ಏಕಲವ್ಯನಂತೆ ಯಾರ ಸಹಾಯವೂ ಇಲ್ಲದೆ ಅಕ್ಷರದ ಮೊಳೆ ಜೋಡಿಸಿ ಮುದ್ರಣ ಮಾಡುವುದು ಕಲಿತು ಎರೆಡು ದಶಕ ಸಾಗರದಲ್ಲಿ ಕಾಮಾಕ್ಷಿ ಪ್ರಿಂಟರ್ ಎಂಬ ಪ್ರಸಿದ್ಧ ಸಂಸ್ಥೆ ನಡೆಸಿದ್ದ ಉಲ್ಲಾಸ್ ಶೇಟ್
ಸಾಗರದ ಕಾಮಾಕ್ಷಿ ಪ್ರಿಂಟರ್ ಉಲ್ಲಾಸ್ ಶೇಟ್ ರದ್ದು ಎರೆಡು ದಶಕದ ಮುದ್ರಣ ಕ್ಷೇತ್ರದ ಸಾದನೆ ಸ್ಮರಣೀಯ.
1980 ರಿಂದ 2000 ಇಸವಿವರೆಗಿನ ಎರೆಡು ದಶಕಗಳ ಕಾಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಕೇಂದ್ರದಲ್ಲಿ ಸ್ಥಳಿಯ ದಿನ ಪತ್ರಿಕೆಗಳದ್ದೆ ಕಾರುಬಾರು.
ಆಗೆಲ್ಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸ್ಥಳಿಯ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲದ್ದರಿಂದ ಸ್ಥಳಿಯರಿಗೆ ಸ್ಥಳಿಯ ಪತ್ರಿಕೆಗಳು ಬೇಕೇ ಬೇಕು ಆಗಿತ್ತು.
ಸ್ಥಳಿಯ ಪತ್ರಿಕೆಗೆ ಅಂತಹ ಜಾಹಿರಾತು ಆದಾಯ ಇಲ್ಲದ ಕಾಲದಲ್ಲಿ ಪತ್ರಿಕೆಯ ಮಾಸಿಕ ಬಿಲ್ ಒಂದೇ ಸಂಪಾದಕರಿಗೆ ಪತ್ರಿಕೆ ಮುದ್ರಣಕ್ಕೆ, ಪತ್ರಿಕೆ ವಿತರಿಸುವವರಿಗೆ ಸಂಬಳ, ಪೋನ್ ಬಿಲ್, ಅಂಚೆ ವೆಚ್ಚ, ಪತ್ರಿಕಾ ಕಛೇರಿ ಬಾಡಿಗೆ ಮತ್ತು ತಿಂಗಳ ಉಟೋಪಚಾರಕ್ಕೆ ಮೂಲ ಆದಾಯ ಆಗಿತ್ತು.
ಸ್ಥಳಿಯವಾಗಿ ಸಾವ೯ಜನಿಕವಾಗಿ ಪತ್ರಿಕೆ ಸಂಪಾದಕರಿಗೆ ವಿಶೇಷ ಗೌರವ ಇರುತ್ತಿತ್ತು.
ಹೆಚ್ಚಿನ ಪತ್ರಿಕೆಗೆ ವರದಿಗಾರ ಸಂಪಾದಕ ಎರೆಡೂ ಹುದ್ದೆ ಒಬ್ಬರೇ ಆಗಿರುತ್ತಿದ್ದರು.
ಆಗ ದಿನ ಪತ್ರಿಕೆಯ ಸುದ್ದಿ ಬರೆದು ಮಧ್ಯಾಹ್ನ 3 ರ ಒಳಗೆ ಪ್ರಿಂಟಿಂಗ್ ಪ್ರೆಸ್ ಗೆ ತಲುಪಿಸಿದರೆ ಅಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲಿಕರು ಅಕ್ಷರ ಜೋಡಿಸಿ ಪ್ರಿಂಟಿಂಗ್ ಗೆ ತಯಾರಿ ಮಾಡಿಕೊಳ್ಳಬೇಕು ನಂತರ ಸಂಪಾದಕರು ಪ್ರಿ೦ಟಿಂಗ್ ಪೇಪರ್ ತಂದುಕೊಟ್ಟರೆ? ರಾತ್ರಿ 10 ರ ಒಳಗೆ ನಾಳಿನ ಪೇಪರ್ ತಯಾರ್, ಬೆಳಿಗ್ಗೆ ಪತ್ರಿಕೆ ವಾಚಕರ ಮನೆ ತಲುಪುವುದು.
