Skip to main content

Posts

Showing posts with the label ULLAS SHEAT SAGAR OWNER OF KAMAKSHI PRINTER

ಏಕಲವ್ಯನಂತೆ ಯಾರ ಸಹಾಯವೂ ಇಲ್ಲದೆ ಅಕ್ಷರದ ಮೊಳೆ ಜೋಡಿಸಿ ಮುದ್ರಣ ಮಾಡುವುದು ಕಲಿತು ಎರೆಡು ದಶಕ ಸಾಗರದಲ್ಲಿ ಕಾಮಾಕ್ಷಿ ಪ್ರಿಂಟರ್ ಎಂಬ ಪ್ರಸಿದ್ಧ ಸಂಸ್ಥೆ ನಡೆಸಿದ್ದ ಉಲ್ಲಾಸ್ ಶೇಟ್

  ಸಾಗರದ ಕಾಮಾಕ್ಷಿ ಪ್ರಿಂಟರ್ ಉಲ್ಲಾಸ್ ಶೇಟ್ ರದ್ದು ಎರೆಡು ದಶಕದ ಮುದ್ರಣ ಕ್ಷೇತ್ರದ ಸಾದನೆ ಸ್ಮರಣೀಯ. 1980 ರಿಂದ 2000 ಇಸವಿವರೆಗಿನ ಎರೆಡು ದಶಕಗಳ ಕಾಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಕೇಂದ್ರದಲ್ಲಿ ಸ್ಥಳಿಯ ದಿನ ಪತ್ರಿಕೆಗಳದ್ದೆ ಕಾರುಬಾರು.    ಆಗೆಲ್ಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸ್ಥಳಿಯ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲದ್ದರಿಂದ ಸ್ಥಳಿಯರಿಗೆ ಸ್ಥಳಿಯ ಪತ್ರಿಕೆಗಳು ಬೇಕೇ ಬೇಕು ಆಗಿತ್ತು.   ಸ್ಥಳಿಯ ಪತ್ರಿಕೆಗೆ ಅಂತಹ ಜಾಹಿರಾತು ಆದಾಯ ಇಲ್ಲದ ಕಾಲದಲ್ಲಿ ಪತ್ರಿಕೆಯ ಮಾಸಿಕ ಬಿಲ್ ಒಂದೇ ಸಂಪಾದಕರಿಗೆ ಪತ್ರಿಕೆ ಮುದ್ರಣಕ್ಕೆ, ಪತ್ರಿಕೆ ವಿತರಿಸುವವರಿಗೆ ಸಂಬಳ, ಪೋನ್ ಬಿಲ್, ಅಂಚೆ ವೆಚ್ಚ, ಪತ್ರಿಕಾ ಕಛೇರಿ ಬಾಡಿಗೆ ಮತ್ತು ತಿಂಗಳ ಉಟೋಪಚಾರಕ್ಕೆ ಮೂಲ ಆದಾಯ ಆಗಿತ್ತು.   ಸ್ಥಳಿಯವಾಗಿ ಸಾವ೯ಜನಿಕವಾಗಿ ಪತ್ರಿಕೆ ಸಂಪಾದಕರಿಗೆ ವಿಶೇಷ ಗೌರವ ಇರುತ್ತಿತ್ತು.   ಹೆಚ್ಚಿನ ಪತ್ರಿಕೆಗೆ ವರದಿಗಾರ ಸಂಪಾದಕ ಎರೆಡೂ ಹುದ್ದೆ ಒಬ್ಬರೇ ಆಗಿರುತ್ತಿದ್ದರು.   ಆಗ ದಿನ ಪತ್ರಿಕೆಯ ಸುದ್ದಿ ಬರೆದು ಮಧ್ಯಾಹ್ನ 3 ರ ಒಳಗೆ ಪ್ರಿಂಟಿಂಗ್ ಪ್ರೆಸ್ ಗೆ ತಲುಪಿಸಿದರೆ ಅಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲಿಕರು ಅಕ್ಷರ ಜೋಡಿಸಿ ಪ್ರಿಂಟಿಂಗ್ ಗೆ ತಯಾರಿ ಮಾಡಿಕೊಳ್ಳಬೇಕು ನಂತರ ಸಂಪಾದಕರು ಪ್ರಿ೦ಟಿಂಗ್ ಪೇಪರ್ ತಂದುಕೊಟ್ಟರೆ? ರಾತ್ರಿ 10 ರ ಒಳಗೆ ನಾಳಿನ ಪೇಪರ್ ತಯಾರ್, ಬೆಳಿಗ್ಗೆ ಪತ್ರ...