#ನಾನು_ಎಂದರೆ.... #ಮಮತಾಸಾಗರ್_ವಾಚಿಸಿದ_ಕವನ #ಬೆಂಕಿ_ಬಿರುಗಾಳಿ_ಆಗಿದೆ #ಕವನ_ವಾಚನ_ಪೂರ್ಣವಾಗಿ_ನೋಡಿ #ಮಮತಾಸಾಗರ್_ಬಗ್ಗೆ_ನಾನು_ಬರೆದ_ಲೇಖನ ಇನ್ನೊಮ್ಮೆ #mamathasagar #Nanu #viral #poem #akhilakarnatakawriters 8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ವಾಚಿಸಿದ #ನಾನು ಎಂಬ ಶಿರ್ಷಿಕೆಯ ಕವನದ ಬಗ್ಗೆ ಪರ- ವಿರೋದದ ಚರ್ಚೆ ನಡೆಯುತ್ತಿದೆ. World Organisation of Writer ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಮಮತಾ ಜಿ. ಸಾಗರ್ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರತಿಷ್ಟಿತ ನಿರ್ಮಲಾ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದವರು ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಸಾಗರ ಪೇಟೆಯ ಮೊದಲ ಖಾಸಾಗಿ ಮಹಿಳಾ ವೈದ್ಯರು. ಖ್ಯಾತ ಸಾಹಿತಿ ಅಂಕಣಕಾರ #ಅರವಿಂದಚೊಕ್ಕಾಡಿ ಅವರು ಈ ಕವನ ವಾಚನದ ಬಗ್ಗೆ ಅವರ ಪೇಸ್ ಬುಕ್ ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ... ಕವಿತೆ ನಿಗೂಢವಾಗಿರಬೇಕು ನಿಜ. ಕವಿತೆಯ ಕುರಿತ ವಿಮರ್ಶೆಯೂ ನಿಗೂಢವೇ ಆಗಿದ್ದರೆ ವಿಮರ್ಶೆಯನ್ನೂ ಕವಿತೆಯೆಂದೇ ಪರಿಗಣಿಸಬೇಕಾದೀತು. ಕಡೆಗೂ ಚರ್ಚೆಯಾಗುತ್ತಿರುವ ಕವಿತೆಯನ್ನು ನೋಡಿದೆ. ಅದು ನವ್ಯ ಸ್ಕೂಲ್ ಆಫ್ ಥಾಟ್‌ನ ಕವಿತೆ. ಸಮಾಜದ ಮಡಿವಂತ ಮನಸ್ಥಿತಿಯನ್ನು ಒಡೆಯುವ ಹಾಗೆಯೇ ಬರೆದು ಹಾಕುವ ಹಾಗೆ ಬರೆಯಬೇಕೆಂಬುದು ನವ್ಯದ ಸಿದ್ಧಾಂತ. ಬಹುಶಃ ನವ್ಯರಲ್ಲಿ ಅಡಿಗರೊಬ್ಬರೇ ಸೋಷಿಯಲ್ ಡೀಸೆನ್ಸಿಯನ್ನು ಸಾಹಿತ್ಯ...