ಸೊರಬದಲ್ಲಿ ಬಂಗಾರಪ್ಪ ಮತ್ತು ಸಾಗರದಲ್ಲಿ ಕಾಗೋಡು ಗೆಲ್ಲಲಿ ಎಂಬ ಆಹಮದ್ ಅಲೀ ಖಾನ್ ಸಾಹೇಬರ ಚುನಾವಣಾ ತಂತ್ರಗಾರಿಕೆ ತಡೆದ ಮತ ವಿಭಜನೆ
#ಚುನಾವಣೆಯಲ್ಲಿ_ಕೆಲವು_ವಿಚಾರ_ತೆಗೆದುಕೊಳ್ಳುವ_ತಿರುವು. #ಸಾಗರ_ವಿದಾನಸಭಾ_ಕ್ಷೇತ್ರದಲ್ಲಿ_ಬಂಗಾರಪ್ಪ_ಸೋಲಿಸಲು_ಕಾಗೋಡು_ಗೆಲ್ಲಲು_ಕಾರಣವಾದ_ವಿಚಾರ #ಬಂಗಾರಪ್ಪರ_ಮತ_ವಿಭಜನೆ_ವಿಪಲವಾದ_ಖಾನ್_ಸಾಹೇಬರ_ತಂತ್ರ. ನಿನ್ನೆ ನಾಡಿನ ಖ್ಯಾತ ಅಂಕಣಗಾರರು ಪತ್ರಕರ್ತರೂ ಆದ ನಮ್ಮ ಸಾಗರದವರೆ ಆದ #ಆರ್_ಟಿ_ವಿಠಲಮೂರ್ತಿ ಬರೆದ ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಸಿದ್ದುನ್ಯಾಮಗೌಡರ ಎದರು ಸೋಲಲು ಕಾರಣವಾದ "ನಮ್ಮ ನೀರು ಕುಡಿಯದವರಿಗೆ ನಮ್ಮ ಓಟು ಯಾಕೆ " ಎಂಬ ಡಯಲಾಗು ಕಾರಣವಾದದ್ದು ಬರೆದಿದ್ದರು ಇದು ನಡೆದ ಸಂದರ್ಭ ಪ್ರಚಾರ ಸಭೆಯಲ್ಲಿ ಗಂಟಲು ನೋವಿಂದ ಬಳಲುತ್ತಿದ್ದ ಹೆಗಡೆ ಯವರು ನೀರಿಗಾಗಿ ಕೈ ಸನ್ನೆ ಮಾಡಿದಾಗ ಸ್ಥಳಿಯ ಕಾರ್ಯಕರ್ತ ತಂದ ತಣ್ಣನೆ ನೀರು ನಿರಾಕರಿಸಿ ತನ್ನ ಆಪ್ತನಿಂದ ಬಿಸಿ ನೀರು ಪಡೆದು ಕುಡಿದದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಆಯಿತು ಅಂತ ಇದನ್ನು ಓದಿದಾಗ ಸಾಗರ ವಿದಾನ ಸಭಾ ಕ್ಷೇತ್ರದಲ್ಲಿ ಕಾಗೋಡು ಮತ್ತು ಬಂಗಾರಪ್ಪ ಪರಸ್ಪರ ಸ್ಪರ್ದಿಸಿದಾಗ ಖಾನ್ ಸಾಹೇಬರ ಚಾಣಕ್ಯದಿಂದ ಮತ ವಿಭಜನೆಯ ಬಂಗಾರಪ್ಪರ ಯೋಜನೆ ಕಾರ್ಯಗತ ಆಗದೆ ಕಾಗೋಡು ಗೆದ್ದ ಸಂದರ್ಭ ನೆನಪಾಗಿ ಇಲ್ಲಿ ಬರೆಯುವಂತಾಯಿತು. #ಕಾಗೋಡು_ಬಂಗಾರಪ್ಪರ_ನೇರ_ಸ್ಪರ್ಧೆ ಒಮ್ಮೆ ಬಂಗಾರಪ್ಪ ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಸಾಗರ ವಿದಾನ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕಾಗೋಡು ಸೋಲುತ್ತಾರೆಂಬ ಭಯ ಉಂಟಾಗಿತ್ತ...