಕೆ ಉತ್ತರ ಕೊಡುವ ಸೌಜನ್ಯ ಅಭ್ಯಾಸವೂ ಇಲ್ಲ.   ಜಾಜ್೯ರ ದೆಹಲಿ ನಿವಾಸದ ಗೇಟ್ ನಾಪತ್ತೆ ಜಾಜ್೯ ನೆನಪು 4 ರಲ್ಲಿ ಓದಿ.   ನೆನಪಿನ ಬರಹ: ಕೆ.ಅರುಣ್ ಪ್ರಸಾದ್.   ಒಂದು ಕಾಲದ ಜಾಜ್೯ಪನಾ೯೦ಡಿಸ್ ರ ಸಮತಾ ಪಾಟಿ೯ಯ ಕನಾ೯ಟಕ ರಾಜ್ಯ ಪ್ರಧಾನ ಕಾಯ೯ದಶಿ೯

# ಜಾಜ೯ ಪನಾ೯oಡೀಸ್ರ ನೆನಪು 2.#

# ಜಾಜ್೯ ನೆನಪು 2#     ಎಲ್ಲಾ ಮಂತ್ರಿಗಳು ದೆಹಲಿಯಲ್ಲಿ ಸಿಕ್ಕರೆ ಜಾಜ್೯ ಮಾತ್ರ ಬೆಳಿಗ್ಗೆ 5 ರಿಂದ 6 ಮಾತ್ರ ಸಿಗುತ್ತಿದ್ದರು.      ಕೇಂದ್ರ ಸಕಾ೯ರದಲ್ಲಿ ಮಂತ್ರಿ ಆದವರನ್ನೆಲ್ಲ ದೆಹಲಿಯಲ್ಲಿ ಭೇಟಿ ಮಾಡಬಹುದು ಆದರೆ ಜಾಜ್೯ರಂತೂ ದೆಹಲಿಯಲ್ಲಿ ಸಿಗುವುದು ತುಂಬಾ ಕಡಿಮೆ.   ಬೆಳಿಗ್ಗೆ 4ಕ್ಕೆ ತಯಾರಾಗುವ ಜಾಜ್೯ ಬೆಳಿಗ್ಗೆ 6ಕ್ಕೆ ಮನೆ ಬಿಟ್ಟು ಬಿಡುತ್ತಿದ್ದರು, ತಮ್ಮ ಹಳೆಯ ಪಿಯಟ್ ಪದ್ಮಿನಿ ಕಾರಿನಲ್ಲಿ ವಿಮಾನ ನಿಲ್ದಾಣ ಸೇರಿ ಅಲ್ಲಿಂದ ವಿಮಾನದಲ್ಲಿ ದೇಶದ ಯಾವುದೋ ಬಾಗ ತಲುಪಿ ಅಲ್ಲಿಂದ ತಡ ರಾತ್ರಿ ದೆಹಲಿ ಸೇರುವುದು ಅವರ ದಿನಚರಿ.   ಇವರ ಪ್ರವಾಸದಲ್ಲಿ ಸಕಾ೯ರಿ ವೆಚ್ಚ ಹೆಚ್ಚಾಗಿ ಶೂನ್ಯದ ಆಸು ಪಾಸು ಆಗಿರುವಂತೆ ಜಾಜ್೯ ನಡೆದು ಕೊಳ್ಳುತ್ತಿದ್ದರು.   ದೂರದ ರಾಜ್ಯ ಪ್ರವಾಸಕ್ಕೆ ಕೇಂದ್ರ ಮಂತ್ರಿ ಆಗಿದ್ದರೂ, ಆಪ್ತ ಸಹಾಯಕರನ್ನು ಕರೆದೊಯ್ತಿರಲಿಲ್ಲ ಎಲ್ಲಾ ಇವರೇ ಸಣ್ಣ ನೋಟ್ ಪುಸ್ತಕದಲ್ಲಿ ಬರೆದುಕೊಂಡು ಬಂದು ಅದನ್ನ ವಿಲೇವಾರಿ ಮಾಡುವುದು ಇವರ ರೂಡಿ.     ಹಾಗಾಗಿ ಜಾಜ್೯ರನ್ನ ಬೇಟಿ ಮಾಡುವವರು ಬೆಳಿಗ್ಗೆ 4ಕ್ಕೆ ದೆಹಲಿಯ ಅವರ ನಿವಾಸದ ಎದರು ಕಾಯುತ್ತಿದ್ದರು.   ಮನೆಗೆ ಬಂದ ಎಲ್ಲರನ್ನ ಮಾತಾಡಿಸಿ ಅವರ ಅಹವಾಲು ಸ್ವೀಕರಿಸಿ ದಿನದ ಮುಂದಿನ ಕೆಲಸಕ್ಕೆ ತೆರಳುತ್ತಿದ್ದರು.    ಪಡೆದ ಪ್ರತಿ ಅಹವಾಲುಗಳನ್ನ ಸ್ವತಃ ಓದಿ ಪರಿಹರಿಸುತ್ತಿದ್ದರು.   ಇದನ್ನ ಭಾಗ 3ರಲ್ಲಿ ಓದಿ.