Skip to main content

Posts

Showing posts with the label be ready

#ಲಾಕ್ ಡೌನ್ ಮು೦ದುವರೆದರೆ ನಾವು ತಯಾರಿರಬೇಕು#

#ಕೆರೋನಾಲಾಕ್ ಡೌನ್ ಡೈರಿ 2020  #ಲೆಟರ್ ನಂ -9. #ದಿನಾ೦ಕ 8-ಏಪ್ರಿಲ್ -2020.    *ಲಾಕ್ ಡೌನ್ ಇನ್ನು 5 ದಿನ ಇದೆ ನಂತರ ಏನು? ಈ ಬಗ್ಗೆಯೆ ರಾಜ್ಯದಾದ್ಯಂತ ಹೆಚ್ಚು ಚಚೆ೯ ಆಗುತ್ತಿದೆ ಏನಾಗಬಹುದು?*      ಚೀನಾದ ವುಹಾನ್ ನಲ್ಲಿ ನಿನ್ನೆ ರಾತ್ರಿ 12ರಿಂದ ಸಂಪೂಣ೯ ಲಾಕ್ ಡೌನ್ ತೆರೆಯಲಾಗಿದೆ (72 ದಿನದ್ದು) ಸುಮಾರು 3 ತಿಂಗಳ ಅವಧಿಯಲ್ಲಿ ಇಲ್ಲಿನ ಕೊರಾನ ವೈರಸ್ ತಹಬಂದಿಗೆ ಬಂದಿದೆ ಅನ್ನುವುದು ಪ್ರಪಂಚಕ್ಕೆ ತಿಳಿದ ವಿಚಾರ.   ತೆಲಂಗಾಣದ ಮುಖ್ಯಮಂತ್ರಿ KCR ಪ್ರದಾನ ಮಂತ್ರಿಗಳಿಗೆ ಲಾಕ್ ಡೌನ್ ತೆರುವು ಮಾಡದೆ ಮುಂದುವರಿಸಲು ಮನವಿ ಮಾಡಿದ್ದಾರೆ, ನಮ್ಮ ರಾಜ್ಯ ಸಕಾ೯ರ ಪರಿಸ್ಥಿತಿ ನಿಯ೦ತ್ರಣಕ್ಕೆ ಬರದಿದ್ದರೆ ಲಾಕ್ ಡೌನ್ ತೆರವು ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.   ಭಾರತ ದೇಶದಲ್ಲಿ ಕೊರಾನ ವೈರಸ್ ಪರಿಣಾಮ ಬೇರೆ ದೇಶದಷ್ಟು ತೀವ್ರವಾಗಿಲ್ಲ ಎಂಬ ಸಲಹೆ ಸರಿ ಅಲ್ಲ ಭಾರತದಲ್ಲಿ  ಬೇರೆ ದೇಶಕ್ಕಿ೦ತ ಒಂದು ತಿಂಗಳ ನಂತರ ಈ ವೈರಸ್ ಹರಡಲು  ಪ್ರಾರಂಭ ಆಯಿತು ಮುಂದಿನ ದಿನದಲ್ಲಿ ಇದರ ತೀವ್ರತೆ ಹೆಚ್ಚಾಗಲಿದೆ ಎಂದು ಖ್ಯಾತ ವೈದ್ಯ ದೇವಿ ಶೆಟ್ಟಿ ಕಳವಳ ವ್ಯಕ್ತ ಪಡಿಸಿದ್ದಾರೆ.    21 ದಿನದ ಲಾಕ್ ಡೌನ್ ಗೆ 15 ದಿನದ ನಂತರವೇ ಜನ ಹೊಂದಿಕೊಳ್ಳುತ್ತಿದ್ದಾರೆ ಆದರೂ ಸೋಷಿಯಲ್ ಡಿಸ್ಟೆನ್ಸ್ ಕಾಪಾಡುವುದರಲ್ಲಿ ಎಡವುತ್ತಿದ್ದಾರೆಂದು ತಜ್ಞರು ಅಭಿಪ್ರಾಯ ಪಡುತ...