ನಿನ್ನೆಯ ಪತ್ರಕತ೯ ತಲವಾಟ ರಾಘವೇಂದ್ರಶಮಾ೯ರ ಪೇಸ್ ಬುಕ್ ಚಚೆ೯
ಗೋಕಣ೯ದಿಂದ ಓಂಕಾರ ನಿರಂತರವಾಗಿ ಮರದ ದಂಡ ಸುತ್ತುಸುವುದರಿಂದ ಬರುವ ಕಂಚಿನ ಪಾತ್ರೆ ಖರೀದಿಸಿದ ಬಗ್ಗೆ ಪತ್ರಕರ್ತರಾದ ತಲವಾಟ ರಾಘವೇಂದ್ರ ಶಮಾ೯ರು ಬರೆದಿದ್ದರು, ಇದನ್ನು ಓದಿದಾಗ ನನಗೆ,ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಗೆ ಬಿಕ್ಷಾಟನೆಗೆ ಬರುತ್ತಿದ್ದ ಜಂಗಮರು ಇಂತಹದೇ ಓಂಕಾರ ಗಂಟೆ ತರುತ್ತಿದ್ದ ಬಗ್ಗೆ ಅದರಿಂದ ಓಂಕಾರ ಬರುಸುತ್ತಿದ್ದ ಮತ್ತು ಘಂಟೆ ಒಳಗೆ ಮಣಿಗಳು ಕಂಪನದಿಂದ ಕಿಣಿ ಕಿಣಿ ಅಂತ ಕುಣಿಯುವ ವಿಸ್ಮಯ ನೆನಪಾಯಿತು.
ಇದನ್ನುನೋಡಲು ಊರಿನ ಒ೦ದು ವಯಸ್ಸಿನ ಬಾಲಕರಾದ ನಾವೆಲ್ಲ ಇವರು ಊರು ದಾಟುವ ತನಕ ಇವರನ್ನ ಹಿಂಬಾಲಿಸುತ್ತಿದ್ದದ್ದು ನೆನಪಾಗಿ ಪ್ರತಿಕ್ರಿಯೆ ಬರೆದಿದ್ದೆ.
ಇದಕ್ಕೆ ಹೊಸ ಬಾಳೆ ಮಂಜುನಾಥರೂ ಪ್ರತಿಕ್ರಿಯಿಸಿ ಅವರ ಬಾಲ್ಯದಲ್ಲೂ ಈ ಓಂಕಾರದ ಘ೦ಟೆ ಜಂಗಮರನ್ನ ಹಿಂಬಾಲಿಸುತ್ತಿದ್ದನ್ನ ನೆನಪಿಸಿದರು ಮತ್ತು ನಾನು ಮರೆತಿದ್ದ ಈ ಜಂಗಮರ ಇನ್ನೊಂದು ವಿದ್ಯೆ ನೆನಪಿಸಿದರು,ಅದೇನೆಂದರೆ ಒಬ್ಬ ಗಂಟೆ ಜಂಗಮರು ಗೇಟಲ್ಲಿ ನಿಂತು ಹೀಗೆ ಬಾರಿಸುತ್ತಿದ್ದರೆ, ಇನ್ನೊಬ್ಬರು ಮನೆ ಬಾಗಿಲಿಗೆ ಬಂದು ಮನೆಯವರ ಹೆಸರು ಕೇಳಿ (ತಮ್ಮ ದೈಹಿಕ ಸಂಜ್ಞೆ ಮೂಲಕ ಗಂಟೆ ಜಂಗಮರಿಗೆ ಸಂದೇಶ ಕಳಿಸುತ್ತಿದ್ದರೆ ಅದನ್ನು ಅಥ೯ ಮಾಡಿಕೊಂಡ) ಗಂಟೆ ಜಂಗಮರು ಮನೆಯವರ ಹೆಸರು ಸರಿಯಾಗಿ ಹೇಳುತ್ತಿದ್ದರು ಇದು ದೊಡ್ಡ ಪವಾಡದಂತೆ ಹೆಚ್ಚು ಬಿಕ್ಷೆಗೆ ಅವರಿಗೆ ಸಿಗಲು ಕಾರಣ ಆಗುತ್ತಿತ್ತು ಮತ್ತು ಇಂತಹ ಘಂಟೆಯನ್ನ ಸಂಜೆ ಮಾಡಿ ವಿಡಿಯೋ ತೋರಿಸುತ್ತೇನೆ ಅಂತ ಹೇಳಿದವರು ನಿನ್ನೆ ರಾತ್ರಿ ವಿಡಿಯೋ ಕಳಿಸಿದ್ದಾರೆ,ಈ ಘಂಟೆ ನಾದಕ್ಕಾಗಿ ಬಾಲ್ಯದಲ್ಲಿ ನಾವೆಲ್ಲ ಮಾರುಹೋಗಿದ್ದು ನೆನಪಾಯಿತು.
#ಹೊಸಬಾಳೆ_ಮ೦ಜುನಾಥ_ಹೆಗಡೆಯವರು ತುಂಬಾ ಕ್ರಿಯಾಶೀಲರು, ಇವರ ಕುಟುಂಬ ಹಿನ್ನೆಲೆ ಕೂಡ.
