ಜಲ ತಜ್ಞ, ಅದುನಿಕ ಭಗಿರಥ, ಪರಿಸರ ಪ್ರೇಮಿ ಎಂದೆಲ್ಲ ಜನರಿಂದ ಕರೆಯುವ ಲೇಖಕ ಶಿವಾನಂದ ಕಳವೆ ಅವರ ಮಧ್ಯ ಘಟ್ಟ ಕಾದಂಬರಿ ವಿಶೇಷ ಮತ್ತು ವಿಸ್ಮಯವಾದ ಪರಿಸರದ ಜೊತೆಯ ನಿಜ ಕಥೆ
#ಶಿವಾನಂದ_ಕಳವೆ_ಅವರ_ಮದ್ಯಘಟ್ಟ_ಓದುಗರನ್ನ_ಯೋಚಿಸುವಂತೆ_ಮಾಡುವ_ಕಾದಂಬರಿ #ಪರಿಸರದ_ಮೇಲೆ_ನಾಗರೀಕತೆಯ_ಪ್ರಬಾವ_ಮತ್ತು_ಪರಿಣಾಮಗಳನ್ನ
ಈ ಕಾದಂಬರಿ ಮೊದಲ ಮುದ್ರಣ ಆಗಸ್ಟ್ 2020ಕ್ಕೆ ಆಗಿದ್ದು ನಾಲ್ಕು ತಿಂಗಳಲ್ಲಿ ಮೂರು ಮುದ್ರಣ ಆಗಿದೆ ಅಂದರೆ ಈ ಕಾದಂಬರಿಯ ಜನಪ್ರಿಯತೆ ಅಥ೯ವಾದೀತು.
ಕಾದಂಬರಿ ಕಥಾ ನಾಯಕಿ ಭೂದೇವಿದೂರದ ಕೇರಳದಿಂದ ತನ್ನ ಮಗ ವಾಸುದೇವ ಮತ್ತು ಕಂಕಳ ಕೂಸು ದೇವಕಿ ಜೊತೆ ತನ್ನ ಮಗಳ ಮನೆ ಮಧ್ಯ ಘಟ್ಟದ ಗೋಪಯ್ಯ ಹೆಗ್ಗಡೆ (ಅಳಿಯ) ಮನೆಗೆ ಮಂಗಳೂರು ರೈಲು ನಿಲ್ದಾಣದಲ್ಲಿ ತಲುಪಿದಾಗ ತನ್ನ ಹಣ ಮತ್ತು ಬಟ್ಟೆಯ ಬ್ಯಾಗ್ ಕಳೆದುಕೊಂಡು ಮಂಗಳೂರಿಂದ ಕುಮಟಾ ಮಾಗ೯ವಾಗಿ ಸಾರಿಗೆ ಸಂಪರ್ಕ ಇಲ್ಲದ ಕಾಲದಲ್ಲಿ ಮಲೆಯಾಳಂ ಬಿಟ್ಟು ಬೇರೆ ಭಾಷೆ ಬರದ ಹೆಣ್ಣು ಹತ್ತು ದಿನ ನಡೆದು 9 ನದಿ ದಾಟಿ ಸಿಸಿ೯ ತಲುಪಿ ಅಲ್ಲಿಂದ ಮಧ್ಯ ಘಟ್ಟ ಸೇರಿ ಇಲ್ಲೇ ನೆಲೆ ನಿಲ್ಲುವ ನಿಜ ಜೀವನ ಕಥೆಯನ್ನ ಸ್ವಾರಸ್ಯವಾಗಿ ಕಾಲ ಮಾನದ ಅನೇಕ ಬದಲಾವಣೆ, ಅಭಿವೃದ್ಧಿ ಜೊತೆಗೆ ಪರಿಸರದ ಜ್ಞಾನದೊಂದಿಗೆ ಬರೆದಿದ್ದಾರೆ.
ಈ ಕಾದಂಬರಿ ಮೂರನೇ ಮುದ್ರಣದ ಸಂದಭ೯ದಲ್ಲಿ ಈ ಕಾದಂಬರಿ ಓದಿದವರು ಸಾಂಕೇತಿಕವಾಗಿ ಯಾಣ ಸಮೀಪದ ಮಧ್ಯ ಘಟ್ಟಕ್ಕೆ ಕೆಲವು ಕಿ.ಮಿ ಭೂದೇವಿ ನಡೆದ ಮಾರ್ಗದಲ್ಲಿ ನಡೆದು ಮಧ್ಯ ಘಟ್ಟ ತಲುಪಿ ಈ ಕಾದಂಬರಿ ಬಗ್ಗೆ ಚಚೆ೯ ಮಾಡುವ ಸುದ್ದಿ ತಿಳಿದ ಮೇಲೆ ಓದಲು ತಂದಿಟ್ಟ ಮಧ್ಯ ಘಟ್ಟ ಓದಿದೆ.