ಇದರಲ್ಲಿ ಯಾವುದೇ ಒಂದು ವಿಳಂಬ ಆದರೂ ಪತ್ರಿಕೆ ಬರುವುದಿಲ್ಲ.
ಇಂತಹ ಸಂದಭ೯ದಲ್ಲಿ ಸಾಗರದಲ್ಲಿ ಕಾಮಾಕ್ಷಿ ಪ್ರಿಂಟರ್ ಮಾಲಿಕರಾದ ಉಲ್ಲಾಸ್ ಶೇಟ್ ಸಾಗರದ ಸಣ್ಣ ಪತ್ರಿಕೆಗೆ ಗಳಿಗೆ ಆ ಕಾಲದಲ್ಲಿ ಜೀವಾಳವಾಗಿದ್ದರು.
ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಒಡನಾಡಿ ಎಸ್.ಎಸ್. ಕುಮುಟಾ (ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪದ್ಮಾ ಕುಮುಟಾ ತಂದೆ) ರವರ ದಿನ ಪತ್ರಿಕೆ, ಕಾಗೋಡು ಹೋರಾಟದ ನೇತಾರ ಹೆಚ್. ಗಣಪತಿಯಪ್ಪರ ದಿನಪತ್ರಿಕೆ, ಹಾಲಿ ರಾಜ್ಯದ ಖ್ಯಾತ ಪತ್ರಕತ೯ ಮತ್ತು ಬರಹಗಾರ ಆರ್.ಟಿ. ವಿಠಲ್ ಮೂತಿ೯ ತಂದೆಯವರಾದ ತಾರಾನಾಥರ ದಿನ ಪತ್ರಿಕೆ, ಎ.ಡಿ. ಸುಬ್ರಣ್ಯರ ದಿನ ಪತ್ರಿಕೆ ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಸಾಗರದ ತೀ.ನಾ. ಶ್ರೀನಿವಾಸರ ದಿನಪತ್ರಿಕೆ ಗಳು ಇಲ್ಲೇ ಮುದ್ರಣ ಆಗುತ್ತಿತ್ತು.
ಆ ಕಾಲದಲ್ಲಿ ಪತ್ರಿಕೆ ಸಂಪಾದಕರೂ ಬಡವರು, ಪ್ರಿ೦ಟಿಂಗ್ ಪ್ರೆಸ್ ಮಾಲಿಕರೂ ಬಡವರೆ ಆದರೆ ಸುದ್ದಿ ಬರೆದು ಪ್ರಿಂಟ್ ಆದ ಪತ್ರಿಕೆ ಹಂಚಿಸುವ ಕೆಲಸ ಸರಾಗವಾಗಿ ಸಂಪಾದಕರು ಮಾಡುತ್ತಿದ್ದರು ಹಾಗೆಯೇ ಅಕ್ಷರದ ಮೊಳೆ ಜೊಡಿಸಿ ಇಂಕ್ ಹಾಕಿ ಮುದ್ರಿಸುವ ಕೆಲಸ ಪ್ರೆಸ್ ಮಾಲಿಕರು ಮಾಡುತ್ತಿದ್ದರು ಇದಕ್ಕೆ ಬೇಕಾದ ಮುದ್ರಣದ ಪೇಪರ್ ಮಾತ್ರ ಯಾವುದೇ ಅಂಗಡಿಯಲ್ಲಿ ಸಾಲ ಕೊಡುತ್ತಿರಲಿಲ್ಲ ಕೊಟ್ಟರೂ ಸರಿಯಾದ ಸಮಯದಲ್ಲಿ ಅವರಿಗೆ ಬಾಕಿ ಪಾವತಿ ಆಗುತ್ತಿರಲಿಲ್ಲವಾದ್ದರಿಂದ ಪ್ರೆಸ್ ಮಾಲಿಕರೂ ದಿನ ಪತ್ರಿಕೆ ಮುದ್ರಣಕ್ಕೆ ಕೊನೆಯ ಪ್ರಾಶಸ್ತ ನೀಡುತ್ತಿದ್ದದ್ದು ಸುಳ್ಳಲ್ಲ.
