ದೆಹಲಿಯ ಜಾಜ್೯ ಪನಾ೯೦ಡಿಸ್ ರ
ಮನೆ ಗೇಟು ನಾಪತ್ತೆ ಆಗಿದ್ದು ಏಕೆ?
ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂದ ಅವರು ವಾಸಿಸುತ್ತಿದ್ದು ನಂ 3 , ಕೃಷ್ಣ ಮೆನನ್ ಮಾಗ್೯ ನವದೆಹಲಿ.
ಒಂದು ದಿನ ಜಾಜ್೯ರು ತಮ್ಮ ನೀಲಿ ಬಣ್ಣದ ಪಿಯಟ್ ಕಾರು ಚಲಾಯಿಸಿಕೊಂಡು ಪಾಲಿ೯ಮೆಂಟ್ ನಿಂದ ಬಂದಾಗ ಜಾಜ್೯ರ ಮನೆ ಗೇಟು ಹಾಕಿತ್ತು, ಪ್ರತಿ ದಿನ ಬೆಳಿಗ್ಗೆ 6ಕ್ಕೆ ಗೇಟು ತೆರೆದರೆ ಮಧ್ಯದಲ್ಲಿ ಹಾಕುವುದಿಲ್ಲ ಹೀಗೇಕೆ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದದ್ದು ಏನೆಂದರೆ ಇವರ ಬಂಗಲೆಯ ಎದುರಿನಲ್ಲಿ ನಂ.6. ರ ಬಂಗಲೆ ಅವತ್ತಿನ ಕೇಂದ್ರ ಗೃಹ ಮಂತ್ರಿ S. B. ಚೌಹಾಣರದ್ದು ಅವರ ರಕ್ಷಣೆಯ ಹೊಣೆ ಹೊತ್ತ ಬ್ಲಾಕ್ ಕಮ್ಯಾ೦ಡೊಗಳು ಗೃಹ ಸಚಿವರು ಮನೆಯಿಂದ ಹೋಗಿ ಬರುವ ಸಮಯದಲ್ಲಿ ಸುತ್ತಮುತ್ತದ ಎಲ್ಲಾ ಬಂಗಲೆಗಳ ಗೇಟ್ ಮುಚ್ಚಿ ಬಿಡುತ್ತಿದ್ದರು.
ಈ ಬಗ್ಗೆ ಜಾಜ್೯ರು ಬ್ಲಾಕ್ ಕಮಾ೦ಡೋಗಳಿಗೆ ವಿಚಾರಿಸುತ್ತಾರೆ ಅವರು ರಕ್ಷಣಾ ಉದ್ದೇಶದಿಂದ ಇದನ್ನ ನಿರಂತರ ಮಾಡಲೇ ಬೇಕಾಗಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ.
ಮರು ದಿನ ಬ್ಲಾಕ್ ಕಮಾಂಡೋಗಳು ಅಚ್ಚರಿ ಪಡುತ್ತಾರೆ, ಗೃಹ ಮಂತ್ರಿಗಳ ಎದುರಿನ ಜಾಜ್೯ ಪನಾ೯Oಡಿಸರ ಮನೆಯ ಗೇಟುಗಳೆ ನಾಪತ್ತೆ!?
ಅಂದಿನಿಂದ ಜನವರಿ 20 I9ರ ಕೊನೆ ದಿನಗಳವರೆಗೆ ಜಾಜ್೯ರ ನಂ 3 ಕೃಷ್ಣ ಮೆನನ್ ಮಾಗ೯ದ ಬಂಗಲೆ ದಿನದ 24 ಗಂಟೆಯೂ ಯಾವುದೆ ತಡೆ ಗೇಟು ಇಲ್ಲದೇ ತೆರೆದೇ ಇತ್ತು.
Comments
Post a Comment