ಮಧ್ಯ ಘಟ್ಟ ಮತ್ತಿಘಟ್ಟ ಅಂತ ಬದಲಾಗುವ ಕಾಲ ಮಾನದಲ್ಲಿ ಅಲ್ಲಿ ರಸ್ತೆ ಸಂಪಕ೯ ಇಲ್ಲದ ಹವ್ಯಕರ ಜೀವನ ಶೈಲಿ, ಅವತ್ತಿನ ಅವರ ಆಹಾರ (ಅನ್ನಕ್ಕಿಂತ ಬಾಳೆ ನಿತ್ಯ ಊಟ), ಮದುವೆಗೆ ಹೆಣ್ಣುಗಳ ಕೊರತೆ, ದೂರದ ಕೇರಳದಿಂದ ದಲ್ಲಾಳರ ಮೂಲಕ ಬೆಳೆಸುವ ಸಂಬಂದ ಮತ್ತು ಕಾಡಿನಲ್ಲಿ ಮಳೆ, ಚಳಿಗಳಲ್ಲಿ, ವನ್ಯ ಪ್ರಾಣಿಗಳ ಉಪಟಳದಲ್ಲಿ ಬೇಸಾಯ, ಅಲ್ಲಿ ಸಿಗುವ ಕಾಡಿನ ಸಸ್ಯ ಬೇರುಗಳ ಚಿಕಿತ್ಸೆ, ಕಾಫಿ ಟೀ ತಲುಬಾಗದ ಆ ದಿನಗಳನ್ನ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ, ಗಂಜಿ ಕುಳಿ, ಮನೆಗೆ ಸೋಗೆ ಹೊಚ್ಚುವ ದಿನ ಪ್ರತಿ ವರ್ಷ ಹಬ್ಬದಂತೆ ಆಚರಣೆ ಅದಕ್ಕೆ ಆವತ್ತಿನ ಕೆಲಸಗಾರರ ಶ್ರಮ ನಿಯತ್ತುಗಳೆಲ್ಲ ರಸವತ್ತಾಗಿ ವಿವರಿಸಿದ್ದಾರೆ.
ವಿದವೆಯರ ಭವಣೆ, ಶೋಷಣೆ ಮಾಡುವ ಶ್ರೀಮ೦ತ ಹೆಗ್ಗಡೆ ಮತ್ತು ಅಚ೯ಕರು, ಪಂಚಾಯಿತಿ ಹೆಸರಲ್ಲಿ ಅಪರಾದಿ ರಕ್ಷಿಸುವ ವ್ಯವಸ್ಥೆ ಈ ಕಾಲಕ್ಕೂ ಬದಲಾಗದೇ ಮುಂದುವರಿದಿದೆ.
ಕಥಾ ನಾಯಕಿ ಭೂದೇವಿ ಈಗಿಲ್ಲ, ಅವಳ ಮಗಳು ಶ್ರೀದೇವಿ ಮತ್ತು ಅಳಿಯ ಗೋಪಯ್ಯ ಹೆಗ್ಗಡೆ ಈಗಿಲ್ಲ ಮಗ ವಾಸುದೇವ ಮತ್ತು ಮಗಳು ದೇವಕಿ ಇದ್ದಾರೆ ಅವರ ಪೋಟೋ ಇಲ್ಲಿದೆ.
ಪಶ್ಚಿಮ ಘಟ್ಟದ ನಡೆದಾಡುವ ವಿಶ್ವಕೋಶ, ಅದುನಿಕ ಭಗೀರಥ , ಜಲ ತಜ್ಞ ಅಂತೆಲ್ಲ ಅನ್ವಥ೯ದ ಬಿರುದುಗಳಿಂದ ಜನ ಕರೆಯುವ ಸರಳ ವ್ಯಕ್ತಿತ್ವದ ಶಿವಾನಂದ ಕಳವೆ ಅವರು ಮಿತ ಭಾಷಿ, ಯಾವುದನ್ನೂ ಪ್ರತ್ಯಕ್ಷವಾಗಿ ನೋಡದೆ ಪರಾಮರಿಸುವುದಿಲ್ಲ ಎಂಬ ಸ್ವಬಾವಿ ಇವರ ಕಣ್ಣುಗಳು ಬಲು ಸೂಕ್ಷ್ಮ ಕಣ್ಣೋಟದಿಂದಲೇ ಎಲ್ಲವನ್ನೂ ಗ್ರಹಿಸುವ ಇವರು ಈ ಕಾದಂಬರಿಯಲ್ಲಿ ಪರಿಸರದ ಬದಲಾವಣೆ ತುಂಬಾ ಚೆನ್ನಾಗಿ ದಾಖಲಿಸಿದ್ದಾರೆ.
ಹವ್ಯಕ ಕುಟುಂಬದ ಕಥೆ ಹವಿಗನ್ನಡದಲ್ಲಿ ಮತ್ತು ನಮ್ಮ ಕನ್ನಡದಲ್ಲಿ ಮಿಳಿತ ಮಾಡಿ ಎಲ್ಲರಿಗೂ ಅಥ೯ ಆಗುವಂತೆ ಬರೆದಿದ್ದಾರೆ.
ಇದಕ್ಕಿಂತ ಹೆಚ್ಚು ವಿಮಶೆ೯ ನನಗೆ ಸಾಧ್ಯವಿಲ್ಲ, ವಿಶಿಷ್ಟ ವಿಬಿನ್ನವಾದ ಈ ಪರಿಸರವನ್ನು ಕೇಂದ್ರವಾಗಿಸಿ ಬರೆದಿರುವ #ಮಧ್ಯ_ಘಟ್ಟ ಓದಿಯೇ ಅನುಭವಿಸಬೇಕು.
ಶಿವಾನಂದ ಕಳವೆ ಅವರಿಗೆ ಅಭಿನಂದನೆಗಳು.
Comments
Post a Comment