Blog number 1162. ಅರವಿಂದ ಚೊಕ್ಕಾಡಿ ಕ್ಷಬ್ ನಲ್ಲಿ?! ಹೌದು ವಿಶ್ವ ವಾಣಿ ಕ್ಲಬ್ ಹೌಸ್ ಇವತ್ತು 5- ಜನವರಿ -2022 ರಂದು ನಡೆಸಿದ ಹಾವೇರಿ ಸಾಹಿತ್ಯ ಪರಿಷತ್ ಸಮ್ಮೇಳನ ಮತ್ತು ಬೆಂಗಳೂರಿನ ಜನ ಸಾಹಿತ್ಯ ಸಮ್ಮೇಳನದ ವಿವಾದದ ಬಗ್ಗೆ ಚರ್ಚೆ.
#ಇವತ್ತಿನ_ವಿಶ್ವವಾಣಿ_ಕ್ಲಬ್_ಹೌಸ್_ಅರವಿಂದ_ಚೊಕ್ಕಾಡಿ #ಸಾಹಿತ್ಯ_ಸಮ್ಮೇಳನ_ಮತ್ತು_ಜನಸಾಹಿತ್ಯ_ಸಮ್ಮೇಳನದ #ವಿವಾದ_ಕುರಿತು. ಪ್ರಾರಂಭದಲ್ಲಿ ವಿಶ್ವವಾಣಿ ಕ್ಲಬ್ ಹೌಸ್ ಕೇಳುತ್ತಿದ್ದೆ ನಂತರ ಬಿಟ್ಟಿದ್ದೆ ಇವತ್ತು ಅರವಿಂದ ಚೊಕ್ಕಾಡಿ ಅವರು ಲಿಂಕ್ ವಾಟ್ಸಪ್ ಮಾಡಿದ್ದರು. ಪ್ರಸ್ತುತ ಹಾವೇರಿಯ ಸಾಹಿತ್ಯ ಸಮ್ಮೇಳನ ಮತ್ತು ಬೆಂಗಳೂರಿನ ಜನ ಸಾಹಿತ್ಯ ಸಮ್ಮೇಳನದ ವಿವಾದ ಕುರಿತು ಕ್ಲಬ್ ಹೌಸ್ ಇವರೊಂದಿಗೆ ಮಾತಾಡುವುದು ಕೇಳಿದೆ. ಪ್ರಾರಂಭದಲ್ಲಿ ಅರವಿಂದರ ಸಂಪರ್ಕದಲ್ಲಿ ಅಡಚಣೆ ಆಯಿತು ನಂತರ ಸಂಪರ್ಕ ಏರ್ಪಟ್ಟು ಸಾಂಗವಾಗಿ ನೆರವೇರಿತು ಮತ್ತು ಕ್ಲಬ್ ನ ಮುಖ್ಯಸ್ಥೆ ಅರವಿಂದ ಚೊಕ್ಕಾಡಿಯವರನ್ನು ಕನ್ನಡ ಸಾಹಿತ್ಯದ ವಿವಾದ ಕಾಲದಲ್ಲಿ ನೀವು ಹಿರಿಯಣ್ಣನ ರೀತಿ ಮಾತಾಡಿದಿರಿ ಎಂದು ಅಭಿನಂದಿಸಿದ್ದು ಸರಿ ಅನ್ನಿಸಿತು. ಒಂದು ಕಡೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜೋಷಿ ಮತ್ತೊಂದು ಕಡೆ ಜನ ಸಾಹಿತ್ಯ ಸಮ್ಮೇಳನದ ಪುರುಶೋತ್ತಮ ಬಿಳಿಮಲೆ ಇದ್ದಾರೆ ಇವರಿಬ್ಬರ ಆರೋಪ ಪ್ರತ್ಯಾರೋಪದ ಪೆಂಡಾಲ್ ಬಗ್ಗೆ ಅರವಿಂದ ಚೊಕ್ಕಾಡಿ ಏನು ಹೇಳುತ್ತಾರೆಂಬ ಕುತೂಹಲವಿತ್ತು. ಅರವಿಂದ ಚೊಕ್ಕಾಡಿ ಅವರು ತಾವು ವೈಯಕ್ತಿಕವಾಗಿ ಬಲ್ಲ ಪುರುಶೋತ್ತಮ ಬಿಳಿಮಲೆ ಅವರ ಮೇಲೆ ಜೋಷಿ ಅವರ ಆರೋಪ ನಿರಾಕರಿಸಿದರು ಬಿಳಿಮಲೆ ಅಂತಹ ವ್ಯಕ್ತಿ ಅಲ್ಲವೆಂದರು ಮತ್ತು ಜೋಷಿ ಅವರ ಆರೋಪಕ್ಕೆ ಸಾಕ್ಷಿಗಳು ಏಕಿಲ್ಲ...