#ಪಸ್ಟ್_ಕ್ವಾಲಿಟಿ_ಕಡಿಮೆ_ದರದಲ್ಲಿ_ಮಾರಟ
#ಕೃಷಿ_ಆದಾರಿತ_ಕುಟುಂಬಗಳ_ಬೇಡಿಕೆಯ_ಎಲ್ಲಾ_ವಸ್ತುಗಳು_ಇಲ್ಲಿ_ಲಭ್ಯ.
#ಹೆಗ್ಗೋಡಿನ_ಕಾಕಲ್_ಸಹೋದರರು_ಗ್ರಾಮೀಣ_ಪ್ರದೇಶದ_ಸ್ವಯಂಉದ್ಯೋಗಿಗಳಿಗೆ_ರೋಲ್_ಮಾಡಲ್
ಸಿರ್ಸಿಯ ಪ್ರತಿಷ್ಠಿತ ತೋಟಗಾರಿಕಾ ಕೋ ಆಪರೇಟಿವ್ ಸೇಲ್ಸ್ ಸರ್ವಿಸ್ ಜನರ ಬಾಯಲ್ಲಿ TSS ಇದು ಅತ್ಯಂತ ಯಶಸ್ವಿ ಮತ್ತು ಬಳಕೆದಾರರ ನಂಬಿಕೆಯ ಬ್ರಾಂಡೆಡ್ ಸಂಸ್ಥೆ ಈ ಸಂಸ್ಥೆಯೊಡನೆ ಹೆಗ್ಗೋಡಿನ ಕಾಕಲ್ ಉಪ್ಪಿನಕಾಯಿ, ಕಾಕಲ್ ಪೆಟ್ರೋಲ್ ಬಂಕ್ ಮುಂತಾದ ಉದ್ಯಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ಕಾಕಲ್ ಸಹೋದರರ ಸಂಸ್ಥೆ ಹೆಗ್ಗೋಡಿನಲ್ಲಿ #ಕಾಕಲ್_TSS ಪ್ರಾ೦ಚೈಸಿ ಸೂಪರ್ ಮಾರ್ಕೆಟ್ ಕಳೆದ ವರ್ಷ ಪ್ರಾರಂಬಿಸಿದ್ದರು.
ಅಲ್ಲಿಗೆ ಹೋದವರು ಅಲ್ಲಿನ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಅದೇ ಅವರಣದಲ್ಲಿರುವ ಪೆಟ್ರೋಲ್ ಪಂಪ್, ಇವರದೇ ಕಾಕಲ್ ಸಂಸ್ಥೆಯ ಉಪ್ಪಿನಕಾಯಿ ಜೊತೆಗೆ ಈಗ ಆಗಿರುವ TSS ಸೂಪರ್ ಮಾರ್ಕೆಟ್ ತುಂಬಾ ಚೆನ್ನಾಗಿದೆ, ಪ್ರಶಾ೦ತ ವಾತಾವರಣದಲ್ಲಿದೆ ಅಂತೆಲ್ಲ ರೀವೀವ್ ಕೇಳಿದ್ದೆ ಆದರೆ ಅಲ್ಲಿಗೆ ಹೋಗಲಾಗಿರಲಿಲ್ಲ.
ಇವತ್ತು ಮಾರ್ಚ್ ಕೊನೆಯಲ್ಲಿ ಬೀಮನಕೋಣೆಯ ಪಿಎಲ್ ಡಿ ಬ್ಯಾಂಕಿಗೆ ಹೋಗುವ ಕೆಲಸ ಇತ್ತು ಅಲ್ಲಿಂದ ಕಾಕಲ್ ನವರ ಈ TSS ಸಂಯೋಜಿತ ಸೂಪರ್ ಮಾರ್ಕೆಟ್ ಗೆ ಹೋಗುವ ತೀರ್ಮಾನ ಮನೆಯಿಂದಲೇ ಮಾಡಿದ್ದೆ.
ಇಲ್ಲಿ ಏನಿದೆ ಏನಿಲ್ಲ ಕೃಷಿ ಆದಾರಿತ ಕುಟುಂಬಕ್ಕೆ ಬೇಕಾದ ಎಲ್ಲದೂ ಇದೆ, ಉತ್ಕೃಷ್ಟ ದರ್ಜೆಯ ದಿನಸಿ ವಸ್ತುಗಳು ಸ್ಪರ್ದಾತ್ಮಕ ದರದಲ್ಲಿ ಸಿಗುತ್ತದೆ, ಅಡುಗೆ ಮನೆ ಬಳಕೆಯ ಪಾತ್ರೆಗಳೂ ಇದೆ, ಕಾಂಡಿಮೆಂಟ್ಸ್, ಸೋಪುಗಳಿಂದ ನಮ್ಮ ಮಲೆನಾಡಿನ ಆಲೇಮನೆ ಬೆಲ್ಲದ ತನಕ ಲಭ್ಯವಿದೆ.