ಆದರೆ ಆ ಕಾಲದಲ್ಲಿ ಪದವೀದರರಾಗಿದ್ದ ವಿದ್ಯಾವಂತ ಉಲ್ಲಾಸ್ ಶೇಟ್ ಬೇರೆಲ್ಲ ಪ್ರೆಸ್ ನವರಿಗಿಂತ ಭಿನ್ನರಾಗಿದ್ದರು ಹಾಗಾಗಿ ಪತ್ರಿಕೆ ಸಕಾಲದಲ್ಲಿ ಮುದ್ರಿಸಿ ಕೊಡಲು ಶ್ರಮ ಹಾಕುತ್ತಿದ್ದರು 1985-88 ರಲ್ಲಿ ತಡರಾತ್ರಿ ತನಕ ನಾನು ತೀನಾ ಶ್ರೀನಿವಾಸ್ ಕಾಮಾಕ್ಷಿ ಪ್ರಿಂಟರ್ ಲ್ಲಿ ಪತ್ರಿಕೆ ಮುದ್ರಣ ಆಗುವ ತನಕ ಅನೇಕ ರಾತ್ರಿ ಕಾಯುತ್ತಾ ಇರುತ್ತಿದ್ದೆವು.
ಉಲ್ಲಾಸ್ ಶೇಟ್ ಪತ್ರಿಕೆ ಹೆಡ್ಡಿಂಗ್ ಕಾಲಂ ಇತ್ಯಾದಿ ಈಗಿನ ಕಾಲದ ಆಫ್ ಸೆಟ್ ಮುದ್ರಣದಂತೆ ಸುಂದರವಾಗಿ ಮಾಡುವ ಕಲಾಕಾರರಾಗಿದ್ದರಿಂದ ಇವರ ಕಾಮಾಕ್ಷಿ ಪ್ರಿಂಟಿಂಗ್ ಪ್ರೆಸ್ ಪ್ರಸಿದ್ದಿ ಆಗಿತ್ತು.
ಒಮ್ಮೆ ತೀನಾ ಶ್ರೀನಿವಾಸರಿಗೆ ಪೋಲಿಸ್ ಸಬ್ ಇನ್ಸೆಸ್ಪೆಕ್ಟರ್ ಜಮೀಲ್ ಎಂಬುವವರು ತಮ್ಮ ವಿರುದ್ದ ವರದಿ ಪ್ರಕಟಿಸಿದ್ದರಿಂದ ದೈಹಿಕ ಹಲ್ಲೆ ಮಾಡಿದ ಘಟನೆ ಪ್ರತಿಭಟನೆಗೆ ಹಾಗೂ ವಿಧಾನ ಸೌದದಲ್ಲೂ ಸದ್ದು ಮಾಡಿತ್ತು ಆ ಘಟನೆ ನಡೆದ ದಿನ ತೀ .ನಾ. ಶ್ರೀನಿವಾಸ್ ರು ಆಸ್ಪತ್ರೆ ಅಡ್ಮಿಟ್ ಆಗಿದ್ದರಿಂದ ಅವತ್ತಿನ ಪತ್ರಿಕೆ ಬರೆದು ಪ್ರಕಟಿಸುವ ಜವಾಬ್ದಾರಿ ನನ್ನದಾಗಿತ್ತು, ಸಂಪಾದಕೀಯ ಮತ್ತು ಮರುದಿನದ ಪ್ರತಿಭಟನಾ ಸಭೆಯ ಕರ ಪತ್ರ ಬರೆದದ್ದು ನಾನೆ ಅದೆಲ್ಲ ರಾತ್ರೋ ರಾತ್ರಿ ನಿದ್ದೆ ಬಿಟ್ಟು ಅಕ್ಷರದ ಮೊಳೆ ಜೋಡಿಸಿ ಪ್ರಿಂಟ್ ಮಾಡಿಕೊಟ್ಟವರು ಉಲ್ಲಾಸ್ ಶೇಟ್.
