Blog number 1113. ಭಾಗ-1. ಆನಂದಪುರಂ ಸಾಹಿತ್ಯ ಹಬ್ಬ ಸ್ಥಳ : ಕೃಷ್ಣ ಸರಸ ಕನ್ವೆನ್ಷನ್ ಹಾಲ್ ದಿನಾಂಕ 11-ಡಿಸೆಂಬರ್ 2022
#ಭಾಗ_1. #ಆನಂದಪುರಂ_ಸಾಹಿತ್ಯಹಬ್ಬ #ನನ್ನ_ಕಾದಂಬರಿ_ಮತ್ತು_ಕಥಾಸಂಕಲದ_ಅವಲೋಕನ #ವಿಶ್ವದಾಖಲೆಯ_ಹಬ್ಬು_ಕುಟುಂಬದೊಡನೆ_ಸಾಹಿತ್ಯ_ಸಂವಾದ. #ಆನಂದಪುರಂ_ಹೋಬಳಿ_ಮತ್ತು_ಸಾಗರ_ತಾಲ್ಲೂಕ್_ಸಾಹಿತ್ಯ_ಪರಿಷತ್_ಆಯೋಜಿಸಿತ್ತು. ಮಳೆಯ ಕಾರಣದಿಂದ ನಮ್ಮ ಕಲ್ಯಾಣ ಮಂಟಪದಲ್ಲಿ ಆನಂದಪುರಂ ಸಾಹಿತ್ಯ ಹಬ್ಬದ ಕಾರ್ಯಕ್ರಮ ಒಂದು ಘಂಟಿ ತಡವಾಯಿತು. ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶ್ವ ದಾಖಲೆ ಅಂದರೆ ಹಬ್ಬು ಕುಟುಂಬದ ತಂದೆ ಮತ್ತು ಅವರ ಆರು ಮಕ್ಕಳು ಸಾಹಿತ್ಯ ರಚಿಸಿದವರು ಅವರ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಸಾಹಿತ್ಯ ಹಬ್ಬದ ಕಾರ್ಯಕ್ರಮ ಖ್ಯಾತ ಲೇಖಕ ಅಂಕಣಕಾರ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ದೀಪ ಬೆಳಗುವ ಮೂಲಕ ಉಧ್ಘಾಟಿಸಿದರು. ಅಧ್ಯಕ್ಷತೆ ಸ್ಥಳಿಯ ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಡಿ ರವಿಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ TV 18 ಬ್ರಾಡ್ ಕಾಸ್ಟ್ ಲಿ. ದಕ್ಷಿಣ ಬಾರತದ ಎಡಿಟೋರಿಯಲ್ ಗ್ರೂಪ್ ಅಡ್ವೈಸರ್ CNN NEWS 18, Net work 18. ಡಿ.ಪಿ. ಸತೀಶ್, ಸಾಗರ ತಾಲೂಕಿನ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ. ಸ್ವಾಮಿ, ಕನ್ನಡ ಸಾಹಿತ್ಯ ಕ್ಷೇತ್ರದ ವಿಶಿಷ್ಟ ಸಾದನೆಗ್ಯೆದ ಹಬ್ಬು ಕುಟುಂಬದ ಅಂಕೋಲದ ಮೊಹನ್ ಹಬ್ಬು, ಹೊನ್ನಾವರದ ರಾಮಚಂದ್ರ ಹಬ್ಬು, ಹುಬ್ಬಳ್ಳಿಯ...