ಕೃಷಿ ಉಪಕರಣದ ಪ್ರತ್ಯೇಕ ಶೆಡ್ ನಲ್ಲಿ ಕೃಷಿಗೆ ಬೇಕಾದ ಆದುನಿಕ ಪರಿಕರ, ಪೈಪ್ ಗಳು, ಗೃಹ ನಿರ್ಮಾಣದ ಪ್ಲಂಬಿಂಗ್ ಪೈಪ್ ಗಳು, ಪಕ್ಕದ ಶೆಡ್ಡಿನಲ್ಲಿ ಪಶು ಆಹಾರಗಳು, ದನದ ಕೊಟ್ಟಿಗೆಗೆ ಹಾಸುವ ಮ್ಯಾಟ್ ಗಳು, ಅಡಿಕೆ ಸಂಸ್ಕರಣೆಗೆ ಬೇಕಾದ ಟಾರ್ಪಲ್ ಗಳು, ಅತ್ಯುತ್ತಮವಾದ ಗುದ್ದಲಿ, ಹಾರೆ, ಅಲ್ಯೂಮಿನಿಯಂ ಏಣಿಗಳು ಹೀಗೆ ಇನ್ನೂ ವಿವಿಧ ವಸ್ತುಗಳನ್ನು ಮಾರಟಕ್ಕೆ ಇಡಲು ಶೆಲ್ಪ್ ಗಳನ್ನು ವಿಸ್ತರಿಸುತ್ತಿದ್ದಾರೆ.
ನಾನು ಈಗ ಅಪರೂಪ ಆಗಿರುವ ಬೆತ್ತದ ಬುಟ್ಟಿ ಒಂದು, ಗಾರ್ಡ್ ನ್ ಪೈಪ್ ರೋಲ್, ಪೈಲ್ ಗಳು, ಪೆನ್ನು, ಸವಣೂರಿನ ಪ್ರಸಿದ್ಧ ಕಾರ, ಕಾಕಲ್ ಬ್ರಾಂಡಿನ ಮಾವಿನ ಮಂದನ ಗೊಜ್ಜು, ಬಿಸ್ಕತ್, ಟೂತ್ ಬ್ರಷ್ ಇತ್ಯಾದಿ ಹೀಗೆ 2050 ರೂಪಾಯಿಯ ಖರೀದಿಯೂ ಮಾಡಿದೆ.
ಪ್ರಕಾಶ್ ಕಾಕಲ್ ಮತ್ತು ಗಣೇಶ್ ಕಾಕಲ್ ಸಹೋದರರು ಬಂದು ಆತ್ಮೀಯವಾಗಿ ಸ್ವಾಗತಿಸಿ ಎಲ್ಲಾ ವಿಭಾಗ ತೋರಿಸಿದರು ನಮ್ಮ ಮಲ್ಲಿಕಾ ವೆಜ್ ಗೆ ಇವರದೇ ಬ್ರಾಂಡ್ ಆದ ಕಾಕಲ್ ಉಪ್ಪಿನಕಾಯಿ ಬಳಸುತ್ತಿದ್ದು ಇತ್ತೀಚಿಗ ಇವರ ಲೈನ್ ಸೇಲ್ ಬರುತ್ತಿಲ್ಲ ಅಂದ ತಕ್ಷಣ ಆ ಮಾರ್ಗದ ಸೇಲ್ಸ್ ವಾಹನದವರಿಗೆ ತಕ್ಷಣ ತಿಳಿಸಿ ಸರಿಪಡಿಸುವ ಕಾಳಜಿ ವ್ಯಕ್ತಪಡಿಸಿದರು.
ಕಾಕಲ್ ಸಹೋದರರು ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಮಾಡುವವರಿಗೆ ರೋಲ್ ಮಾಡೆಲ್ ಆಗಿದ್ದಾರೆ, ನಿಷ್ಠೆಯಿಂದ ಸತತ ಶ್ರಮದಿಂದ ಸಾದಿಸಬಹುದೆಂದು ಸಾದಿಸಿ ತೋರಿಸಿದ್ದಾರೆ, ಸ್ವಂತ ಊರಲ್ಲಿ ಅದೂ ಗ್ರಾಮೀಣ ಪ್ರದೇಶದಲ್ಲಿ ಈ ರೀತಿ ದೈಯ೯ ಮಾಡಿ ಉದ್ಯೋಗ ಮಾಡುವುದು ಅಷ್ಟು ಸುಲಭವಲ್ಲ.
Comments
Post a Comment