1995ರಲ್ಲಿ ನಾನು ಜಿಲ್ಲಾ ಪಂಚಾಯತಿಗೆ ಸ್ಪದೆ೯ ಮಾಡಿದಾಗ ಉಚಿತವಾಗಿ ಕರಪತ್ರ ಮುದ್ರಿಸಿಕೊಟ್ಟಿದ್ದು ನಾನು ಮರೆಯಲಾರೆ.
ಆ ಕಾಲದಲ್ಲಿ ಉಲ್ಲಾಸ್ ಶೇಟ್ ರದ್ದು ಪ್ರೇಮ ವಿವಾಹ ಅದೂ ಸಾಗರದ ಪ್ರತಿಷ್ಟಿತ ಮತ್ತು ಶ್ರೀಮಂತರಾದ ನರಸಿಂಹ ಭಟ್ & ಸನ್ಸ್ ರ ಮಗಳೊಂದಿಗೆ, ಸಾಗರದ ಎಲ್.ಬಿ.ಕಾಲೇಜಿನ ಖ್ಯಾತ ಉಪನ್ಯಾಸಕರಾಗಿದ್ದ ರಮೇಶ್ ಭಟ್ಟರ(ಆ ಕಾಲದಲ್ಲಿ ರಮೇಶ್ ಭಟ್ಟರು ಹಿಂದಿ ಸಿನಿಮಾದ ಚಾಕೋಲೆಟ್ ಪೇಸ್ ಹೀರೋ ಹಾಗೆ ಸುರಸುಂದರಾಂಗ)ಸಹೋದರಿ ಅವರೊಂದಿಗೆ, ಸ್ವಂತ ಮನೆಯಿಂದಲೂ ಬೆಂಬಲವಿಲ್ಲದೆ ಸ್ವತಂತ್ರವಾಗಿ ಕಷ್ಟದ ಜೀವನ ಮಾಡಿದ ಸಾಹಸ ಇವರದ್ದು.
ಈಗ ಉಲ್ಲಾಸ್ ಶೇಟ್ ಸಾಗರ ತೊರೆದು ಬೆಂಗಳೂರಿನಲ್ಲಿ ವಿಪ್ರೋದಲ್ಲಿ ಇಂಜಿನಿಯರ್ ಆಗಿರುವ ಮಗ ಸೊಸೆ ಮತ್ತು ಮೊಮ್ಮಗಳ ಜೊತೆ ಸುಖಿ: ಮತ್ತು ವಿಶ್ರಾಂತ ಜೀವನ ನಡೆಸಿದ್ದಾರೆ ಇವತ್ತು ಬೆಳಿಗ್ಗೆ ಪೋನಿನಲ್ಲಿ ಸುಮಾರು ಹೊತ್ತು ಸವಕಳಿಸಿದ್ದ ಹಳೆಯ ನೆನಪನ್ನ ಪುನಃ ಹೊಳಪು ನೀಡಿ ಪರಸ್ಪರ ಮಾತಾಡಿದ್ದು ಮನಸ್ಸಿಗೆ ಒಂದು ರೀತಿ ಉಲ್ಲಾಸವಾಯಿತು.
ಕಾಮಾಕ್ಷಿ ಪ್ರಿಂಟರ್ಸ್ ಉಲ್ಲಾಸ್ ಶೇಟ್ ರ ಸೆಲ್ ನಂಬರ್
+919986049924.
Comments
Post a Comment