ಸೊರಬದಲ್ಲಿ ಬಂಗಾರಪ್ಪ ಮತ್ತು ಸಾಗರದಲ್ಲಿ ಕಾಗೋಡು ಗೆಲ್ಲಲಿ ಎಂಬ ಆಹಮದ್ ಅಲೀ ಖಾನ್ ಸಾಹೇಬರ ಚುನಾವಣಾ ತಂತ್ರಗಾರಿಕೆ ತಡೆದ ಮತ ವಿಭಜನೆ
#ಸಾಗರ_ವಿದಾನಸಭಾ_ಕ್ಷೇತ್ರದಲ್ಲಿ_ಬಂಗಾರಪ್ಪ_ಸೋಲಿಸಲು_ಕಾಗೋಡು_ಗೆಲ್ಲಲು_ಕಾರಣವಾದ_ವಿಚಾರ
#ಬಂಗಾರಪ್ಪರ_ಮತ_ವಿಭಜನೆ_ವಿಪಲವಾದ_ಖಾನ್_ಸಾಹೇಬರ_ತಂತ್ರ.
ನಿನ್ನೆ ನಾಡಿನ ಖ್ಯಾತ ಅಂಕಣಗಾರರು ಪತ್ರಕರ್ತರೂ ಆದ ನಮ್ಮ ಸಾಗರದವರೆ ಆದ #ಆರ್_ಟಿ_ವಿಠಲಮೂರ್ತಿ ಬರೆದ ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಸಿದ್ದುನ್ಯಾಮಗೌಡರ ಎದರು ಸೋಲಲು ಕಾರಣವಾದ "ನಮ್ಮ ನೀರು ಕುಡಿಯದವರಿಗೆ ನಮ್ಮ ಓಟು ಯಾಕೆ " ಎಂಬ ಡಯಲಾಗು ಕಾರಣವಾದದ್ದು ಬರೆದಿದ್ದರು ಇದು ನಡೆದ ಸಂದರ್ಭ ಪ್ರಚಾರ ಸಭೆಯಲ್ಲಿ ಗಂಟಲು ನೋವಿಂದ ಬಳಲುತ್ತಿದ್ದ ಹೆಗಡೆ ಯವರು ನೀರಿಗಾಗಿ ಕೈ ಸನ್ನೆ ಮಾಡಿದಾಗ ಸ್ಥಳಿಯ ಕಾರ್ಯಕರ್ತ ತಂದ ತಣ್ಣನೆ ನೀರು ನಿರಾಕರಿಸಿ ತನ್ನ ಆಪ್ತನಿಂದ ಬಿಸಿ ನೀರು ಪಡೆದು ಕುಡಿದದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಆಯಿತು ಅಂತ ಇದನ್ನು ಓದಿದಾಗ ಸಾಗರ ವಿದಾನ ಸಭಾ ಕ್ಷೇತ್ರದಲ್ಲಿ ಕಾಗೋಡು ಮತ್ತು ಬಂಗಾರಪ್ಪ ಪರಸ್ಪರ ಸ್ಪರ್ದಿಸಿದಾಗ ಖಾನ್ ಸಾಹೇಬರ ಚಾಣಕ್ಯದಿಂದ ಮತ ವಿಭಜನೆಯ ಬಂಗಾರಪ್ಪರ ಯೋಜನೆ ಕಾರ್ಯಗತ ಆಗದೆ ಕಾಗೋಡು ಗೆದ್ದ ಸಂದರ್ಭ ನೆನಪಾಗಿ ಇಲ್ಲಿ ಬರೆಯುವಂತಾಯಿತು.
#ಕಾಗೋಡು_ಬಂಗಾರಪ್ಪರ_ನೇರ_ಸ್ಪರ್ಧೆ
ಒಮ್ಮೆ ಬಂಗಾರಪ್ಪ ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಸಾಗರ ವಿದಾನ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕಾಗೋಡು ಸೋಲುತ್ತಾರೆಂಬ ಭಯ ಉಂಟಾಗಿತ್ತು.
ಬ್ರಾಹ್ಮಣ, ಲಿಂಗಾಯಿತ ಮುಖಂಡರು ಕಾಗೋಡರನ್ನು ಸೋಲಿಸಬೇಕೆಂದರೆ ಬಂಗಾರಪ್ಪನವರು ಸಾಗರದಲ್ಲಿ ಸ್ಪರ್ದಿಸಬೇಕು ಮೇಲ್ವರ್ಗದ ಮತಗಳು ಕ್ರೋಡಿಕರಣ ಆಗಿದೆ ಇನ್ನು ದೀವರ ಮತ ವಿಭಜನೆ ಆದರೆ ಕಾಗೋಡು ಸೋಲು ಗ್ಯಾರಂಟಿ ಎಂದು ಬಂಗಾರಪ್ಪರನ್ನು ಒಪ್ಪಿಸುತ್ತಾರೆ.
ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಲ್ಲಿ ಸ್ಪರ್ದಿಸಿದ ಬಂಗಾರಪ್ಪ ಇಡೀ ರಾಜ್ಯದಾದ್ಯಂತ ಮಿಂಚಿನ ಚುನಾವಣಾ ಪ್ರಚಾರ ಕೈಗೊಂಡಿದ್ದರಾದ್ದರಿಂದ ಸೊರಬದಲ್ಲಿ ಪ್ರಚಾರಕ್ಕೆ ಹೋಗಲೇ ಇಲ್ಲ ಅಲ್ಲಿ ಅವರ ನೀಲಿ ಕಣ್ಣಿನ ಹುಡುಗ ಶಿವಾನಂದಪ್ಪ ಸಂಪೂರ್ಣ ಜವಾಬ್ದಾರಿ ವಹಿಸಿ ಗೆಲ್ಲಿಸಿದ್ದರು ಆದರೆ ಸಾಗರದಲ್ಲಿ ಅವರ ಅಭಿಮಾನಿಗಳ ಒತ್ತಾಯಕ್ಕಾಗಿ ಗಾಂಧೀ ಮೈದಾನದಲ್ಲಿ ಒಂದು ಕಿಕ್ಕಿರಿದ ಬೃಹತ್ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ 23 ನಿಮಿಷ ಭಾಷಣ ಮಾಡಿದ್ದರು.
ಬಂಗಾರಪ್ಪ ಮತ್ತು ಕಾಗೋಡರ ಸ್ಟಜಾತಿ ದೀವರು ಇತ್ತಲಾಗೆ ಕಾಗೋಡು ಬೇಕು ಅತ್ತಲಾಗೆ ಬಂಗಾರಪ್ಪರ ಬಿಡುವಂತಿಲ್ಲ ಅಂತ ಸಂದಿಗ್ದದಲ್ಲಿದ್ದರು, ಬ್ರಾಹ್ಮಣ ಮತ್ತು ಲಿಂಗಾಯಿತರ ಜುಗಲ್ ಬಂದಿ ಕಾಗೋಡರ ಸೋಲಿಸಲು ಪಣ ತೊಟ್ಟಿದ್ದರಿಂದ ಮತ್ತು ಈ ಎರೆಡು ಮೇಲ್ವರ್ಗದ ಪ್ರಭಾವದಲ್ಲಿರುವ ಇತರೆ ಹಿಂದುಳಿದ ಮತ್ತು ದಲಿತ ಓಟುಗಳು ಬಂಗಾರಪ್ಪರಿಗೆ ಖಚಿತ ಎಂಬ ಗ್ರೌಂಡ್ ರಿಪೋರ್ಟ್ ಆಗಿತ್ತು.
ಅವರ ಮತಗಳು ವಿಭಜನೆ 100 ಕ್ಕೆ 100 ಶತಸಿದ್ಧ ಎಂಬ ಮಾತುಗಳು ಪೇಟೆ ಪ್ರದೇಶದಲ್ಲಿ ಚಲಾವಣೆ ಇದ್ದಿದ್ದರಿಂದ ಕಾಗೋಡರ ಸೋಲು ಖಚಿತ ಎಂಬ ಗಾಳಿಸುದ್ದಿ ಜೋರಾಗಿತ್ತು.
ಈ ಸಂದರ್ಭದಲ್ಲೇ ಕಾಂಗ್ರೇಸ್ ರಾಜಕಾರಣದ ಚಾಣಕ್ಯರೇ ಆಗಿದ್ದ ಸಾಗರದ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿದ್ದ ಆಹಮದ್ ಅಲೀ ಖಾನ್ ಸಾಹೇಬರು ಒ೦ದು ತಂತ್ರ ಮಾಡಿದರು. ಅದು ಚುನಾವಣಾ ಪಲಿತಾಂಶದ ಮೇಲೆ ಇಷ್ಟು ಪರಿಣಾಮ ಬೀರುತ್ತೆ ಅಂತ ನಾವು ನಂಬಿರಲಿಲ್ಲ.
