Skip to main content

Posts

Showing posts with the label My Padayatra and Bullock cart yatra

Blog number 1290. ಸಾಗರ ವಿದಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ 2003 ರಲ್ಲಿ ನಾನು ಮಾಡಿದ ಪಾದಯಾತ್ರೆ ಮತ್ತು 2013ರಲ್ಲಿ ಮಾಹಿತಿ ಹಕ್ಕು - ಲೋಕಾಯುಕ್ತದ ಜನ ಜಾಗೃತಿಗೆ ಮಾಡಿದ ಎತ್ತಿನಗಾಡಿ ಯಾತ್ರೆ.

#ಸಾಗರ_ಮತ್ತು_ಹೊಸನಗರ_ತಾಲ್ಲೂಕಿನಾದ್ಯಂತ_2012ರಲ್ಲಿ_ನಡೆದ_ಗ್ರಾಮಗಳ_ಅಭಿವೃದ್ಧಿಗಾಗಿ_ಜನಜಾಗೃತಿಯ #ಎತ್ತಿನ_ಗಾಡಿ_ಯಾತ್ರೆ.  ಸಾಗರ ತಾಲ್ಲೂಕಿನಾದ್ಯಂತ 13 ದಿನಗಳ ಪಾದಯಾತ್ರೆ (ಹಂದಿಗೋಡು ನಿಗೂಡ ಕಾಯಿಲೆ ಪರಿಹಾರ, ತುಮುರಿ ಸೇತುವೆ, ಜೋಗ್ ಜಲಪಾತ ಅಭಿವೃದ್ದಿ ಮತ್ತು ಶಿವಮೊಗ್ಗದಿಂದ ತಾಳಗುಪ್ಪ ವರೆಗೆ ಬ್ರಾಡ್ ಗೇಜ್ ರೈಲಿಗಾಗಿ) ನಡೆಸಿ ಹತ್ತು ವರ್ಷ ಆಗುವಾಗ ಇನ್ನೊಮ್ಮೆ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಎತ್ತಿನಗಾಡಿ ಯಾತ್ರೆ ನಡೆಸಿದ್ದು ಒಂದು ಅದ್ಬುತ ಅನುಭವ ನನ್ನದು.   ಕಾಗೋಡು ಹೋರಾಟದ ನೇತಾರರಾದ ಹೆಚ್.ಗಣಪತಿಯಪ್ಪರ ಆದೇಶದಂತೆ ಈ ಎತ್ತಿನಗಾಡಿ ಯಾತ್ರೆ ಆದರೂ ಅವರಿಗೆ ವಯೋ ಸಹಜ ಅನಾರೋಗ್ಯದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ.   ಆದರೆ ಅವರ ಒಂದು ಕಂಡೀಷನ್ ಪಾಲಿಸಲೇ ಬೇಕಾಗಿತ್ತು ಅದೇನೆಂದರೆ ನಮ್ಮ ಗಾಡಿ ಯಾತ್ರೆಯಲ್ಲಿ ಯಾರೂ ಗಾದಿ  ಇತ್ಯಾದಿ ಸುಖಾಸಿನ ಹಾಕುವಂತಿಲ್ಲ ಕೇವಲ ಚಾಪೆ ಅಥವ ಕಂಬಳಿ ಹಾಸಿ ಕುಳಿತುಕೊಳ್ಳಲು ಮಾತ್ರ ಅನುಮತಿ.    ಅದರಂತೆ ನಮ್ಮ ಎತ್ತಿನ ಗಾಡಿ ಯಾತ್ರೆ ಆರು ದಿನಗಳಲ್ಲಿ ಸುಮಾರು 320 ಕಿ.ಮಿ. ಸಾಗರ ತಾಲ್ಲೂಕಿನ ಆಚಾಪುರ ಗ್ರಾ.ಪಂ.ನ ಮುರುಘಾ ಮಠದಿಂದ ಪ್ರಾರಂಭ ಆಗಿ ಯಡೇಹಳ್ಳಿ, ಆನಂದಪುರ೦, ಗೌತಮಪುರ, ತ್ಯಾಗತಿ೯ ಮತ್ತು ಹಿರೇಬಿಲಗುಂಜಿ ಗ್ರಾಮ ಪಂಚಾಯತ್ ಹಾದು ವೀರಾಪುರ ಮಠದಲ್ಲಿ ತಂಗುವುದು.  ಎರಡನೇ ದಿನ ಅಡ್ಡೇರಿ ಮಾರ್ಗವಾಗಿ ಕಾಸ್ಪಾಡಿ, ಉಳ್ಳೂ...