#ಇವತ್ತು ಪ್ರೋಫೆಸರ್ ನಂಜು೦ಡಸ್ವಾಮಿಯವರ 15 ನೇ ಪುಣ್ಯತಿಥಿ#
1999 ರಲ್ಲಿ ನನ್ನ ಮನೆಗೆ ಅವರು ಬಂದದ್ದು ನನಗಿOತ ನನ್ನ ತಂದೆಗೆ ತುಂಬಾ ಸಂತೋಷ ಆಗಿತ್ತು, ಇವರ ಬಾಷಣ ಜಿಲ್ಲೆಯಲ್ಲಿ ಎಲ್ಲೇ ಇದ್ದರೂ ಹೋಗುತ್ತಿದ್ದರು, ಇವರ ಜೈಲ್ ಬರೋ ಕರೆಯಿಂದ ಜೈಲಿಗೂ ಹೋಗಿದ್ದರು ಅವತ್ತು ಪ್ರೋಫೆಸರ್ ಗೆ ನಮ್ಮ ತಂದೆ ಹೂವಿನ ಹಾರ ಹಾಕಿದರು ಯಾರಿಂದಲೂ ಹಾರ ಸ್ವೀಕರಿಸದ ಅವರು ನಮ್ಮ ತಂದೆಯ ಅನಾರೋಗ್ಯ, ವಯಸ್ಸು ಮತ್ತು ಅಭಿಮಾನಕ್ಕಾಗಿ ಹಾರ ಹಾಕಿಸಿಕೊಂಡೆ ಎಂದು ನಗು ಬೀರಿದರು.
ಒಮ್ಮೆ ಮೈಸೂರಿಗೆ ಹೋಗುವಾಗ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್ ಮತ್ತು ನಾನು ಪ್ರೊಫೆಸರ್ ವಾಸಿಸುತ್ತಿದ್ದ ರಾಜರಾಜೇಶ್ವರಿ ನಗರದ ಅವರ ಮನೆಗೆ ಹೋಗಿದ್ದೆವು, ತುಂಬಾ ಕೆಮ್ಮು ಕಾಡುತ್ತಿತ್ತು ಅವರಿಗೆ ಟೀಪಾಯಿ ಮೇಲೆ ಬೀಡಿ ಇಟ್ಟುಕೊಂಡಿದ್ದರು, ಸಿಗರೇಟು ಬಿಟ್ಟಿರಾ? ಎಂದೆ ಅದಕ್ಕೆ ಅವರು ತುಂಬಾ ಕೆಮ್ಮು ಅದಕ್ಕೆ ಈ ತಂಬಾಕು ಇಲ್ಲದ ನೀಲಗಿರಿ ಸೊಪ್ಪಿನ ಬೀಡಿ ಸೇ ಯುತ್ತಾ ಇದ್ದೇನೆ ಅಂದರು, ವಾಪಾಸು ನಾವು ಹೊರಟಾಗ ನನಗೆ ಒಂದು ಕಟ್ಟು ಬೀಡಿ ಕೊಟ್ಟರು, ನಾನು ದೂಮಪಾನ ಮಾಡುವುದಿಲ್ಲ ಆದರೆ ಅದೇನು ಹೇಳದೆ ಸ್ಟೀಕರಿಸಿದೆ, ಆ ಬೀಡಿ ಹೆಸರು ವದ೯ಮಾನ ಬಿಡಿ ಎಂದು ನೆನಪು.
ಅವರ ಬಂಡಿ ಯಾತ್ರೆ (ಕನ್ಯಾಕುಮಾರಿಯಿ೦ದ ಮು೦ಬೈ ವರೆಗೆ) ಸಾಗರ ತಾಲ್ಲೂಕಿಗೆ ಬಂದಾಗ ನನ್ನ ಮನೆ ಯಡೇಹಳ್ಳಿಯಿಂದ ಸ್ವಾಗತಿಸಿ ಸಭೆ ನಡೆಸಿ ಸಾಗರದವರೆಗೆ ನಾನು, ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಸಾಗರದ ಹಿರಿಯ ರೈತ ನಾಯಕ ಚೆನ್ನಬಸಪ್ಪ ಗೌಡರ ಜೀಪಿನಲ್ಲಿ ಹೋಗಿದ್ದು ಒಂದು ನೆನಪು.
