ನಮ್ಮ ಶಂಭುವಿಗೆ ಇವತ್ತು ಹುಟ್ಟುಹಬ್ಬ ಅಂದರೆ ಅವನಿಗೆ ಒಂದು ವರ್ಷ, ಅನೇಕ ಆತಂಕ ಮತ್ತು ಆಪ್ತರ ಸಲಹೆ ಮೇರೆಗೆ ಬೆಂಗಳೂರಿಂದ ಒಂದು ತಿಂಗಳ ಮರಿ ತಂದು 11 ತಿಂಗಳ ಪಾಲನೆಯಲ್ಲಿ ಕುಟುಂಬದ ಸದಸ್ಯನಾಗಿ ಇಷ್ಟು ಪ್ರೀತಿಯ ಶಂಭು ಅಗುತ್ತಾನೆ ಅಂತ ನಿರೀಕ್ಷೆ ಮಾಡಿರಲಿಲ್ಲ.
ಮೈಸೂರಿನ ಅಶ್ವದಳದ ವೈದ್ಯರಾದ #ಡಾಕ್ಟರ್_ಪೂರ್ಣಾನಂದರು ರಾಟ್ ವೀಲರ್ ಪೆಟ್ ಅನಿಮಲ್ ಅಂತ ನಾನು ಹೇಳುವುದಿಲ್ಲ ಅಂದಿದ್ದರು ಅದಕ್ಕೆ ಕಾರಣ ಇದನ್ನು ಸರಿಯಾಗಿ ಟ್ರೈನಿಂಗ್ ನೀಡದಿದ್ದರೆ ಸಾಕಿದವರಿಗೆ ಸುದಾರಿಸಲು ಸಾಧ್ಯವಾಗುವುದಿಲ್ಲ ಮತ್ತು ಅನೇಕ ಅವಘಡಗಳು ಮಾಡುತ್ತದೆ.
ಇವನನ್ನು ತಾಳ್ಮೆಯಿಂದ ಸರಿಯಾದ ತರಬೇತಿ ನೀಡಿದ ನನ್ನ ಮಗನ ಶ್ರಮಕ್ಕೆ ಪ್ರತಿಫಲ ಇದು.
ಸಣ್ಣ ಮರಿ ಆಗಿದ್ದಾಗ ಇವನಿಗೆ ಹೆದರಿಸುತ್ತಿದ್ದ ನಮ್ಮ ಬೇರೆ ನಾಯಿಗಳು ಈಗ ಇವನ ದೇಹದ ಆಕೃತಿ ಮತ್ತು ಶಕ್ತಿ ನೋಡಿ ಶರಣಾಗಿದ್ದಾರೆ.
ಚಿತ್ರದಲ್ಲಿರುವ ಹಸ್ಕಿ ಬೀಮನಿಗೆ ಐದು ತಿಂಗಳ ಪ್ರಾಯ, ನನ್ನ ಮಡಿಲಲ್ಲಿರುವ ಮಿನಿಯೇಚರ್ ಪಿ೦ಕ್ಚರ್ ಬ್ರೌನಿ (ಕೆಂಚಪ್ಪ) ಮಾತ್ರಇವರೆಲ್ಲರಿಗೆ ದೊಡ್ಡಣ್ಣ ಅಂದರೆ ಅವನಿಗೆ ಒಂದೂವರೆ ವರ್ಷ ಪ್ರಾಯ ಈಗ.
Comments
Post a Comment