ಗೇರು ಹಣ್ಣಿನ ಸ್ಟಾದ ಉತ್ಕೃಷ್ಟ ಇದಕ್ಕೆ ಮೂಳೆ ಸವಿತ ತಡೆಯುವ ಶಕ್ತಿ ಇದೆ ವಿಟಮಿನ್ ರಿಚ್ ಇರುವ ಗೇರು ಹಣ್ಣು ಹೆಚ್ಚು ಹೆಚ್ಚು ತಿನ್ನಬಹುದು
#ಗೇರುಹಣ್ಣು_ಎಷ್ಟಾದರು_ತಿನ್ನಿ_ಸ್ಟಾದಿಷ್ಟ_ಆರೋಗ್ಯವರ್ಧಕ
#ಮೂಳೆ_ಸವಕಳಿ_ತಡೆಯುವ_ಶಕ್ತಿ_ಗೇರುಹಣ್ಣಿಗಿದೆ.
#ಗೇರುಹಣ್ಣಿನಿಂದ_ಸಂಪ್ರದಾಯಿಕ_ಪೆನ್ನಿ_ಎಂಬ_ಮದ್ಯ_ಗೋವಾದಲ್ಲಿ_ಪ್ರಸಿದ್ಧಿ
#ಹದಿನಾರನೇ_ಶತಮಾನದಲ್ಲಿ_ಪೋರ್ಚುಗೀಸರು_ಗೋವಾ_ಕರಾವಳಿ_ಭಾಗದಲ್ಲಿ_ಭೂಸವಕಳಿ_ತಡೆಯಲು_ತಂದ_ಗೇರು,
ಬಾಲ್ಯದಲ್ಲಿ ಗೇರುಮರಗಳನ್ನು ಹುಡುಕಿಕೊಂಡು ಹೋಗಿ ವಿವಿಧ ಬಣ್ಣದ ಗಾತ್ರದ ರುಚಿಯ ಗೇರು ಹಣ್ಣು ತಿನ್ನುತ್ತಿದ್ದ ನೆನಪು ಮರೆಯಲು ಸಾಧ್ಯವೇ ಇಲ್ಲ.
ಆಗೆಲ್ಲ ಗೇರು ಬೀಜ ಸಂಸ್ಕರಣೆ ಮಾರಾಟ ಈಗಿನ ರೀತಿ ಹೈಟೆಕ್ ಆಗಿರಲಿಲ್ಲ ಆದ್ದರಿಂದ ಗೇರು ಬೀಜಕ್ಕೆ ಅಂತಹ ಬೆಲೆ ಇರಲಿಲ್ಲ.
ಆಗೆಲ್ಲ ಗೇರು ಮರದ ಮಾಲಿಕರು ಮಕ್ಕಳಿಗೆ ತಿನ್ನುವಷ್ಟು ಗೇರು ಹಣ್ಣು ಕಿತ್ತು ತಿನ್ನಿ ಆದರೆ ಗೇರು ಬೀಜ ಮಾತ್ರ ಒಯ್ಯುವಂತಿಲ್ಲ ಎಂಬ ಕರಾರು ಇತ್ತು ಮಕ್ಕಳಿಗೂ ಗೇರು ಬೀಜ ಯಾಕೆ ಬೇಕು? ತಿನ್ನಲು ಗೇರು ಹಣ್ಣು ಸಾಕು ಅನ್ನುವ ಸಂತೃಪ್ತಿ.
ಗೇರು ಹಣ್ಣು ತಿನ್ನುವುದರಲ್ಲಿ ಕ್ರಮ ಇದೆ, ಗೇರು ಹಣ್ಣು ತೊಳೆದು ಅದರ ಮೇಲೆ ಉಪ್ಪು ಸಿಂಪಡಿಸಿ ಒಂದು ಗಂಟೆ ಬಿಡಬೇಕು ನಂತರ ಗೇರು ಹಣ್ಣಿನ ಮೇಲ್ಬಾಗ ಕತ್ತರಿಸಿ ತೆಗೆದು ಕೆಳಭಾಗ ತಿಂದರೆ ಮಾತ್ರ ಗೇರು ಹಣ್ಣು ಸ್ವಾದಿಷ್ಟ, ಗೇರು ಹಣ್ಣಿನ ಮೇಲ್ಬಾಗ ಗೇರಿನ ಸೊನೆಯ ಅಂಶದ ಕಟು ರುಚಿ ಇದು ಗೇರು ಹಣ್ಣಿನ ರುಚಿಯನ್ನು ಹಾಳು ಮಾಡುತ್ತದೆ.
