ಪಶ್ಚಿಮ ಘಟ್ಟದ ಮುರುಗನ ಹುಳಿ ಕೋಕಂ ಹೆಸರಲ್ಲಿ ನಾಡಿನಾದ್ಯಂತ ಪ್ರಸಿದ್ದಿ ಪಡೆದಿದೆ, ಇದರ ರುಚಿ ಅಪ್ಯಾಯಮಾನ ಮತ್ತು ಇದು ಆರೋಗ್ಯವರ್ಧಕ ಕೂಡ
ಮೊನ್ನೆ ಕಾರವಾರದ ಪೋಲಿಸ್ ಠಾಣೆ ರಸ್ತೆಗೆ ಹೋಗಿದ್ದೆ, ಈ ಮಾಗ೯ದಲ್ಲಿ ಹೋಗುವಾಗ ಇಲ್ಲಿನ ಬೇಟಿ ಖಾಯಂ ಏಕೆಂದರೆ ಇಲ್ಲಿ ಪಶ್ಚಿಮ ಘಟ್ಟದ ಅನೇಕ ಅಪರೂಪದ ಹಣ್ಣು, ಜಾಷದಿಗಳು, ಕಾಳು ಕಡಿ, ದೇಸಿ ತರಕಾರಿಗಳು ಮಾರಾಟಕ್ಕೆ ಸ್ಥಳಿಯ ಮಹಿಳೆಯರು ತಂದಿರುತ್ತಾರೆ, ಇದೇ ರೀತಿ ಅಂಕೋಲ, ಕುಮಟ ಮತ್ತು ಹೊನ್ನವರಗಳಲ್ಲೂ ನಿಧಿ೯ಷ್ಟ ಸ್ಥಳ ಮತ್ತು ಸಮಯದಲ್ಲಿ ಹಾಲಕ್ಕಿ ಮಹಿಳೆಯರು ಹಾಜರಿರುತ್ತಾರೆ.
ಮೊನ್ನೆ ಕಾರವಾರದಲ್ಲಿ ಜುಮ್ಮನಕಾಯಿ, ಬಿಡಿಸಿದ ಹಸಿ ಗೋಡOಬಿ ಬೀಜಗಳು, ನಾಟಿ ಹರಿವೆ ಸೊಪ್ಪಿನ ದಂಟುಗಳು, ಉಪ್ಪಿನ ಮಾವಿನ ಹುಳಿ, ವಿವಿದ ತಳಿಯ ಮಾವಿನ ಮಿಡಿ ಇವುಗಳ ಮಧ್ಯ ಮುರುಗನ ಹುಳಿ ಹಣ್ಣು ರಾರಾಜಿಸುತ್ತಿತ್ತು.
ಗೋವಾದಲ್ಲಿ ಕೋಕಂ, ದಕ್ಷಿಣ ಕನ್ನಡದಲ್ಲಿ ಪುನರ್ ಪುಳಿ, ಕೇರಳದಲ್ಲಿಮಲಬಾರ್ ಹುಣಸೆ ಅನ್ನುವ ಇದನ್ನ ಇಂಗ್ಲೀಷ್ನಲ್ಲಿ GARCINIA INDICA ಎನ್ನುತ್ತಾರೆ.
ಕೋಕಂ ಜೂಸ್, ಸೋಲ ಕಡಿ, ಮೀನು ಸಾರಿಗೆ ಇದನ್ನ ಹೆಚ್ಚು ಬಳಸುತ್ತಾರೆ ಆದರೆ ಪಶ್ಚಿಮ ಘಟ್ಟದ 7 ತಳಿಗಳು ಈಗ ವಿಶ್ವದಾದ್ಯಂತ ದೇಹ ಸೌಂದಯ೯ ವೃದ್ಧಿಗಾಗಿ, ತೂಕ ನಿಯಂತ್ರಿಸಲು ಹೆಚ್ಚು ಬಳಕೆ ಆಗುತ್ತಿದೆ.
ಅಂಕೋಲದ ಬಾಳೆಗುಳಿ ಕತ್ರಿಯಲ್ಲಿ ಮಿತ್ರ M.R.ಶೆಟ್ಟರ ಗಣ್ಯ ಕೆಮಿಕಲ್ಸ್ ನಲ್ಲಿ ಈ ಹಣ್ಣಿನಿಂದ ಬಿಳಿಯ ಬಣ್ಣದ Garcinia ಪೌಡರ್ ತಯಾರಾಗಿ ವಿದೇಶಕ್ಕೆ ರಪ್ತಾಗುತ್ತದೆ.
Comments
Post a Comment