Blog number 1185. ಟಾಮ್ಸ್ ವಲ್ಡ್೯ ವಾಕ್ ಯುರೋಪ್ - ಅಮೇರಿಕಾ - ಏಷ್ಯಾ- ಆಸ್ಟ್ರೇಲಿಯ ನಾಲ್ಕು ಖಂಡಗಳ ಸುಮಾರು 18 ಸಾವಿರ ಕಿಲೋ ಮೀಟರ್ ನ ಪಾದಯಾತ್ರೆ ಸಾಹಸ.
#ಇ೦ಗ್ಲೆಂಡಿನ_ಟಾಮ್ಸ್_ವರ್ಲ್ಡ್_ವಾಕ್ಸ್_ನನ್ನ_ಅತಿಥಿ #ಖ೦ಡಾ೦ತರ_ಪಾದಯಾತ್ರಿ_ಜೊತೆ_ಸಂದರ್ಶನ #ತೈವಾನನಲ್ಲಿ_ಇಂಗ್ಲೀಷ್_ಶಿಕ್ಷಕ_ವಯಸ್ಸು_56 #ಪ್ರಪಂಚದ_ನಾಲ್ಕು_ಭೂ_ಖಂಡದಲ್ಲಿ_18500_ಕೀಲೋ_ಮೀಟರ್_ನಡೆಯುವ_ಗುರಿ #ಈಗ_ಏಷ್ಯಾ_ಖಂಡ_ದಾಟಿ_ಆಸ್ಟ್ರೇಲಿಯ_ತಲುಪಬೇಕು. #ಇವರ_23ನೆ_ವಯಸ್ಸಲ್ಲಿ_ಸೈಕಲನಲ್ಲಿ_ಯುರೋಪಿನಿಂದ_ಆಸ್ಟ್ರೇಲಿಯ_ಪ್ರವಾಸ_ಮಾಡಿದ್ದರು. #ಇವರ_30ನೇ_ವಯಸ್ಸಲ್ಲಿ_ಹೇಸರಗತ್ತೆಯಲ್ಲಿ_ಅಮೆರಿಕಾ_ಪ್ರವಾಸ_ಮಾಡಿದವರು. ಇವತ್ತು ಸಂಜೆ ಟಾಮ್ ತಮ್ಮ ತಳ್ಳು ಗಾಡಿಯಲ್ಲಿ ಬೆಳಿಗ್ಗೆ ಸಾಗರದಿಂದ ತಮ್ಮ ಪಾದಯಾತ್ರೆ ಪ್ರಾರಂಬಿಸಿ ಆನಂದಪುರಂನ ನಮ್ಮ ಹೊಂಬುಜ ಲಾಡ್ಜ್ ತಲುಪಿದ್ದಾರೆ. ಈಗಾಗಲೇ ಅಮೇರಿಕಾದಲ್ಲಿ 6000 ಕಿಮೀ ನಡೆದಿದ್ದಾರೆ, ಇ೦ಗ್ಲೆಂಡ್ನಿಂದ ಪ್ರಾನ್ಸ್, ಜಮ೯ನ್, ಹಂಗೇರಿ, ಬಲ್ಗೇರಿಯಾ, ಟರ್ಕಿ, ಆಸ್ಟ್ರಿಯ ಸರ್ಬಿಯ, ಲೆಬನಾನ್, ಸೈಪ್ರಸ್ ಗಳ ಪಾದಯಾತ್ರೆ ಮುಗಿಸಿ ಗೋವಾದಿಂದ ಭಾರತದಲ್ಲಿ ಸುಮಾರು 1500 ಕಿ ಮಿ ಸಾಗಿ, ಇಂಡೋನೇಷ್ಯಾದಲ್ಲಿ 1000 ಕಿ.ಮಿ. ಮುಗಿಸಿ ಆಸ್ಟ್ರೇಲಿಯದಲ್ಲಿ 4000 ಕಿ.ಮಿ. ನಂತರ ನ್ಯೂಜಿಲೆಂಡ್ ನಲ್ಲಿ 500 ಕಿ.ಮಿ. ಮತ್ತು ಐಸ್ ಲ್ಯಾಂಡ್ ನಲ್ಲಿ 500 ಕಿ.ಮಿ. ನಡೆದು ತೈವಾನ್ ನಲ್ಲಿ ಇವರಿಗೆ ಕಾಯುತ್ತಿರುವ ಪ್ರಿಯತಮೆಯನ್ನು ಸೇರುತ್ತೇನೆ ಅನ್ನುತ್ತಾರೆ. 2018ರಲ್ಲಿ ಇವರು ಜಗತ್ತಿನ ನಾಲ್ಕು ಖಂಡದಲ್ಲಿ 28000 ಕಿ.ಮಿ. ಪಾದಯಾತ್ರೆಯ ಗುರಿಯಿ೦ದ ...