ಎಂಟು ನೂರು ವರ್ಷ ರಾಜ ಅರಸೊತ್ತಿಗೆಯಲ್ಲಿ ಮೈಸೂರು ಪೇಟಾಗಿದ್ದ ಮಾನ್ಯತೆ ಸ್ವಾತಂತ್ರ ನಂತರ ಪ್ರಜಾಪ್ರಭುತ್ವದಲ್ಲಿ ವಿಮಾನ ಸಂಸ್ಥೆಯ ಲಾಂಚನವಾಗಿದ್ದು ಈಗ ಮದುವೆಯಲ್ಲಿ ವರನ ಬಾಸಿಂಗದಂತೆ ಮತ್ತು ಸನ್ಮಾನಗಳಿಗೆ ಸೀಮಿತವಾಗಿ ಅದರ ಘನತೆ ಕಳೆದು ಕೊಂಡಿದೆ
#ಮೈಸೂರು_ಪೇಟಾ_ಅದರ_ಇತಿಹಾಸ
ಇವತ್ತು ಬೆಂಗಳೂರಲ್ಲಿ ಸಂಸದ ತೇಜಸ್ವಿ ಸೂಯ೯ ಕಾಂಗ್ರೇಸ್ ಮಾಜಿ ಮಂತ್ರಿ ಮತ್ತು ಹಾಲಿ ಶಾಸಕರಾದ ಜಮೀರ್ ಆಹಮದ್ ರಿಗೆ ಮೈಸೂರು ಪೇಟಾ ತೊಡೆಸಿ ಶಾಲು ಹಾರದೊಂದಿಗೆ ಸನ್ಮಾನ ಮಾಡಿದ್ದಾರೆ.
ಮೈಸೂರು ಪೇಟಾದ ಇತಿಹಾಸ ಹುಡುಕಿದರೆ ಮೈಸೂರು ರಾಜರು 1399 ರಿಂದ 1947 ರ ವರೆಗೆ ಬಂಗಾರದ ಲೇಸಿನ ಶುದ್ದ ರೇಷ್ಮೆಯಲ್ಲಿ ಮಾಡಿದ್ದ ಮೈಸೂರು ಪೇಟ ಧರಿಸುತ್ತಿದ್ದರು.
ಇವರ ಆಸ್ಥಾನದಲ್ಲಿ ಮಂತ್ರಿಗಳು, ದಿವಾನರು ಅವರ ಅಂತಸ್ಥು ಅಧಿಕಾರ ಸ್ಥಾನಮಾನಕ್ಕೆ ತಕ್ಕಂತ ಮೈಸೂರು ಪೇಟಾ ಧರಿಸುತ್ತಿದ್ದರು.
ಇವರನ್ನು ಬಿಟ್ಟರೆ ಮೈಸೂರು ಪೇಟಾ ಕೊಡಗಿನವರ ಸಂಪ್ರದಾಯಿಕ ವೇಷ ಭೂಷಣದಲ್ಲಿ ಖಾಯಂ ಸ್ಥಾನ ಪಡೆದಿದೆ.
ಸ್ವಾತಂತ್ರ ನಂತರ ಮೈಸೂರು ಅರಸೊತ್ತಿಗೆ ರದ್ದಾದ ನಂತರ ಮೈಸೂರು ಪೇಟಾಕ್ಕೂ ಸ್ವಾತಂತ್ರ ಬಂತು, ಅರಸೊತ್ತಿಗೆ ಇದ್ದಾಗ ಜನ ಸಾಮಾನ್ಯರು ಮೈಸೂರು ಪೇಟಾ ದರಿಸುವುದು ಕನಸಾಗಿತ್ತು, ದರಿಸಿದರೆ ಅರಸೊತ್ತಿಗೆ ದಂಡ ಶಿಕ್ಷೆ ವಿದಿಸುವ ಪದ್ದತಿಯೂ ಇತ್ತು.
ಸ್ವಾತಂತ್ರ ನಂತರ ಭಾರತೀಯ ವಿಮಾನಯಾನದ ಪರಿಚಾರಿಕ ಮೈಸೂರು ಪೇಟಾ ಧರಿಸಿ ವಿಮಾನಕ್ಕೆ ಸ್ವಾಗತಿಸುವ ಚಿತ್ರ ಭಾರತೀಯ ವಿಮಾನ ಯಾನ ಸಂಸ್ಥೆಯ ಲಾಂಛನ ಆಗಿತ್ತು ಅಂದರೆ ಅರಸೊತ್ತಿಗೆಯ ಪ್ರತಿಷ್ಠಿತ ಮೈಸೂರು ಪೇಟಾಗೆ ಪ್ರಜಾಪ್ರಭುತ್ವದಲ್ಲಿ ಯಾವ ಸ್ಥಾನಮಾನ ದೊರೆಯಿತೆಂದು ಅರಿವಾದೀತು.
ಈಗ ಅದು ಇನ್ನೂ ಮುಂದುವರೆದು ಮದುವೆ ವರನಿಗೆ ದಿನದ ಬಾಡಿಗೆಯಲ್ಲಿ ದೊರೆಯುವಂತಾಗಿದೆ.
Comments
Post a Comment