ಖಾನ್ ಸಾಹೇಬರು ಆಪ್ತ ಮುಖಂಡರನ್ನು ಮಾತ್ರ ರಹಸ್ಯವಾಗಿ ಅವರ ಮನೇನಲ್ಲಿ ಕರೆದಿದ್ದರು ಅಲ್ಲಿ ಈ ಡಯಲಾಗ್ಗೆ ಹೆಚ್ಚು ಒತ್ತು ನೀಡಬೇಕಾಗಿ, ಯಾವ ಕಾರಣಕ್ಕೂ ಬಂಗಾರಪ್ಪರನ್ನು ತೆಗಳುವ ಮಾತು ನಿಮ್ಮ ಬಾಯಲ್ಲಿ ಬರಬಾರದು ಎಂಬ ಕಟ್ಟಪ್ಪಣೆ ಮಾಡಿದ್ದರು.
ಕಾಗೋಡು ಸ್ವತಃ ಇದನ್ನು ಹೇಳಲು ಸಾಧ್ಯವಿಲ್ಲ ನಾವು ನಾವೇ ಸೇರಿ ಇದನ್ನು ಜನರ ತಲೆಯಲ್ಲಿ ಹುಳ ಬಿಡಬೇಕು ಅಂತ ಅವರದ್ದೆ ಆದ ವೈಕರಿಯಲ್ಲಿ ವಿವರಿಸಿದ್ದರು.
ಆಗಿನ ಪ್ರಚಾರ ಕಾಯ೯ದ ಮುಂಚೂಣಿಯಲ್ಲಿದ್ದ ಬೀಮನೇರಿ, ತೀನಾ ಮತ್ತು ನಾವೆಲ್ಲ ಈ ಡಯಲಾಗ್ ಶುರು ಮಾಡಿದೆವು ಅದೇನೆಂದರೆ "ಸೊರಬದಲ್ಲಿ ಬಂಗಾರಪ್ಪ ಗೆದ್ದೇ ಗೆಲ್ಲುತ್ತಾರೆ ಸಾಗರದಲ್ಲಿ ಕಾಗೋಡು ಗೆಲ್ಲಲಿ ನಿಮ್ಮ ಜಾತಿಯ ಇಬ್ಬರನ್ನು ಗೆಲ್ಲಿಸುವ ಅವಕಾಶ " ಅಂತೆಲ್ಲ ಬಂಗಾರಪ್ಪರ ತೆಗಳದ ಈ ಡಯಲಾಗ್ ಪರಿಣಾಮಕಾರಿ ಆಗಿತ್ತು ಮತ್ತು ಕಾಗೋಡು ಗೆದ್ದರು.
ಆಹಮದ್ ಅಲೀ ಖಾನರ ಚಾಣಕ್ಯತನಕ್ಕೆ ಇದು ಒಂದು ಉದಾಹರಣೆ
23 ನಿಮಿಷ ಕ್ಷೇತ್ರದಲ್ಲಿ ಭಾಷಣ ಮಾಡಿದೆ 23 ಸಾವಿರ ಮತ ಬಂತು ಕಾಲಾವಕಾಶ ಇದ್ದಿದ್ದರೆ ಸೋಲಿಸಿ ಬಿಡುತ್ತಿದ್ದೆ ಎಂಬ ಸಮಾದಾನದ ಮಾತು ಬಂಗಾರಪ್ಪ ಸಾಗರದಲ್ಲಿ ಸೋತ ನಂತರ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಆಡಿದರು.
ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟ ನಂತರ ಶಿವಮೊಗ್ಗ ಲೋಕಸಬೆಗೆ ಪಕ್ಷೇತರರಾಗಿ ಸ್ಪರ್ದಿಸಿ ಗೆದ್ದ ನಂತರ ನಾವೆಲ್ಲ ಅವರ ಜೊತೆ ಸೇರಿ ಅಭಿನಂದನಾ ಸಭೆಗಾಗಿ ತುಮರಿ ಭಾಗಕ್ಕೆ ಹೋಗುವಾಗ ಬಂಗಾರಪ್ಪರ ಕಾರಿನಲ್ಲಿ ನಾನು ಮತ್ತು ಆ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಜಿ.ಕೃಷ್ಣಮೂರ್ತಿ ಇದ್ದೆವು ಆಗ ಈ ವಿಚಾರ ಬಂಗಾರಪ್ಪನವರ ಹತ್ತಿರ ಕಾರಿನಲ್ಲಿ ಉಲ್ಲೇಖಿಸಿದಾಗ ಅವರು ಹೇಳಿದ್ದು ಹೌದು ಇದರಿಂದ ದೀವರ ಜಾತಿ ಮತ ಒಡೆಯಲಿಲ್ಲ, ಮತ ವಿಭಜನೆ ಆಗುತ್ತೆ ಅಂತಲೇ ಇತರ ಜಾತಿ ಮತ 23 ಸಾವಿರ ಬಂದಿದ್ದು ಅಂದಿದ್ದರು.
Comments
Post a Comment