ಮರದ ಎಣ್ಣೆ ಗಾಣದಲ್ಲಿ ಶುದ್ಧ ಖಾದ್ಯದ ಎಣ್ಣೆ ತಯಾರಿಸಿ ಜನರಿಗೆ ತಲುಪಿಸುವ ಬೆಂಗಳೂರಿನ ಶ್ರೀ ಧಾತ್ರಿ ಆಯಿಲ್ & ನ್ಯಾಚುರಲ್ಸ್ ನ ಉತ್ಸಾಹಿ ತರಣ ಸಹೋದರರು
ಅರುಣ್ ಕುಮಾರ್ ಮತ್ತು ಶಶಿಕುಮಾರ್ ಸಹೋದರರು ಬೆಂಗಳೂರಿನ ರಾಮಸಂದ್ರದ ಸೂಲಿಕೆರೆ ಮುಖ್ಯ ರಸ್ತೆಯಲ್ಲಿ ಮರದ ಎಣ್ಣೆಗಾಣದಲ್ಲಿ ಶುದ್ಧ ಶೆಂಗಾ ಎಣ್ಣೆ, ಸೂಯ೯ಕಾಂತಿ ಎಣ್ಣೆ, ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ ತೆಗೆದು ರಾಜ್ಯದಾದ್ಯಂತ ಆಸಕ್ತ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.
ನಿನ್ನೆ ಇವರು ಕಳಿಸಿದ ಶೆಂಗಾ ಎಣ್ಣೆ ಮತ್ತು ಎಳ್ಳೆಣ್ಣೆ ಕೋರಿಯರ್ ನಲ್ಲಿ ಬಂತು ಬಹುಶಃ ನನ್ನ ಬುದ್ದಿ ಬಂದ ಮೇಲೆ ಇಂತಹ ರುಚಿಯ ಮತ್ತು ಇಂತಹ ನೈಸಗಿ೯ಕ ಸುವಾಸನೆಯ ಶೇಂಗಾ ಎಣ್ಣೆ ನಾನು ನೋಡಿಲ್ಲ ಮತ್ತು ತಿಂದಿಲ್ಲ ಇದರ ಬೆಲೆ ಲೀಟರ್ ಗೆ 350.
ಮಾರುಕಟ್ಟೆಯಲ್ಲಿ ರಿಪೈನ್ಡ್ ಶೇಂಗಾ ಎಣ್ಣೆಗೆ ಗರಿಷ್ಟ ರೂ 125 ಕ್ಕೆ ಸಿಗುವಾಗ ಇವರದ್ದೇನ್ರಿ? ಅಂತ ಪ್ರಶ್ನಿಸಬಹುದು, ಇದಕ್ಕೆ ಕಾರಣವೇನು ಅಂತ ನೋಡುತ್ತಾ ಹೋದರೆ ಅಸಲಿ ಚಿತ್ರಣ ಗೊತ್ತಾಗುತ್ತದೆ ಏನೆಂದರೆ 3kg ಶೇಂಗಾ ಬೀಜದಿಂದ ಒ0ದು ಲೀಟರ್ ಶೇಂಗಾ ಎಣ್ಣೆ ಬರುತ್ತದೆ, ಒಂದು ಕೇಜಿ ಶೇಂಗಾ ಬೀಜಕ್ಕೆ ರೂ 120 ಇದೆ, 3kg ಗೆ 360 ಆಗುತ್ತದೆ. ಪ್ರೊಡಕ್ಷನ್ ವೆಚ್ಚ ಪ್ಯಾಕಿಂಗ್ ಗೆ ಪ್ರತ್ಯೇಕ ವೆಚ್ಚ ಆಗುತ್ತದೆ ಆದರೆ ಮಾರುಕಟ್ಟೆಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ರೂ 250 ಕಡಿಮೆ ದರದಲ್ಲಿ ಹೇಗೆ ಮಾರಾಟ ಸಾಧ್ಯ?
ಪೆಟ್ರೋಲ್ ಉತ್ಪದನೆಯಲ್ಲಿ ಬರುವ ವೈಟ್ ಆಯಿಲ್ ಎಂಬ ಅಖಾದ್ಯ ಎಣ್ಣೆ ಸಮುದ್ರಕ್ಕೆ ಮೊದಲು ಚೆಲ್ಲುತ್ತಿದ್ದರು ಪರಿಸರವಾದದ ಕಾರಣದಿಂದ ಅದು ಈಗ ಸಾಧ್ಯವಿಲ್ಲ ಆದರೆ ಲೀಟರ್ ಗೆ 10 ರೂಪಾಯಿಗೆ ಸಿಗುವ ವೈಟ್ ಆಯಿಲ್ ಖರೀದಿಸಿ ಕಲಬೆರಕೆ ಮಾಡಿ ಮಾರುವುದರಿಂದ ಖಾದ್ಯ ಎಣ್ಣೆ ದಂದೆ ಲಾಭದಲ್ಲಿದೆ, ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗುತ್ತಿದೆ ಇದರಿಂದ ಮಾರಕ ರೋಗಗಳು ಬರುತ್ತಿದೆ ಎಂಬ ಅನೇಕ ವರದಿ ಇದೆ ಇದರ ಸತ್ಯಾಸತ್ಯತೆ ಏನೇ ಇರಬಹುದು ಆದರೆ ಇಷ್ಟು ಕಡಿಮೆ ದರದಲ್ಲಿ ಎಣ್ಣೆ ಮಾರಾಟ ಮಾತ್ರ ಅಸಾಧ್ಯವೇ ಸರಿ.
ಹಾಗಾಗಿ 15 ವರ್ಷ ಸ್ವಂತ ಸಾವಯವ ಮಳಿಗೆ ನಡೆಸಿದ ಲಾಭ ನಷ್ಟದ ಅನುಭವ ಇರುವ ಈ ಸಹೋದರರು ಈಗ ಸ್ವಂತ ಜಾಗ/ಮಳಿಗೆಯಲ್ಲಿ ಜನರ ಆರೋಗ್ಯಕ್ಕಾಗಿ ಮರದ ಎಣ್ಣೆ ಗಾಣದಲ್ಲಿ ಶುದ್ಧ ಎಣ್ಣೆ ಕಾಳು, ಕೊಬ್ಬರಿ ತಂದು ಎಣ್ಣೆ ತೆಗೆದು ಆಸಕ್ತರಿಗೆ ತಲುಪಿಸುತ್ತಿದ್ದಾರೆ.
Comments
Post a Comment