# ಜಾಜ್೯ ನೆನಪು 3.#
ಜಾಜ್೯ ತಮಗೆ ಬಂದ ಪತ್ರಗಳನ್ನ ಸ್ವತಃ ಓದಿ ಉತ್ತರಿಸುವುದಾದರೂ ಹೇಗೆ? ಅಷ್ಟೆಲ್ಲ ದೊಡ್ಡ ಜವಾಬ್ದಾರಿಯ ಜನ ಇದಕ್ಕೆ ಸಮಯ ಎಲ್ಲಿ? ಬಹುಷ: ಅವರ ಆಪ್ತರಾಗಿದ್ದ ಅನಿಲ್ ಹೆಗ್ಗಡೆ ಜಾಜ್೯ ಪರವಾಗಿ ನಿವ೯ಹಿಸುತ್ತಿರ ಬಹುದೆಂದು ಬಾವಿಸಿದ್ದೆ.
ಈ ಬಗ್ಗೆ ಅನಿಲ್ ಗೆ ಕೇಳಿದಾಗ ಬಂದ ಉತ್ತರ ಕೇಳಿ ನನಗೆ ಆಶ್ಚಯ೯ ಆಯಿತು, ಆಯಾ ದಿನದ ಪತ್ರಿಕೆ ಅವತ್ತೇ ಓದಿ ಬಿಡುವುದು ಮತ್ತು ಪ್ರತಿ ದಿನದ ಪತ್ರಗಳನ್ನ ರಾತ್ರಿಯೇ ಓದಿ ಅದಕ್ಕೆ ಉತ್ತರಿಸುವುದು ಜಾಜ್೯ ರ ಅಭ್ಯಾಸ.
ಇದಕ್ಕಾಗಿ ಜಾಜ್೯ ಒಂದು ಸರಳ ವಿದಾನ ಅಳವಡಿಸಿದ್ದರು, ಪ್ರತಿ ಪತ್ರಕ್ಕೆ ಕ್ರಮ ಸಂಖ್ಯೆ ಹಾಕಿ ಆ ಪತ್ರ ಓದುತ್ತಿದ್ದರು ನಂತರ ಇದಕ್ಕಾಗಿ ಒಂದು ಟೇಪ್ ರೆಕಾಡ್೯ರ್ ಇಟ್ಟುಕೊಂಡಿದ್ದರು ಅದರಲ್ಲಿ ಪತ್ರ ಸಂಖ್ಯೆ ಹೇಳಿ ಅದಕ್ಕೆ ಉತ್ತರಿಸಬೇಕಾದ ಕಂಟೆಂಟ್ ರೆಕಾಡ್೯ ಮಾಡಿಬಿಡುತ್ತಿದ್ದರು.
ಮರುದಿನ ಸಿಬ್ಬ೦ದಿ ಅವರು ಟೇಪ್ ರೆಕಾಡ್೯ನಲ್ಲಿ ನೀಡಿದ ನಿದೇ೯ಶನದಂತೆ ಮರು ಉತ್ತರ ಟೈಪಿಸಿ ಅವರ ಸಹಿಗಾಗಿ ಇಡುತ್ತಿದ್ದರು.
ಇವತ್ತು ನಮ್ಮ ಜನಪ್ರತಿನಿದಿಗಳು ಪತ್ರಿಕೆಯು ಓದುವುದಿಲ್ಲ, ಬಂದ ಪತ್ರಕ್ಕೆ ಉತ್ತರ ಕೊಡುವ ಸೌಜನ್ಯ ಅಭ್ಯಾಸವೂ ಇಲ್ಲ.
ಜಾಜ್೯ರ ದೆಹಲಿ ನಿವಾಸದ ಗೇಟ್ ನಾಪತ್ತೆ ಜಾಜ್೯ ನೆನಪು 4 ರಲ್ಲಿ ಓದಿ.
ನೆನಪಿನ ಬರಹ: ಕೆ.ಅರುಣ್ ಪ್ರಸಾದ್.
ಒಂದು ಕಾಲದ ಜಾಜ್೯ಪನಾ೯೦ಡಿಸ್ ರ ಸಮತಾ ಪಾಟಿ೯ಯ ಕನಾ೯ಟಕ ರಾಜ್ಯ ಪ್ರಧಾನ ಕಾಯ೯ದಶಿ೯
Comments
Post a Comment