ಕೋಕಂ ಸ್ಕೌಷ್ ಗೆ ತಂಪು ಸೋಡ ಬೆರೆಸಿದರೆ ಇದು ರಿಯಲ್ ಪ್ರೂಟ್ ದೇಶಿ ಕೋಕೋ ಕೋಲ ಆಗುತ್ತದೆ, ವಿಬಿನ್ನ ರುಚಿಗೆ ಬೇಕಾದರೆ ಉಪ್ಪು, ಕಾಳು ಮೆಣಸಿನ ಪುಡಿ ಸೇರಿಸಬಹುದು ಇದು ದೇಹಕ್ಕೆ ಮತ್ತು ದಾಹಕ್ಕೆ ಪರ್ಪೆಕ್ಟ್ ಡ್ರಿಂಕ್ಸ್ ಒಮ್ಮೆ ಪ್ರಯತ್ನಿಸಿ
#ಇದರ_ಜೊತೆ_ತಣ್ಣನೆಯ_ಸೋಡ_ಬೆರೆಸಿದರೆ_ಇದರಂತ_ಕೋಕಾಕೋಲಾ_ಬೇರೆ_ಇಲ್ಲ
#ಆರೋಗ್ಯಕರವಾದ_ಪುನರ್ಪುಳಿ_ಹಣ್ಣು_ದಾಹಕ್ಕೆ_ದೇಹಕ್ಕೆ_ಪರ್ಪೆಕ್ಟ್_ಡ್ರಿಂಕ್ಸ್ .
ಕೋಕಂ ಹೆಸರಿನ ಪುನರ್ಪುಳಿ ಹಣ್ಣು ಪಶ್ಚಿಮ ಘಟ್ಟದಲಿ ಸಿಗುವ ಬಹುಪಯೋಗಿ ಹಣ್ಣು, ಇದರಿಂದ ಹಣ್ಣಿನ ರಸ, ಹುಳಿ ಅಲ್ಲದೆ ಇದರ ಬೀಜದಿಂದ ತುಪ್ಪ ಕೂಡ ಮಾಡುತ್ತಾರೆ.
ಇದರಿಂದ ಸಂಸ್ಕರಿಸಿ ಪೌಡರ್ ಮಾಡಿ (Garcenia) ಇದನ್ನು ಸ್ಥೂಲಕಾಯ ನಿವಾರಿಸಲು ವಿದೇಶದಲ್ಲಿ ಬಳಸುತ್ತಾರೆ, ನಮ್ಮ ದೇಶದ ಡಯಟ್ ಮ್ಯಾಕ್ಡೋವೆಲ್ ವಿಸ್ಕಿಯಲ್ಲಿ ಇದನ್ನು ಮಿಶ್ರ ಮಾಡುತ್ತಿದ್ದಾರೆ.
ಕೋಕಂ ಸೇವನೆಯಿಂದ ಹೃದಯಕ್ಕೆ ಶಕ್ತಿ ನೀಡುತ್ತದೆ, ಚರ್ಮ ಸುಕ್ಕುಗಟ್ಟುವುದಿಲ್ಲ, ಕ್ಯಾನ್ಸರ್ ತಡೆಯುತ್ತದ, ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುತ್ತದೆ, ಆಂಕ್ಸಿಟಿ ಮತ್ತು ಡಿಪ್ರೆಶನ್ ನಿವಾರಿಸುತ್ತದೆ.
ಮೊನ್ನೆ ಶೃಂಗೇರಿಗೆ ಹೋಗಿದ್ದ ಮಗಳು ಅಳಿಯ ನನಗಾಗಿ ಶೃಂಗೇರಿಯ ಭಾರತೀ ಸ್ಟ್ರೀಟ್ ನ ಸ್ಥಳಿಯ ಸಿಂಹಾಸ್ ಸ್ಪೈಸಸ್ & ಹರ್ಬಲ್ ತಯಾರಿಸಿದ ಅತ್ಯುತ್ತಮವಾದ ಕೋಕಂ ಸ್ಕೌಷ್ ತಂದುಕೊಟ್ಟಿದ್ದರು ಇದು ಕೃತಕ ಬಣ್ಣ ಮತ್ತು ಪ್ಲೇವರ್ ಬಳಸದ ತಾಜಾ ಹಣ್ಣಿನ ರಸ ಮತ್ತು ಸಕ್ಕರೆ ಪಾಕದ ಮಿಶ್ರಣವಾದ್ದರಿಂದ ಪ್ರಿಸರ್ವೇಟಿವ್ ಕೂಡ ಬಳಸಿಲ್ಲ.
ಬಿರು ಬೇಸಿಗೆಗೆ ಕೋಕೋ ಕೋಲಾ ಇತ್ಯಾದಿಗೆ ಮೊರೆ ಹೋಗುವ ನಾವುಗಳು ಯಾಕೆ ನಮ್ಮ ಸ್ಪದೇಶಿ ಹಣ್ಣಿನ ರಸ ಬಳಸ ಬಾರದು (Real fruit juice).
ನಾನು ಈ ಕೋಕಂ ಸ್ಕೌಷ್ ನಿಂದ ಅನೇಕ ರೀತಿ ಜ್ಯೂಸ್ ಮಾಡಿ ರುಚಿ ನೋಡಿದೆ ಇದರಲ್ಲಿ ಒಂದು ಗ್ಲಾಸ್ ಗೆ ಎರೆಡು ಟೀ ಚಮಚ ಕೋಕಂ ಸ್ಕೌಷ್ ಹಾಕಿ ತಂಪು ಸೋಡ ಬೆರೆಸಿ ಕುಡಿದಾಗ ವಿದೇಶಿ ಕೃತಕ ಪಾನಿಯ ಕೋಕೋ ಕೋಲಾಗಿಂತ ಸಾವಿರ ಪಟ್ಟು ರುಚಿ - ಸ್ವಾದ ಮತ್ತು ಅನುಭವ ನೀಡಿತು.
ಇದಕ್ಕೆ ಸ್ವಲ್ಪ ಐಸ್, ಕಾಲು ಚಮಚ ಉಪ್ಪು ಅಥವ ಕಾಲು ಚಮಚ ಕಾಳು ಮೆಣಸಿನ ಪುಡಿ ಹೀಗೆ ತರಹಾವಾರಿ ನಿಮ್ಮದೇ ಹೊಸ ರೆಸಿಪಿಯೂ ಮಾಡಿ ನೋಡಿ.
Comments
Post a Comment