ಇವರ ಕುಟುಂಬದ ಹಿರಿಯರೇ ರಾಮಚಂದ್ರಪುರ ಮಠದ ಐತಿಹಾಸಿಕ ಆನೆ ದಂತದ ಸಿಂಹಾಸನ ತಯಾರಿಸಿಕೊಟ್ಟವರು, ಇವರ ಕುಟುಂಬದವರೇ ಆರ್.ಎಸ್.ಎಸ್ ಪ್ರಮುಖರಾದ ದತ್ತಾತ್ರೇಯ ಹೊಸಬಾಳೆ ಅವರು.
ಮಂಜುನಾಥ ಹೆಗಡೆಯವರು ಕ್ರಿ.ಪೂ.600 ರಿಂದ ಇವತ್ತಿನ ವರೆಗಿನ ದೊಡ್ಡ ನಾಣ್ಯ ಸಂಗ್ರಹ ಮಾಡಿ ಅದನ್ನು ಸಂರಕ್ಷಿಸಿದ್ದಾರೆ ಹಾಗೆಯೇ ಪಶ್ಚಿಮ ಘಟ್ಟದ ಕೀಟಗಳ ಸಂಗ್ರಹ ಕೂಡ ಆಕಷ೯ಕವಾಗಿ ಮಾಡಿದ್ದಾರೆ ಇವುಗಳನ್ನು ಶಾಲಾ ವಿದ್ಯಾಥಿ೯ಗಳಿಗಾಗಿ ಪ್ರದಶ೯ನ ಕೂಡ ಮಾಡುತ್ತಾರೆ.
ಇವರು ಬರೆದು ಪ್ರಕಟಿಸಿರುವ #ಪಶ್ಚಿಮ_ಘಟ್ಟದ_ಜೀವವೈವಿಧ್ಯ ಎಂಬ ಪುಸ್ತಕ ಪಶ್ಚಿಮ ಘಟ್ಟದ ಪರಿಸರಾಸಕ್ತರಿಗೆ ಒಂದು ವಿಶ್ವಕೋಶ ಆಗಿದೆ.
ಅಪರೂಪದ ಪಶ್ಚಿಮ ಘಟ್ಟದ ಕಪ್ಪೆಗಳ ಬಗ್ಗೆ, ಪತಂಗಗಳ ಬಗ್ಗೆ,ಕೀಟಗಳ ಬಗ್ಗೆ, ಆಕಿ೯ಡ್ ಗಳ ಬಗ್ಗೆ ಸಂಶೋಧನೆ ಚಿತ್ರಿಕರಣ ಇವರ ದೊಡ್ಡ ಹವ್ಯಾಸ ಕೂಡ.
ಸದಾ ವೈಜ್ಞಾನಿಕ ದೃಷ್ಟಿಕೋನದಲ್ಲಿ ಸಂಶೋದನಾ ಕೆಲಸದಲ್ಲಿ ನೋಡಿ ಕಲಿ ಮಾಡಿ ಕಲಿ ಎಂಬಂತೆ ಕ್ರಿಯಾಶೀಲರಾಗಿದ್ದಾರೆ, ನಾನು ಅನೇಕ ವಿದ್ಯಾಥಿ೯ಗಳಿಗೆ ಇವರ ಪೇಸ್ ಬುಕ್ ಪೋಸ್ಟ್ ಓದಿ ಅನ್ನುತ್ತಿರುತ್ತೇನೆ ಅಲ್ಲಿ ನಿಮಗೆ ವಿಜ್ಞಾನದ ಅನೇಕ ವಿಶೇಷ ವಿಷಯಗಳು ಸಿಗುತ್ತದೆ.
ಕಳೆದ ವಷ೯ ಜನವರಿ 11 ರ ಪಾಶ೯ ಚಂದ್ರ ಗ್ರಹಣದ ರಾತ್ರಿ 10.37ರಿಂದ ಮದ್ಯರಾತ್ರಿ 2.42 ತನಕ ನಡೆದಾಗ ನೆಲದ ಮೇಲೆ ಒನಕೆ ನಿಲ್ಲುವ ವಿಸ್ಮಯದ ವಿಚಾರವನ್ನು ಸ್ವತಃ ಪ್ರಯೋಗ ಮಾಡಿ ಗ್ರಹಣದಲ್ಲಿ ಒನಕೆ ನೇರವಾಗಿ ನಿಲ್ಲುವುದನ್ನ ದಾಖಲಿಸಿದ್ದಾರೆ.
ಬಹು ಮುಖ ಪ್ರತಿಭೆಯ ಮಂಜುನಾಥ ಹೊಸ ಬಾಳೆ ನಮ್ಮ ಪಶ್ಚಿಮ ಘಟ್ಟದ ವಿಜ್ಞಾನಿಗಳು, ಇವರು ಒ0ದು ರೀತಿ ಮಲೆನಾಡಿನ ಅಕಿ೯ಮಿಡೀಸ್ ಇದ್ದಂತೆ.
Comments
Post a Comment