ಅವತ್ತು ಆವಿನಳ್ಳಿಯಲ್ಲಿ ಎತ್ತಿನ ಗಾಡಿ ಮೆರವಣಿಗೆ, ಪ್ರೊಪೆಸರ್ ಗಾಡಿಯಲ್ಲಿ ನಾನು ಮತ್ತು ಗಣಪತಿಯಪ್ಪ ಕುಳಿತಿದ್ದು ಕೂಡ ಇವತ್ತು ನೆನಪಿಸಿಕೊಂಡರೆ ಸಂತೋಷ ಉಂಟು ಮಾಡುತ್ತದೆ.
3 ಪೆಬ್ರುವರಿ 2004ರ ಮಧ್ಯಾಹ್ನ ಸಾಗರದ ರೈತ ಮುಖಂಡರಾದ ಚೆನ್ನಬಸಪ್ಪ ಗೌಡರು, ವಸಂತ ಕುಮಾರ್, ಗುಳಳ್ಳಿ ಬಸವರಾಜ ಗೌಡರು,ಸೇನಾಪತಿಗೌಡರು ಮತ್ತು ಅನೇಕರು ಹೊರಟು ಬೆಳಗಿನ ಜಾವವೇ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪ್ರೋಸೆಸರ್ ರ ಮನೆ ತಲುಪಿದ್ದೆವು.
ಅಲ್ಲಿ ಕೆಲವರು ರೈತಗೀತೆ ಹಾಡುತ್ತಿದ್ದರು, ಬೆಳಗಾಗುತ್ತಿದ್ದ೦ತೆ ಸಾವಿರಾರು ರೈತರು, ಅವರ ಅಭಿಮಾನಿಗಳು ಅಲ್ಲಿ ಸೇರಿದರು, ರೈತ ಮುಖ೦ಡ ಪುಟ್ಟಣ್ಣಯ್ಯನವರು ಅಂತಿಮ ದಶ೯ನಕ್ಕೆ ಬಂದಾಗ ಪ್ರೊಫೆಸರರ ಮಗ ವಿರೋದ ವ್ಯಕ್ತಪಡಿಸಿದ್ದು ಸರಿ ಅನ್ನಿಸಲಿಲ್ಲ.
ರಾಜ್ಯ ಸಕಾ೯ರದ ಪರ ಕಾಗೋಡು ತಿಮ್ಮಪ್ಪ ಅಂತಿಮ ಗೌರವ ಸಲ್ಲಿಸಿದರು ನಂತರ ರೈತ ನಾಯಕರ ಅಂತ್ಯ ಸಂಸ್ಕಾರ ನಡೆಯುವ ಸ್ಥಳ ಮೈಸೂರಿಗೆ ಯಾತ್ರೆ ಪ್ರಾರಂಭವಾಯಿತು.
15 ವಷ೯ ಕಳೆದರೂ ಪ್ರೊಪೆಸರರ ವಿಚಾರಗಳು ರಾಜ್ಯದ ಜನ ಮನದಿಂದ ಮಾಸಿಲ್ಲ ಆದರೆ ಅದರ ನವೀಕರಣ ಆಗುತ್ತಿದ್ದರೆ ಮಾತ್ರ ಮುಂದಿನ ಜನಾಂಗಕ್ಕೆ ತಲುಪಬಹುದು.
ನೆನಪು/ಬರಹ: ಕೆ.ಅರುಣ್ ಪ್ರಸಾದ್.
ಮಾಜಿ ಜಿ.ಪಂ ಸದಸ್ಯ.
ಆನಂದಪುರಂ.
Comments
Post a Comment