Skip to main content

ಸಿಸ್ಟರ್ ಪ್ರೇಮಾ ನಮ್ಮನ್ನೆಲ್ಲಾ ಬಾಲ್ಯದಲ್ಲಿ ಎತ್ತಾಡಿಸಿದ ಮತ್ತು ನನ್ನ ಅಜ್ಜಿ,ಅಪ್ಪ ಮತ್ತು ಅಮ್ಮರ ಒಡಾನಾಟದ ನೆನಪು ಮಾಡಿ ನಮ್ಮನ್ನೆಲ್ಲ ನೆನಪಿನ ಲೋಕಕ್ಕೆ ಒಯ್ದಿದ್ದವರು.

#ನಮ್ಮನ್ನೆಲ್ಲ_ಬಾಲ್ಯದಲ್ಲಿ_ಎತ್ತಾಡಿಸಿದ_ನನ್ನ_ತಂದೆ_ತಾಯಿಯ_ಒಡನಾಟದಲ್ಲಿದ್ದ
 #ಸಿಸ್ಟರ್_ಪ್ರೇಮಾ.

  1960 ರ ದಶಕದಲ್ಲಿ ಅಂದರೆ 60 ವರ್ಷದ ಹಿಂದೆ ನಮ್ಮ ಊರಲ್ಲಿ ಏನಿತ್ತು? ರಂಗನಾಥ ದೇವಸ್ಥಾನ ಮತ್ತು ಮಸೀದಿ ಕೆರೆ ಆಚೆಯ ಆನಂದಪುರಂ ನಲ್ಲಿ ಇದ್ದರೆ ಚಚ್೯ ಇದ್ದಿದ್ದು ನಮ್ಮ ಮನೆ ಸಮೀಪದ ಯಡೇಹಳ್ಳಿಯಲ್ಲಿ.
    ಶಿವಮೊಗ್ಗ ಸಾಗರ ರಸ್ತೆ, ತೀಥ೯ಹಳ್ಳಿ ರಸ್ತೆ ಮತ್ತು ಹೊಸ ನಗರ ರಸ್ತೆಗಳು ಡಾಂಬರೀಕರಣ ಆಗಿರಲಿಲ್ಲ, ಊರಲ್ಲಿ ಹುಲ್ಲಿನ ಮನೆಗಳೆ ಎಲ್ಲಾ .
     ಕ್ರೈಸ್ತ ದಮ೯ದ ಸುಶೀಲ್ ಬಾಯಮ್ಮ, ಆನಮೇರಿ ಬಾಯಮ್ಮ, ಗಾಡ೯ರಮ್ಮ, ಸಂತಾನ ಬಾಯಮ್ಮ ಹೀಗೆ ಇನ್ನೂ ಐದಾರು ಬಾಯಮ್ಮನವರಿದ್ದರು (ನನ್ನ ತಾಯಿಯ ಗೆಳತನದ ಪರೀದಿಯಲ್ಲಿದ್ದ ಇವರ ಹೆಸರು ಮಾತ್ರ ನೆನಪಿದೆ ಇವರ ಪತಿಯರ ಹೆಸರು ನೆನಪಿಲ್ಲ).
  ಸುಶೀಲ್ ಬಾಯಮ್ಮರ ಪುತ್ರಿ ಅವರ ದಮ೯ ಅನುಯಾಯಿ ಆಗಿ ಸಿಸ್ಟರ್ ಆದರು ಅವರಿಗೆ ಹೊಸ ಹೆಸರು ಸಿಸ್ಟರ್ ಪ್ರೇಮಾ ಅಂತಾಯಿತು ನಮ್ಮನ್ನೆಲ್ಲ ಎತ್ತಾಡಿಸಿದ ಹಿರಿಯ ಸಹೋದರಿ ಅಂತಹ ಸಿಸ್ಟರ್ ಪ್ರೇಮಾ ಊರು ತೊರೆದೇ 50 ವರ್ಷ ಆಯಿತು, ಅವರ ಸಂಸ್ಥೆಯ ಅನೇಕ ಕಡೆ  ಕಾಯ೯ನಿವ೯ಹಿಸಿದ್ದಾರೆ ಅಲ್ಲೆಲ್ಲಾ ಅಪಾರ ಶಿಷ್ಯ ವರ್ಗ ಹೊಂದಿದ್ದಾರೆ.
    ನಮ್ಮ ಊರಲ್ಲಿ ಅವರ ಸಹೋದರಿಯ ಮನೆ ಇದೆ, ಎರೆಡು ವರ್ಷದ ಹಿಂದೆ ಅವರು ಇಹಲೋಕ ತ್ಯಜಿಸಿದರು, ಅವರ ವರ್ಷದ ತಿಥಿಗೆ ಸಹೋದರಿಯ ಮಗ ರೇಮಂಡ್ ಡಿಸೋಜ ಒತ್ತಾಯದಿಂದ ಕರೆಸಿದ್ದ, ಅವರು ಊರಿಗೆ ಬಂದಾಗೆಲ್ಲ ನಮ್ಮ ಮನೆಗೆ ಬೇಟಿ ನೀಡದೇ ಹೋಗುವುದಿಲ್ಲ ಈ ಬಾರಿ ಬಂದಾಗಲೂ ಬಂದವರು ನಮ್ಮ ಅಜ್ಜಿ, ತಂದೆ, ತಾಯಿ ನಮ್ಮೆಲ್ಲರ ಬಾಲ್ಯ ನೆನಪು ಮಾಡಿದರು.
  ವೃದ್ದಾಪ್ಯ ತಲುಪಿರುವ ಸಿಸ್ಟರ್ ಪ್ರೇಮಾರಿಗೆ ಈಗ 80 ರ ವಯಸ್ಸು ಅವರ ಹೆಸರು ಪ್ರೇಮಾ ಹೆಸರಿನಂತೆ ಅವರ ಮನಸ್ಸು ಕೂಡ. 
  ಅವರು ಇಷ್ಟ ಪಡುವ ಪ್ರಾಗ್ರೆನ್ಸ್ ನ ರೂಂ ಪ್ರೆಶನರ್ ಅವರು ಬಂದಾಗೆಲ್ಲ ನೆನಪಿನ ಕಾಣಿಕೆ ಆಗಿ ನೀಡುವಂತೆ ಈ ಬಾರಿಯೂ ನೀಡಿದೆ.
   ಅಜ್ಜಿ ಅಪ್ಪ ಅಮ್ಮ ಈಗ ಇಲ್ಲ ಆದರೆ ಅವರ ನಮ್ಮ ಮದ್ಯ ಕೊಂಡಿ ಆಗಿ ಇರುವ ಕೆಲವೇ ಜನರು ಬೇಟಿ ಆದಾಗ ತೆರೆಯುವ ನೆನಪಿನ ಪುಸ್ತಕದ೦ತೆ ಆ ಕಾಲದ ನೆನಪುಗಳು ಕೇಳುವುದೇ ಒ0ದು ರೀತಿ ರೋಮಾಂಚನ ಅಲ್ಲವೆ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...