ಈಗೆಲ್ಲ ವೆಂಗರಲಾ ಎಂಬ ಹೊಸ ತಳಿ ಹೆಚ್ಚು ಗೇರು ಬೀಜ ಇಳುವರಿ ನೀಡುತ್ತದೆ ಅನ್ನುತ್ತಾರೆ ಮತ್ತು ಗೇರು ಬೀಜದ ಬೆಲೆ ಕೂಡ ಹೆಚ್ಚು ಆದ್ದರಿಂದ ಗೇರು ಕೃಷಿ ಗಾತ್ರ ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ.
ನಾವು ಸುಮಾರು 5 ಎಕರೆ ದೇಶಿ ತಳಿಯ ಗೇರು ನಾಟಿ ಮಾಡಿ ಸುಮಾರು 20 ವರ್ಷ ಊರ ಮಕ್ಕಳಿಗೆ ಭರಪೂರ ಗೇರು ಹಣ್ಣಿನ ಸಮಾರಾಧನೆ ಮತ್ತು ಗೇರು ಬೀಜ ಅವರೇ ಕಿತ್ತು ಮಾರಿಕೊಂಡರು ಗೇರು ತೋಟದ ಮಾಲಿಕರಾದ ನಮಗೆ ವರ್ಷಕ್ಕೆ 5 ಎಕರೆಯಿಂದ 10 ಸಾವಿರವೂ ಆದಾಯ ಇಲ್ಲದಾಗ ಗೇರು ತೋಟ ತೆಗೆದು ರಬ್ಬರ್ ಹಾಕಬೇಕಾಯಿತು ಇದಕ್ಕೆ ಕಾರಣ ಒಂದು ಕಾಲದಲ್ಲಿ ಊರ ಹೊರಗಿದ್ದ ನಮ್ಮ ಗೇರು ತೋಟ ಊರು ಅಭಿವೃದ್ಧಿ ಆಗುತ್ತಾ ನಮ್ಮ ಗೇರು ತೋಟ ಊರ ಮಧ್ಯ ಬಂದಿದ್ದು.
ಗೋವಾದಲ್ಲಿ ಗೇರು ಹಣ್ಣು ಪರ್ಮೆಂಟೀಷನ್ ಮಾಡಿ ಭಟ್ಟಿ ಇಳಿಸಿ ಉರಾಕ್ ಎಂಬ ಮೊದಲ ಹಂತದ ಮಧ್ಯ ತಯಾರಿಸುತ್ತಾರೆ ನಂತರ ಈ ಉರಾಕ್ ಪುನಃ ಭಟ್ಟಿ ಇಳಿಸಿ ಅಂತಿಮವಾಗಿ ಬರುವ ಪೆನ್ನಿಗೆ ತುಂಬಾ ಬೇಡಿಕೆ ಇದೆ.
ಅಮೇರಿಕಾ ಮೂಲದ ಗೇರು 16ನೇ ಶತಮಾನದಲಿ ಪೋರ್ಚುಗೀಸರು ಗೋವಾ ಕರಾವಳಿಯಲ್ಲಿ ಮಣ್ಣಿನ ಸವಕಳಿ ತಡೆಯಲು ತಂದು ನಾಟಿ ಮಾಡಿದ ಈ ಗೇರು ದೇಶದಲ್ಲಿ ಹೆಚ್ಚು ಉದ್ಯೋಗ, ರಪ್ತುಗಳಿಗೆ ಕಾರಣ ಆಗಿದೆ.
Comments
Post a Comment