ಶೃಂಗೇಶರ ಹೋರಾಟ ಪ್ರಿಂಟರ್ಸ್ ಮತ್ತು ಜನಹೋರಾಟ ದಿನ ಪತ್ರಿಕೆಯ ನೂತನ ಕಛೇರಿ ಸ್ವಂತ ಕಟ್ಟಡದಲ್ಲಿ ನಾಳೆ (21- ಮಾರ್ಚ್ -2022) ಪ್ರಾರಂಭ ಆಗುವ ಶುಭ ಸಂದರ್ಭದಲ್ಲಿ ಶುಭ ಹಾರೈಸುತ್ತಿದ್ದೇನೆ.
#20ವರ್ಷದ_ನಂತರ_ಸ್ವಂತ_ಕಟ್ಟಡದಲ್ಲಿ_ಪ್ರಿಂಟಿಂಗ್_ಮತ್ತು_ಜನಹೋರಾಟ_ದಿನಪತ್ರಿಕೆ
#ಹೊಸ_ಕಟ್ಟಡದ_ಪ್ರಾರೊಂಬೋತ್ಸವಕ್ಕೆ_ಶುಭಹಾರೈಕೆಗಳು
ನಮ್ಮ ಸಂಸ್ಥೆಯ ಎಲ್ಲಾ ಪ್ರಿಂಟಿಂಗ್, ಬಿಲ್ ಬುಕ್, ರಶೀದಿ ಪುಸ್ತಕ, ವೋಚರ್ ಬುಕ್, ವಿಸಿಟಿಂಗ್ ಕಾರ್ಡು, ಲೆಟರ್ ಪ್ಯಾಡ್, ಟಾರೀಪ್ ಕಾರ್ಡ್, ಮೆನು ಕಾರ್ಡ್ ಹೀಗೆ ಉದ್ಯಮಕ್ಕೆ ಬೇಕಾಗುವ ಎಲ್ಲಾ ಪ್ರಿಂಟಿಂಗ್ ಅವಶ್ಯಕತೆಗಳನ್ನು ಪೂರೈಸುವವರು ಶಿವಮೊಗ್ಗದ #ಹೋರಾಟ_ಪ್ರಿಂಟರ್ಸ್ ಇದು ಶೃಂಗೇಶರದ್ದು ಈ ಸಂಸ್ಥೆ ಪ್ರಾರಂಬಿಸಿ ಎರೆಡು ದಶಕ ಆಗಿದೆ, ಇವರ ಗ್ರಾಹಕರಲ್ಲಿ ದೊಡ್ಡ ದೊಡ್ಡ ಉದ್ದಿಮೆದಾರರಿದ್ದಾರೆ ಕಾರಣ ಪ್ರಿಂಟಿಂಗ್ ಗುಣಮಟ್ಟದಲ್ಲಿ ಇವರು ಯಾವ ಕಾರಣಕ್ಕೂ ರಾಜಿ ಆಗದೆ ಗ್ರಾಹಕರ ಪರ ಇರುತ್ತಾರೆ.
ಗ್ರಾಹಕರ ಬೇಡಿಕೆ ಮತ್ತು ಸಮಯ ಪಾಲನೆಗೆ ಒತ್ತು ನೀಡಿ ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುವುದು, ಎರೆಡೆರುಡು ಸಾರಿ ಕರೆಕ್ಷನ್ ಮಾಡುವುದು ಮತ್ತು ಸರಿಯಾದ ಕ್ರಮ ಸಂಖ್ಯೆ ನಮೂದಿಸಿ ಅತ್ಯುತ್ತಮ ಪ್ಯಾಕಿಂಗ್ ನಲ್ಲಿ ನಮ್ಮ ಸ್ಥಳಕ್ಕೆ ಡೆಲೆವರಿ ನೀಡುವ ಇವರ ವ್ಯವಹಾರಿಕ ಶಿಸ್ತು ನನಗೆ ಮತ್ತು ನನ್ನಂತಹ ಉದ್ದಿಮೆದಾರರಿಗೆ ವ್ಯವಹಾರದಲ್ಲಿ ತುಂಬಾ ಅನುಕೂಲ.
2012ರಿಂದ ನಮ್ಮ ಪ್ರಿಂಟಿಂಗ್ ಬೇಡಿಕೆ ವಾರ್ಷಿಕ ಸಾವಿರದಲ್ಲಿ ಪ್ರಾರಂಭವಾಗಿ ಈಗ ಲಕ್ಷಗಳಿಗೆ ಮುಟ್ಟಿದೆ, ನನ್ನ ಒಂದು ಕಾದಂಬರಿ #ಬೆಸ್ತರರಾಣಿ_ಚಂಪಕ ಮತ್ತು ಸಣ್ಣ ಕಥಾ ಸಂಕಲನ #ಬಿಲಾಲಿಬಿಲ್ಲಿ_ಅಭ್ಯಂಜನ ಇವರ ಸಂಸ್ಥೆಯಲ್ಲೇ ಮುದ್ರಣ ಆಗಿದೆ.
ಇವರ ಸಂಪಾದಕತ್ವದ #ಜನಹೋರಾಟ ದಿನ ಪತ್ರಿಕೆ ನಿತ್ಯ ಬರುತ್ತಿದೆ.
Comments
Post a Comment